More

    ಐಸಿಸಿ ಹಾಲ್ ಆಫ್​ ಫೇಮ್‌ಗೆ ಕಾಲಿಸ್, ಅಬ್ಬಾಸ್, ಸ್ಥಳೇಕರ್

    ದುಬೈ: ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜಾಕ್ಸ್ ಕಾಲಿಸ್, ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಜಹೀರ್ ಅಬ್ಬಾಸ್ ಮತ್ತು ಭಾರತ ಮೂಲದ ಆಸೀಸ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್ ಭಾನುವಾರ ಐಸಿಸಿ ಹಾಲ್ ಆಫ್​ ಫೇಮ್‌ಗೆ ಸೇರ್ಪಡೆಗೊಂಡಿದ್ದಾರೆ. ಕೋವಿಡ್-19 ಹಾವಳಿಯ ನಡುವೆ ಐಸಿಸಿ, ವರ್ಚುವಲ್ ಸಮಾರಂಭದ ಮೂಲಕ ಈ ಗೌರವ ಪ್ರದಾನ ಮಾಡಿದೆ.

    ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿರುವ ಜಾಕ್ಸ್ ಕಾಲಿಸ್ 1995ರಿಂದ 2014ರ ನಡುವೆ 166 ಟೆಸ್ಟ್, 328 ಏಕದಿನ ಮತ್ತು 25 ಟಿ20 ಪಂದ್ಯಗಳನ್ನು ಆಡಿದ್ದಾರೆ. 44 ವರ್ಷದ ಅವರು ಟೆಸ್ಟ್ ಮತ್ತು ಏಕದಿನದಲ್ಲಿ ಕ್ರಮವಾಗಿ 13,289 ಮತ್ತು 11,579 ರನ್ ಬಾರಿಸಿದ್ದು, ಕ್ರಮವಾಗಿ 292 ಮತ್ತು 273 ವಿಕೆಟ್ ಕಬಳಿಸಿದ್ದಾರೆ.

    ಪುಣೆ ಮೂಲದ ಸ್ಥಳೇಕರ್ ಆಸೀಸ್ ಪರ 8 ಟೆಸ್ಟ್, 125 ಏಕದಿನ ಮತ್ತು 54 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಾವಿರ ರನ್ ಮತ್ತು 100 ವಿಕೆಟ್ ಸಾಧನೆ ಮಾಡಿದ ಮೊದಲ ಮಹಿಳೆ ಎನಿಸಿದ್ದಾರೆ. 2005, 2013ರ ಏಕದಿನ ಮತ್ತು 2010, 2012ರ ಟಿ20 ವಿಶ್ವಕಪ್ ವಿಜೇತೆಯೂ ಆಗಿದ್ದಾರೆ.

    ಇದನ್ನೂ ಓದಿ: ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ನಿಶ್ಚಿತಾರ್ಥ?

    ‘ಏಷ್ಯನ್ ಬ್ರಾಡ್ಮನ್’ ಖ್ಯಾತಿಯ ಜಹೀರ್ ಅಬ್ಬಾಸ್, ಆಸೀಸ್ ಪರ 78 ಟೆಸ್ಟ್ ಮತ್ತು 62 ಏಕದಿನ ಪಂದ್ಯವಾಡಿದ್ದು, ಕ್ರಮವಾಗಿ 5,062 ಮತ್ತು 2,572 ರನ್ ಬಾರಿಸಿದ್ದಾರೆ. ಎರಡೂ ಪ್ರಕಾರದಲ್ಲಿ ಅವರು 40ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ. ‘ಜಹೀರ್ ಅಬ್ಬಾಸ್ ಈ ಗೌರವಕ್ಕೆ ಎಲ್ಲರಿಗಿಂತ ಅರ್ಹರು. ಅವರಿಗೆ ಈ ಗೌರವ ಲಭಿಸಲು ಇಷ್ಟು ತಡ ಯಾಕಾಯಿತು ಗೊತ್ತಿಲ್ಲ. ಅವರು ಬ್ಯಾಟಿಂಗ್ ಮಾಡುವಾಗ, ನಮ್ಮ ತಂಡ ಸಂಕಷ್ಟಕ್ಕೆ ಸಿಲುಕಿದರೂ, ಅವರ ಆಟವನ್ನು ಆನಂದಿಸುತ್ತೇವೆ. ದೊಡ್ಡ ಇನಿಂಗ್ಸ್ ಆಡುವ ಅವರ ಹಂಬಲ ಅಮೋಘವಾದುದು’ ಎಂದು ವರ್ಚುವಲ್ ಸಮಾರಂಭದಲ್ಲಿ ಹಾಜರಿದ್ದ ಭಾರತದ ದಿಗ್ಗಜ ಸುನೀಲ್ ಗಾವಸ್ಕರ್ ಹೇಳಿದ್ದಾರೆ.

    ಅರ್ಜುನ ಪ್ರಶಸ್ತಿ ಪಡೆಯಲು ಯಾವ ಪದಕ ಗೆಲ್ಲಬೇಕು, ಪ್ರಧಾನಿಗೆ ಸಾಕ್ಷಿ ಮಲಿಕ್ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts