More

    ಕರೊನಾ ಹತೋಟಿಗೆ ಬರದಿದ್ದರೆ ಕಠಿಣ ಕ್ರಮ ಅನಿವಾರ್ಯ: ಕೆ ಸುಧಾಕರ್​

    ಬೆಂಗಳೂರು: ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಮಾಡಿರೋ ಬಗ್ಗೆ ಗಮನ ಸೆಳೆದು, ಮನವಿ ಮಾಡಿದ ಕಾರಣ ಸಿಎಂ ಮೂರು ದಿನ ಮಾತ್ರ ವಿನಾಯಿತಿ ನೀಡಿದ್ದಾರೆ. ಜಿಮ್‌ಗೂ ಕೂಡ ಅವಕಾಶ ನೀಡಲಾಗಿದೆ. ನಿಯಂತ್ರಣ ಇದ್ದರೆ ಮಾತ್ರ ಇದನ್ನು ಮುಂದುವರೆಸಬಹುದು. ಒಂದು ವೇಳೆ ಹೆಚ್ಚಳವಾದರೆ ಎಲ್ಲದಕ್ಕೂ ಕಡಿವಾಣ ಹಾಕಬಹುದು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರದವರೆಗೆ 46 ಲಕ್ಷ ಡೋಸ್ ಲಸಿಕೆ ಬಂದಿದೆ. ಲಸಿಕೆ ಖಾಲಿಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರು ತಕ್ಷಣ 15 ಲಕ್ಷಕ್ಕೂ ಅಧಿಕ ಲಸಿಕೆ ಕಳಿಸಿದ್ದಾರೆ. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಭಾನುವಾರ ರಜೆ ಇದ್ದಿದ್ದರಿಂದ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಇದೇ ರೀತಿ ಮಾಸ್ಕ್ ಹಾಕುವುದು ಕಡ್ಡಾಯವಾಗಿರಬೇಕು ಎಂದು ಹೇಳಿದರು. ಪ್ರಧಾನ ಮಂತ್ರಿಗಳು ಎಂಟು ರಾಜ್ಯಗಳ ಜತೆ ಸಮಾಲೋಚನೆ ಮಾಡಿದ್ದಾರೆ. ಯಾವ ರೀತಿ ಕ್ರಮ ಕೈಗೊಳ್ಳಬೇಕು ಅಂತ ಸೂಚಿಸಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಹೇಳಿದ್ದಾರೆ. ಆ ರೀತಿ ವಾತಾವರಣ ಸೃಷ್ಟಿ ಆಗುವುದು ಬೇಡ. ನಾವು ಬಹಳ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ನಿಯಂತ್ರಣ ಮಾಡಬಹುದು ಎಂದು ಹೇಳಿದರು.

    ಆರೋಗ್ಯ ಇಲಾಖೆ ಐಸಿಯು ಬೆಡ್ ಮತ್ತಿತರ ವ್ಯವಸ್ಥೆ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.20 ರಷ್ಟು ಹಾಸಿಗೆ ಮೀಸಲಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ತಾಂತ್ರಿಕ ಸಲಹಾ ಸಮಿತಿ ಮೇ ಅಂತ್ಯದವರೆಗೂ ಗಮನ ಹರಿಸಲು ಸೂಚನೆ ನೀಡಿದೆ. ಸೋಂಕು ನಿಯಂತ್ರಣಕ್ಕೆ ಎಲ್ಲರ ಸಹಕಾರ ಬೇಕು. ನಿಯಂತ್ರಣ ತಂದು ಸಾವಿನ ಸಂಖ್ಯೆ ಕಡಿಮೆ ಮಾಡಲಾಗುವುದು ಎಂದರು. ಆರುವರೆ ಸಾವಿರ ಸೋಂಕು ಬೆಂಗಳೂರಿನಲ್ಲಿ ಬರುವ ಸಾಧ್ಯತೆ ಇದೆ. ಹಾಗಾಗಿ ಇನ್ನಷ್ಟು ಕ್ರಮ ಅಗತ್ಯ ಎಂದು ತಿಳಿಸಿದರು.

    ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೊನಾ ವಿಚಾರದಲ್ಲಿ ವಿಪಕ್ಷದವರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ಆರೋಪಕ್ಕೆ ಈ ಬಗ್ಗೆ ಸಿಎಂ ಜೊತೆ ಮಾತನಾಡುವುದಾಗಿ ಹೇಳಿದರು. ನಾವು ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ಅವರ ಸಲಹೆಯನ್ನೂ ಪಡೆಯುತ್ತೇವೆ ಎಂದರು. ವಿಕ್ಟೋರಿಯಾ, ಬೌರಿಂಗ್ ನಲ್ಲಿ ಹಾಸಿಗೆ ಖಾಲಿ ಇದೆ. ಹಾಸಿಗೆ ಮೀಸಲಿಡೋ ಕೆಲಸ ಸರ್ಕಾರ ಮಾಡಲಿದೆ. ಅದಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

    ವಾಣಿಜ್ಯ ಚಟುವಟಿಕೆಗಳಿಗೆ ಮತ್ತೆ ಅವಕಾಶ ವಿಚಾರವಾಗಿ ಸಿಎಂ ಒತ್ತಡಕ್ಕೆ ಮಣಿದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿಯಮ ಅನುಷ್ಠಾನಕ್ಕೆ ತರಲು ಆಯಾ ಇಲಾಖೆ ಮುಖ್ಯಸ್ಥರು ಗಮನ ಹರಿಸಬೇಕು. ಇಂದಿನಿಂದ ಎಲ್ಲವೂ ಅನುಷ್ಠಾನಕ್ಕೆ ಬರಲಿದೆ. ಇಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಬಾರಿಯ ಬಿಗ್​ಬಾಸ್​ ವಿನ್ನರ್​ ಭವಿಷ್ಯ ನುಡಿದ ನೆಟ್ಟಿಗರು: ಲ್ಯಾಗ್​ ಮಂಜು, ರಾಜೀವ್​ ಅಲ್ಲ, ಮತ್ಯಾರು?

    ಟಿಎಂಸಿ ಪರ ನಟಿ-ಸಂಸದೆ ಜಯಾ ಬಚ್ಚನ್ ಪ್ರಚಾರ

    ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ ಆರೋಪ: ಐಪಿಎಸ್​ ಅಧಿಕಾರಿಯ ವರ್ಗಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts