More

    ಚೌತಿ ನೆಪ ಮಾತ್ರ.. ಇವರು ಖರ್ಗೆಯನ್ನು ಭೇಟಿ ಮಾಡಲಿಕ್ಕೆಂದು ಬಂದ ವಿಷಯವೇ ಬೇರೆ..!

    ಬೆಂಗಳೂರು: ಕಲಬುರಗಿಯಿಂದ ನಗರಸಭೆಯ ಹತ್ತಕ್ಕೂ ಹೆಚ್ಚು ಸದಸ್ಯರು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಗಣೇಶ ಚತುರ್ಥಿಯ ಸಲುವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಲು ಬಂದಿದ್ದೇವೆ ಎಂಬುದಾಗಿ ಇವರು ಹೇಳಿಕೊಂಡಿದ್ದರೂ ಬಂದಿರುವ ಅಸಲಿ ವಿಷಯವೇ ಬೇರೆ ಇದೆ.

    ಅಷ್ಟಕ್ಕೂ ಇವರು ಖರ್ಗೆಯವರನ್ನೇ ಖುದ್ದಾಗಿ ಭೇಟಿ ಮಾಡಲಿಕ್ಕೆ ಪ್ರಮುಖ ಕಾರಣ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಂಬುದು ಕೂಡ ನಿಜ. ತಮ್ಮ ಬೇಡಿಕೆ ಕುರಿತಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಸರಿಯಾಗಿ ಸ್ಪಂದಿಸಿಲ್ಲ ಎಂಬ ಕಾರಣದಿಂದಾಗಿ ಇವರು ಇದೀಗ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿದ್ದಾರೆ.

    ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

    ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಅದಕ್ಕಾಗಿ ಜೆಡಿಎಸ್‌ ಜೊತೆ ಕೈಜೋಡಿಸಲು ಸ್ಥಳೀಯ ಮುಖಂಡರು ಮುಂದಾಗಿದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಸ್ಪಂದಿಸದ್ದರಿಂದ ಇವರು ಖರ್ಗೆಯವರ ಮೊರೆ ಹೋಗಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ ಕಾಂಗ್ರೆಸ್ನ ಈ  ಪಾಲಿಕೆ ಸದಸ್ಯರು, ಮೇಯರ್ ಚುನಾವಣೆಗೆ ನೋಟಿಫಿಕೇಷನ್ ಹೊರಡಿಸಿದರೆ ತಂತ್ರಗಾರಿಕೆ ಹೆಣೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಪಾಲಿಕೆಯ ಜೆಡಿಎಸ್‌ ಸದಸ್ಯರು ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತಾರೆ ಎಂದು ವಿಶ್ವಾಸದಲ್ಲಿರುವ ಈ ಕಾಂಗ್ರೆಸ್‌ ಸದಸ್ಯರು, ಈ ಸಲುವಾಗಿ ಜೆಡಿಎಸ್ ವರಿಷ್ಠರ ಮನವೊಲಿಸುವಂತೆ ಖರ್ಗೆಗೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಖರ್ಗೆ ಈಗಾಗಲೇ ದೇವೇಗೌಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

    ಇಲ್ಲಿ ಗಣೇಶನಿಗೆ ಇಲಿಗಳೇ ಅರ್ಪಣೆ; ಬೆಳೆ ರಕ್ಷಣೆಗಾಗಿ ಹೀಗೊಂದು ವಿಚಿತ್ರ ಮೊರೆ..!

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts