More

    ಕೆ-ಟಿಇಟಿಯ ಕೀ ಉತ್ತರ ಪ್ರಕಟ : ಆಕ್ಷೇಪಣೆಗಳಿದ್ದರೆ ಅ.21ರೊಳಗೆ ಸಲ್ಲಿಸಲು ಅವಕಾಶ

    ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ನಡೆಸಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆ-ಟಿಇಟಿ)ಯ ಉತ್ತರ ಪತ್ರಿಕೆಗಳ ಕೀ ಉತ್ತರವನ್ನು ಪ್ರಕಟಗೊಳಿಸಿದೆ.

    ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ತಮ್ಮ ಅರ್ಜಿ ಅಥವಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕವನ್ನು ನಮೂದಿಸಿ ಇಲಾಖೆಯ ವೆಬ್​ಸೈಟ್ http://www.schooleducation.kar.nic.in/ ನಲ್ಲಿ ನೀಡಿರುವ ಲಿಂಕ್ ಬಳಸಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ತಾವು ಬರೆದಿರುವ ಉತ್ತರವನ್ನು ಕೀ ಉತ್ತರದೊಂದಿಗೆ ಪರಿಶೀಲಿಸಿಕೊಂಡು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆನ್​ಲೈನ್ ಮೂಲಕವೇ ಅ.21ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.

    ಇದನ್ನೂ ಓದಿ: ನ್ಯಾಯಮೂರ್ತಿ ರಮಣ ವಿರುದ್ಧ ಆಂಧ್ರ ಸಿಎಂ ದೂರು; ಸುಪ್ರೀಂಕೋರ್ಟ್ ಮುಂದಿರುವ ಆಯ್ಕೆಗಳೇನು?

    ಜರ್ನಲ್ಸ್, ಮ್ಯಾಗಜೀನ್​ಗಳು, ಸ್ವತಂತ್ರ ಪ್ರಕಾಶಕರುಗಳ ಪುಸ್ತಕ, ಗೈಡ್​ಗಳು, ಇಂಟರ್​ನೆಟ್ ಮೂಲಗಳು, ವಿಡಿಯೋ ಅಥವಾ ದಿನಪತ್ರಿಕೆಗಳ ಲೇಖನವನ್ನು ಆಧಾರವಾಗಿ ಪರಿಗಣಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ. ಆಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆನ್​ಲೈನ್ ಮೂಲಕ ಅಪ್​ಲೋಡ್ ಮಾಡಬೇಕು. ಸೂಕ್ತ ಆಧಾರವಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.

    10 ರಸ್ತೆ ಅಭಿವೃದ್ಧಿ ಟೆಂಡರ್ ಸ್ಥಗಿತಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts