More

    ಬಳ್ಳಾರಿ ಉತ್ಸವ ಲಾಂಛನದಲ್ಲಿಲ್ಲ ಕಂಪ್ಲಿ ಕುರುಹು

    ಕಂಪ್ಲಿ: ಇದೇ ಮೊದಲ ಬಾರಿಗೆ ಜ.21 ಮತ್ತು 22ರಂದು ಜರುಗುವ ಬಳ್ಳಾರಿ ಉತ್ಸವದ ಲಾಂಛನದಲ್ಲಿ ಕಂಪ್ಲಿಯ ಯಾವುದೇ ಕುರುಹು ಸ್ಥಾನಪಡೆದುಕೊಂಡಿಲ್ಲ. ಜಿಲ್ಲೆಯ ಗಡಿ ಮತ್ತು ದ್ವಾರಬಾಗಿಲು ಕೇಂದ್ರವಾದ ಪಟ್ಟಣವನ್ನು ಉತ್ಸವದಲ್ಲಿ ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

    ಬಳ್ಳಾರಿಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಜ.4ರಂದು ಬಳ್ಳಾರಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದ್ದರು. ಲಾಂಛನದಲ್ಲಿ ಕಂಪ್ಲಿ ಹೊರತು ಉಳಿದ ನಾಲ್ಕು ತಾಲೂಕುಗಳ ಅಸ್ಮಿತೆಯ ಕುರುಹುಗಳಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

    ಲಾಂಛನದಲ್ಲಿ ಕಂಪ್ಲಿ ಕೋಟೆ, ಐತಿಹಾಸಿಕ ಸೋಮಪ್ಪ, ತುಂಗಭದ್ರಾ ನದಿ ಸೇತುವೆ, ಕೋಟೆ ಪಂಪಾಪತಿ, ತತ್ವಪದಕಾರ ಹೇರೂರು ವಿರುಪನಗೌಡ, ಶ್ರೀಶವಿಠ್ಠಲ ಹೀಗೆ ನಾನಾ ಕುರುಹುಗಳಿದ್ದು ಯಾವುದಾರು ಒಂದನ್ನು ಸೇರಿಸಬೇಕಿತ್ತು. ಕಂಪ್ಲಿ ಉತ್ಸವ ಪ್ರತ್ಯೇಕ ನಡೆಸುವ ನೆಪದಲ್ಲಿ ಐತಿಹಾಸಿಕ ಹಿನ್ನೆಲೆಯ ಪಟ್ಟಣವನ್ನು ಕಡೆಗಣಿಸಿರುವುದು, ಅಖಂಡ ಬಳ್ಳಾರಿ ಉತ್ಸವವಾಗದೆ ಕಂಪ್ಲಿ ಹೊರತುಪಡಿಸಿದ ಉತ್ಸವವಾಗಿದೆ. ಇದರಲ್ಲಿ ಕಂಪ್ಲಿಯವರಿಗೇನು ಕೆಲಸ ಎಂಬ ಪ್ರಶ್ನೆಯೂ ಕಾಡುತ್ತಿದೆ?. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇನ್ನೂ ಕಾಲಾವಕಾಶವಿದ್ದು, ಉತ್ಸವದ ಲಾಂಛನದಲ್ಲಿ ಕಂಪ್ಲಿಯ ಆಸ್ಮಿತೆ ಸಾರುವ ಕುರುಹು ಅಳವಡಿಸಿ, ಬಳ್ಳಾರಿ ಉತ್ಸವದ ಸಮಗ್ರತೆ ಕಾಪಾಡಬೇಕು ಎಂದು ಪ್ರಮುಖರಾದ ಷಣ್ಮುಖಪ್ಪ ಚಿತ್ರಗಾರ್, ಪಿ.ಬ್ರಹ್ಮಯ್ಯ, ಬೂದಗುಂಪಿ ಅಂಬಣ್ಣ, ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಬೂದಗುಂಪಿ ಹುಸೇನ್‌ಸಾಬ್, ಸಂತೋಷ್ ಕೊಟ್ರಪ್ಪ ಸೋಗಿ ಮತ್ತಿತರರು ಒತ್ತಾಯಿಸಿದ್ದಾರೆ.

    ಕಂಪ್ಲಿ ಉತ್ಸವವನ್ನು ಫೆ.12ರಂದು ಪ್ರತ್ಯೇಕ ನಡೆಸುವ ಕಾರಣ ಬಳ್ಳಾರಿ ಉತ್ಸವದ ಲಾಂಛನದಲ್ಲಿ ಅದರ ಕುರುಹು ಅಳವಡಿಸಿಲ್ಲ. ಕಂಪ್ಲಿ ಉತ್ಸವದ ಲಾಂಛನದಲ್ಲಿ ಪಟ್ಟಣದ ಅಸ್ಮಿತೆಯ ಕುರುಹುಗಳನ್ನು ಸೇರಿಸಲಾಗುವುದು.
    | ಸಿದ್ಧಲಿಂಗೇಶ್ ಕೆ.ರಂಗಣ್ಣನವರ, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ
    ಕೋಟ್..
    ಬಳ್ಳಾರಿ ಉತ್ಸವದಲ್ಲಿ ಕಂಪ್ಲಿ ಕ್ಷೇತ್ರದಿಂದ ಕುರುಗೋಡು ದೊಡ್ಡ ಬಸವೇಶ್ವರನನ್ನು ಪ್ರತಿನಿಧಿಸಲಾಗಿದೆ. ಆದರೂ ಕಂಪ್ಲಿಯ ಐತಿಹಾಸಿಕ ಕುರುಹು ಒಂದನ್ನು ಉತ್ಸವದ ಲಾಂಛನದಲ್ಲಿ ಅಳವಡಿಸುವಂತೆ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ.
    | ಜೆ.ಎನ್.ಗಣೇಶ್, ಶಾಸಕರು, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts