More

    ಕುರಿ ದೊಡ್ಡಿಯಲ್ಲಿ 6 ಕೋಟಿ ರೂ. ಗಾಂಜಾ ಪತ್ತೆ ಪ್ರಕರಣದಲ್ಲಿ ಪಿಎಸ್​ಐ ಸೇರಿ ನಾಲ್ವರಿಗೆ ಶಾಕ್​!

    ಕಲಬುರಗಿ: ಕುರಿ ದೊಡ್ಡಿಯಲ್ಲಿ 6 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಕಾಳಗಿ ಪಿಎಸ್ಐ ಬಸವರಾಜ ಚಿತಕೋಟೆ, ಎಎಸ್ಐ ನೀಲಕಂಠಪ್ಪ ಮತ್ತು ಬೀಟ್ ಪೇದೆಗಳಾದ ಶರಣಪ್ಪ ಮತ್ತು ಅನಿಲ್ ಭಂಡಾರಿಯನ್ನು ಅಮಾನತು ಮಾಡಲಾಗಿದೆ. ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್​ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ‘ಡ್ರಗ್ಸ್ ದಂಧೆಯಲ್ಲಿ ಜಮೀರ್ ಅಹ್ಮದ್ ಪಾತ್ರ ನೂರರಷ್ಟಿದೆ’, ಆದ್ರೂ ಅರೆಸ್ಟ್​ ಮಾಡ್ತಿಲ್ಲ ಏಕೆ?

    ಕಾಳಗಿ ಬಳಿಯ ಲಕ್ಷ್ಮಣನಾಯಕ್ ತಾಂಡಾದ ಕುರಿದೊಡ್ಡಿಯೊಂದರಲ್ಲಿ ಗಾಂಜಾ ಪತ್ತೆಯಾಗಿತ್ತು. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಈ ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

    ಒರಿಸ್ಸಾ ಮತ್ತಿತರ ಕಡೆಗಳಿಂದ ಗಾಂಜಾ ತರಲಾಗುತ್ತಿತ್ತು. ರಾಜ್ಯದ ವಿವಿಧೆಡೆಗೆ ಇಲ್ಲಿಂದಲೆ ಗಾಂಜಾ ಪೂರೈಕೆ ಮಾಡಲಾಗುತ್ತಿತ್ತು. ಇದೇ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದು, ಪೊಲೀಸರ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ನಾಲ್ವರನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    video/ ಕೋಳಿ ಶೆಡ್​ಗೆ ಒಳಹೊಕ್ಕ ಪೊಲೀಸರೇ ದಂಗಾದ್ರು… 1,352 ಕೆಜಿ ಗಾಂಜಾ ರಹಸ್ಯ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts