More

    ಜೆಸಿಬಿ ಸದ್ದಿನೊಂದಿಗೆ ಒತ್ತುವರಿ ತೆರವು

    ಕಕ್ಕೇರಾ: ಪಟ್ಟಣದ ಬನದೊಡ್ಡಿ ರಸ್ತೆಯ ಎರಡೂ ಬದಿ ಒತ್ತುವರಿ ಮಾಡಿಕೊಂಡಿದ್ದ ಅಂಗಡಿ, ಮನೆ ಮತ್ತು ಡಬ್ಬಾ ಅಂಗಡಿಗಳನ್ನು ಪೊಲೀಸರ ಸಹಕಾರದೊಂದಿಗೆ ಪುರಸಭೆ ಶುಕ್ರವಾರ ಮಧ್ಯಾಹ್ನ ಜೆಸಿಬಿ ಮೂಲಕ ತೆರವುಗೊಳಿಸಿತು.

    ನಗರೋತ್ಥಾನದಡಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಪುರಸಭೆ ಈ ಮಾರ್ಗದ ಎಲ್ಲ ಮನೆ, ಅಂಗಡಿ ಮಾಲೀಕರು ಹಾಗೂ ಡಬ್ಬಾ ಅಂಗಡಿಯವರಿಗೆ ಮೂರು ಬಾರಿ ನೋಟಿಸ್ ನೀಡಿದ್ದರೂ ಕ್ಯಾರೆ ಎನ್ನದ್ದರಿಂದ ಜಿಲ್ಲಾಡಳಿತದ ಸೂಚನೆಯಂತೆ ಒಂದು ಬದಿಯ ರಸ್ತೆ ಅತಿಕ್ರಮಿಸಿದ್ದ ಜಾಗವನ್ನು ತೆರವುಗೊಳಿಸಲಾಯಿತು.

    ನಗರೋತ್ಥಾನದಡಿ ಬನದೊಡ್ಡಿ ಮಾರ್ಗದ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಬೇಕಿದ್ದರಿಂದ ಅಂಗಡಿ, ಮನೆ ಹಾಗೂ ಡಬ್ಬಾ ಅಂಗಡಿ ಮಾಲೀಕರಿಗೆ ಆರು ಮೀಟರ್ ಹಿಂದಕ್ಕೆ ಸರಿಯುವಂತೆ ಸೂಚನೆ ನೀಡಿದ್ದರೂ ಸ್ಪಂದಿಸದ್ದರಿಂದ ತೆರವು ಕರ‍್ಯಾಚರಣೆ ಮಾಡಲಾಗುತ್ತಿದೆ. ಇಂದು ಒಂದು ಬದಿಯಲ್ಲಿ ಕರ‍್ಯಾಚರಣೆ ನಡೆಸಿದ್ದು, ಕತ್ತಲಾಗಿದ್ದರಿಂದ ಶನಿವಾರ ಮತ್ತು ಭಾನುವಾರ ಮತ್ತೆ ತೆರವು ಕೆಲಸ ಮುಂದುವರಿಯಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ತಿಳಿಸಿದ್ದಾರೆ.

    ಏಕಾಏಕಿ ಜೆಸಿಬಿ ಸದ್ದು ಮಾಡುತ್ತಿದ್ದಂತೆ ಎಲ್ಲರೂ ತಮ್ಮ ವಸ್ತುಗಳನ್ನು ತೆಗೆಯುವ ಮತ್ತು ಸರಿಪಡಿಸುವ ಕೆಲಸಕ್ಕೆ ಮುಂದಾದರು. ಈ ವೇಳೆ ಭಜಂತ್ರಿ ಕಾಲನಿಯಲ್ಲಿ ವಿದ್ಯುತ್ ಕಂಬದ ತಂತಿ ಬೇರ್ಪಡಿಸುವಾಗ ಕಂಬವೊಂದು ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಮಗು ಬಚಾವ್ ಆಗಿದೆ.

    ಪುರಸಭೆ ಜೆಇ ರೇಣುಕಮ್ಮ, ಪಿಎಸ್‌ಐ ಸುರೇಶ ಭಾವಿಮನಿ, ಪೊಲೀಸರಾದ ಸುಭಾಶ್ವಂದ್ರ, ವಿನಾಯಕ, ಬಸವರಾಜ, ಸೋಮನಾಥ, ಇಮಾಮಸಾಬ್, ಪವಿತ್ರಾ, ರಾಘವೇಂದ್ರ, ಪುರಸಭೆ ಸಿಬ್ಬಂದಿ ಜೆಟ್ಟೆಪ್ಪ ಬಾಚಾಳ, ಕೃಷ್ಣಾ ರಾಠೋಡ್, ನಿಂಗಪ್ಪ, ಮರೆಪ್ಪ ಸುರಪುರ, ರಾಮಕೃಷ್ಣ, ಅಮರೇಶ ಬೋಯಿ, ಮೌನೇಶ ಗುರಿಕಾರ, ಭೀಮಣ್ಣ ದೊರೆ, ಕಮಲಾಕ್ಷಿ ಕಾತರಕಿ, ಸೋಮುನಾಯ್ಕ್ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts