More

    ದೊಂಬೆಯಲ್ಲಿ ಮುಂದುವರಿದ ಕಡಲ್ಕೊರೆತ

    ಬೈಂದೂರು: ಪಡುವರಿ ಗ್ರಾಮದ ದೊಂಬೆ ವ್ಯಾಪ್ತಿಯಲ್ಲಿ ಕಡಲ್ಕೊರೆತ ಮುಂದುವರಿದಿದೆ. ಒಂದು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಈ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ವಾರದ ಬಳಿಕ ಸ್ಥಳ ಪರಿಶೀಲಿಸಿ ಸರ್ಕಾರಕ್ಕೆ ವರದಿ ಕಳುಹಿಸಿ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಸ್ಥಳ ಪರಿಶೀಲಿಸಿದ ಜನಪ್ರತಿನಿಧಿಗಳು ಮತ್ತೆ ಈ ಭಾಗಕ್ಕೆ ಸುಳಿದಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ದೊಂಬೆ ಪರಿಸರದಲ್ಲಿ ಪ್ರತಿವರ್ಷ ಕಡಲ್ಕೊರೆತ ಉಂಟಾಗುತ್ತಿದೆ. ಮಳೆಗಾಲ ಮಾತ್ರವಲ್ಲದೆ ಅಮಾವಾಸ್ಯೆ, ಹುಣ್ಣಿಮೆ ಸಂದರ್ಭವೂ ಸಮುದ್ರದ ನೀರಿನ ಮಟ್ಟ ಏರುವುದರಿಂದ ಕಡಲ್ಕೊರೆತ ಉಂಟಾಗುತ್ತಿದೆ. ಕಳೆದ ತಿಂಗಳು ಸಮುದ್ರ ದಂಡೆಯಲ್ಲಿರುವ ಪುರಾತನ ಗುಡಿಯೊಂದು ಕೊಚ್ಚಿಕೊಂಡು ಹೋಗಿತ್ತು.
    ಮರಳು ತೆಗೆದಿರುವುದು ಒಂದೆಡೆಯಾದರೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳದಿರುವುದು ಊರಿಗೆ ಅಪಾಯ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಶೀಘ್ರ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದವರು ಪ್ರಯತ್ನಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ವಿಠಲ ಖಾರ್ವಿ ದೊಂಬೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts