More

    ಸಂಭ್ರಮ ಸಡಗರದಿಂದ ಕಾಕಿ ಗಲ್ಲಿ ಗಣಪತಿ ಶೋಭಾಯಾತ್ರೆ

    ರಾಣೆಬೆನ್ನೂರ: ಇಲ್ಲಿಯ ಕಾಕಿ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ್ದ ಮಹಾ ಗಣಪತಿಯ ಶೋಭಾಯಾತ್ರೆ ಭಾನುವಾರ ನಗರದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
    ಮಾಜಿ ಶಾಸಕ ಅರುಣಕುಮಾರ ಪೂಜಾರ ಶೋಭಾಯಾತ್ರೆಗೆ ಚಾಲನೆ ನೀಡಿದರು. ಕಾಕಿ ಗಲ್ಲಿಯಿಂದ ಹೊರಟ ಮೆರವಣಿಗೆಯು ನಾಡಿಗೇರ ಓಣಿ, ಹಳೆ ಸರ್ಕಾರಿ ಆಸ್ಪತ್ರೆ, ಕುರುಬಗೇರಿ ಕ್ರಾಸ್, ದರ್ಗಾ ಸರ್ಕಲ್, ನೆಹರು ಮಾರುಕಟ್ಟೆ, ಎಂ.ಜಿ. ರಸ್ತೆ, ಪೋಸ್ಟ್ ಸರ್ಕಲ್, ಮೇಡ್ಲೇರಿ ಕ್ರಾಸ್, ಬಸ್ ನಿಲ್ದಾಣ, ರಾಜರಾಜೇಶ್ವರಿ ನಗರ ಹಾಗೂ ಹಳೇ ಪಿ.ಬಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
    ವೀರಗಾಸೆ, ಪುರವಂತರ ಸಮಾಳ ಮೇಳ, ಡೊಳ್ಳು, ಭಜನೆ, ಜನಪದ ನೃತ್ಯ, ಕೇರಳದ ವಾದ್ಯ, ಹನುಮಾನ್ ವೇಷಭೂಷಣಗಳು ಸೇರಿ ಮುಂತಾದ ಕಲಾ ತಂಡಗಳು ಗಮನ ಸೆಳೆಯಿತು. ಯುವಕ-ಯುವತಿಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಯುವಕ, ಯುವತಿಯರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
    ಗಣಪತಿ ಸಮಿತಿ ಅಧ್ಯಕ್ಷ ಲಿಂಗರಾಜ ಬೂದನೂರು, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಕಾಕಿ, ಮಂಜುನಾಥ ಕಾಟಿ, ಶ್ರೀನಿವಾಸ ಕಾಕಿ, ಪ್ರಭುಲಿಂಗಪ್ಪ ಹಲಗೇರಿ, ಅಭಿಲಾಷ ಬ್ಯಾಡಗಿ, ನಾಗರಾಜ ಕಾಕಿ, ಮಂಜುನಾಥ ಅಜ್ಜೇವಡಿ, ಜಗದೀಶ ಬಣಗಾರ, ಉಮೇಶ ಕಾಕಿ, ರೂಪಾ ಕಾಕಿ, ಶ್ರೀಧರ ಅಮಾಸಿ, ವೆಂಕಟೇಶ ಸಾಲಗೇರಿ, ವಿಷ್ಟು ಸುರಹೊನ್ನೆ ಸೇರಿ ನೂರಾರು ಜನ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts