More

    ಕಾಳಿಕಾಂಬ ಅಮನೂರು ತಾಯಿ ವಾರ್ಷಿಕೋತ್ಸವ ಸಂಪನ್ನ

    ನಾಪೋಕ್ಲು: ಸಮೀಪದ ಪಾಲೂರು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಕಾಳಿಕಾಂಬ ಅಮನೂರು ತಾಯಿಯ ವಾರ್ಷಿಕೋತ್ಸವ ಶುಕ್ರವಾರ ಸಂಪನ್ನಗೊಂಡಿತು.

    ವಾರ್ಷಿಕೋತ್ಸವ ಅಂಗವಾಗಿ ಮುಂಜಾನೆ ವಾದ್ಯಗೋಷ್ಠಿಯೊಂದಿಗೆ ಭಕ್ತರು ಮೆರವಣಿಗೆ ತೆರಳಿ ದೇವರ ಜಳಕ ಕೈಗೊಂಡರು. ಬಳಿಕ ದೇವಾಲಯದಲ್ಲಿ ಮಹಾಪೂಜೆ ನಡೆಯಿತು. ಪ್ರಸಾದ ವಿತರಣೆ ನಂತರ ಇತರ ದೇವರ ಸೇವೆಗಳು ನಡೆಯಿತು.

    ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆ, ಕಾಣಿಕೆ ಒಪ್ಪಿಸಿ ಉತ್ಸವದಲ್ಲಿ ಪಾಲ್ಗೊಂಡರು. ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು, ತಕ್ಕ ಮುಖ್ಯಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts