More

    ಸುಡುವ ಹುಗ್ಗಿ ಹೊರ ತೆಗೆದ ಪೂಜಾರಿ

    ಕಲಾದಗಿ: ಅದೊಂದು ಬೃಹತ್ ಪಾತ್ರೆ. ಅದರಲ್ಲಿ ಕುದಿಯುತ್ತಿರುವ ಹುಗ್ಗಿ. ಪಲ್ಲಕ್ಕಿ ಹೊತ್ತ ಪೂಜಾರಿ ಇಲ್ಲವೇ ಭಕ್ತರು ಕುದಿಯುತ್ತಿರುವ ಹುಗ್ಗಿಯಲ್ಲಿ ಐದು ಬಾರಿ ಕೈಯನ್ನು ಹಾಕಿ ಹುಗ್ಗಿಯನ್ನು ತೆಗೆಯುತ್ತಾರೆ..! ಒಬ್ಬರಲ್ಲ, ಇಬ್ಬರಲ್ಲ ಪಲ್ಲಕ್ಕಿ ಹೊತ್ತು ತಂದಿದ್ದ ಹತ್ತಾರು ಪೂಜಾರರು, ಭಕ್ತರು ಅಳುಕಿಲ್ಲದೆ ಹೀಗೆ ಮಾಡುತ್ತ ನೋಡುಗರನ್ನು ಬೆರಗಾಗಿಸಿದರು..!

    ಇಂತಹ ಅಪರೂಪದ ಪ್ರಕ್ರಿಯೆ ಸಮೀಪದ ಗೋವಿಂದಕೊಪ್ಪ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ನಡೆಯಿತು. ಅನೇಕ ವರ್ಷಗಳಿಂದಲೂ ಇಂತಹದೊಂದು ಅಚ್ಚರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತ ಬಂದಿದೆ.

    ವಾಡಿಕೆಯಂತೆ ವಿವಿಧ ಕಡೆಗಳಿಂದ ದೇವರ ಪಲ್ಲಕ್ಕಿಯನ್ನು ಹೊತ್ತು ಬಂದಿದ್ದ ಪೂಜಾರರು, ಭಕ್ತರು ಕುದಿಯುವ ಹುಗ್ಗಿಯ ಬೃಹತ್ ಪಾತ್ರೆಯಲ್ಲಿ ಕೈಯನ್ನು ಹಾಕಿ ನೈವೇದ್ಯಕ್ಕೆಂದು ಅದರಿಂದ ಹುಗ್ಗಿಯನ್ನು ಐದು ಬಾರಿ ತೆಗೆದರೂ ಕೈ ಒಂದಿಷ್ಟು ಸುಡದಿರುವ ಅಚ್ಚರಿ, ದೈವದ ಮೇಲಿನ ನಂಬಿಕೆಗೆ ಜಾತ್ರೆ ಸಾಕ್ಷಿಯಾಯಿತು. ಮಹಿಳೆಯೋರ್ವಳು ಏಕಾಏಕಿ ಪಾತ್ರೆಗೆ ಕೈ ಹಾಕಿ ಸುಡು ಸುಡುವ ಹುಗ್ಗಿಯನ್ನು ತೆಗೆದಿದ್ದು ಈ ಬಾರಿಯ ವಿಶೇಷವಾಗಿದೆ.
    ಇದಕ್ಕೂ ಮೊದಲು ಡೊಳ್ಳಿನ ವಾಲಗದೊಂದಿಗೆ ಶಿವಾಪುರ, ಮಂಟೂರು, ಅನವಾಲ, ಸೊಪಡ್ಲಾ, ಬೂದಿಹಾಳ ಮುಂತಾದ ಊರುಗಳಿಂದ ಬಂದಿದ್ದ ಇಪ್ಪತ್ತಕ್ಕೂ ಅಧಿಕ ಪಲ್ಲಕ್ಕಿಗಳ ಮಹೋತ್ಸವ ಗ್ರಾಮದಲ್ಲಿ ಸಂಭ್ರಮದಿಂದ ನೆರವೇರಿತು.

    ಇಂದು ಸಂಪನ್ನ
    ಫೆ. 24 ರಂದು ಬೆಳಗ್ಗೆ 9 ಗಂಟೆಯಿಂದ ಭಂಡಾರ ಒಡೆಯುವ ಕಾರ್ಯಕ್ರಮದೊಂದಿಗೆ ಮೂರು ದಿನಗಳಿಂದ ನಡೆಯುತ್ತಿದ್ದ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts