More

    ಇದು ಜಾಗತಿಕ ವೈಫಲ್ಯ: ಶ್ರೀಮಂತ ರಾಷ್ಟ್ರಗಳ ವಿರುದ್ಧ ಡಬ್ಲ್ಯುಎಚ್​ಒ ಅಸಮಾಧಾನ!

    ಜಿನೀವಾ: ಬಡ ದೇಶಗಳು ಕರೊನಾ ಲಸಿಕೆಗಾಗಿ ಪರದಾಡುತ್ತಿರುವ ಸಮಯದಲ್ಲಿ ಶ್ರೀಮಂತ ದೇಶಗಳು ಸಮುದಾಯ ಕೇಂದ್ರಗಳನ್ನು ತೆರೆದು ಕರೊನಾ ಅಪಾಯವಿಲ್ಲದ ಯುವಕರಿಗೂ ಲಸಿಕೆ ನೀಡುತ್ತಿರುವುದನ್ನು ಖಂಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಸ್​ಒ) ಇದು ಜಾಗತಿಕ ವೈಫಲ್ಯ ಎಂದು ಕರೆದಿದೆ.

    ಹೊಸ ಕರೊನಾ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಶೇ 40 ರಷ್ಟು ತಲುಪಿದೆ. ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್​ ಹರಡುತ್ತಿದ್ದಂತೆ ಕಳೆದ ವಾರಕ್ಕೆ ಹೋಲಿಸಿದರೆ ಆಫ್ರಿಕಾದಲ್ಲಿ ಪರಿಸ್ಥಿತಿ ಬಹಳ ಭೀಕರವಾಗಿದೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕರಾದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

    ಒಂದು ಜಾಗತಿಕ ಸಮುದಾಯವಾಗಿ ನಾವು ವಿಫಲವಾಗುತ್ತಿರುವಂತೆ ನಮ್ಮ ಜಗತ್ತು ಸಹ ವಿಫಲವಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಘೆಬ್ರೆಯೆಸಸ್​ ಹೇಳಿದರು.

    ಇಥಿಯೋಪಿಯನ್ ಮೂಲದ ಟೆಡ್ರೊಸ್, ಕಡಿಮೆ ಆದಾಯದ ದೇಶಗಳೊಂದಿಗೆ ಲಸಿಕೆ ಹಂಚಿಕೊಳ್ಳಲು ಹಿಂಜರಿಯುತ್ತಿರುವುದಕ್ಕೆ ದೇಶಗಳ ಹೆಸರೇಳದೆ ಖಂಡಿಸಿದರು. ಆಫ್ರಿಕನ್ ರಾಷ್ಟ್ರಗಳು ಸಂಕೀರ್ಣ ಚಿಕಿತ್ಸೆಯನ್ನು ಬಳಸಲು ಸಾಧ್ಯವಿಲ್ಲ ಎಂದು ಕೆಲವರು ವಾದಿಸಿದಾಗ, ಎಚ್ಐವಿ/ಏಡ್ಸ್ ಬಿಕ್ಕಟ್ಟನ್ನು ಹೋಲಿಸಿದರು. ಲಸಿಕೆ ನಮಗೆ ಕೊಡಿ ನಾವು ಅದನ್ನು ಹಂಚುತ್ತೇವೆ ಎಂದು ತಿಳಿಸಿದರು.

    ಉಳ್ಳವರು ಮತ್ತು ಇಲ್ಲದವರ ನಡುವಿನ ವ್ಯತ್ಯಾಸ ಮತ್ತು ನಮ್ಮ ಪ್ರಪಂಚದ ಅನ್ಯಾಯವು ಇದೀಗ ಸಂಪೂರ್ಣವಾಗಿ ಬಹಿರಂಗವಾಗುತ್ತಿದೆ. ಅನ್ಯಾಯ ಮತ್ತು ಅಸಮಾನತೆಯನ್ನು ನಾವೀಗ ಎದುರಿಸಬೇಕಿದೆ ಎಂದು ಘೆಬ್ರೆಯೆಸ ಹೇಳಿದರು. (ಏಜೆನ್ಸೀಸ್​)

    ಬಾವನ ಮೇಲೆ ನಾದಿನಿಗೆ ವ್ಯಾಮೋಹ: ತಂಗಿಯ ಮಾತು ಕೇಳಿ ಕುಸಿದುಬಿದ್ದ ಅಕ್ಕ!

    ರೇಖಾ ಕದಿರೇಶ್​ ಕೊಲೆ: ಮತ್ತೆ ಮೂವರ ಬಂಧನ, ಹತ್ಯೆ ವೇಳೆ ಒಬ್ಬೊಬ್ಬರೂ ಒಂದೊಂದು ಕೃತ್ಯವೆಸಗಿದ್ದರು…

    ಮಾದಕವಸ್ತುಗಳ ವ್ಯಸನ ತೊರೆಯಲು ಲಾಕ್​ಡೌನ್ ಸಕಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts