More

    ಕರೊನಾ ಕರ್ತವ್ಯದಲ್ಲಿದ್ದ ಆರೋಗ್ಯ ನಿರೀಕ್ಷಕನಿಗೆ ತೀವ್ರ ಹೃದಯಾಘಾತ, ಕೋಲಾರ ಜಿಲ್ಲೆಯಲ್ಲಿ ಘಟನೆ

    ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಣಿ ಚೆಕ್​ಪೋಸ್ಟ್​ನಲ್ಲಿ ಕರೊನಾ ಕರ್ತವ್ಯದಲ್ಲಿದ್ದ ಕಿರಿಯ ಆರೋಗ್ಯ ನಿರೀಕ್ಷಕ ಸರವಣ (45) ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮಂಗಳವಾರ ನಸುಕಿನ ಜಾವ ಅವರು ಮೃತಪಟ್ಟಿದ್ದಾಗಿ ಹೇಳಲಾಗಿದೆ.

    ಇವರು ಊಟುಕುಂಟೆ ಮಿಟ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಇವರು ಹೆಬ್ಬುಣಿ ಚೆಕ್​ಪೊಸ್ಟ್​ನಲ್ಲಿ ಕರೊನಾ ಸ್ಕ್ರೀನಿಂಗ್​ನಲ್ಲಿ ತೊಡಗಿದ್ದರು. ಆದರೆ ಮಂಗಳವಾರ (ಏಪ್ರಿಲ್​ 6) ನಸುಕಿನ ಜಾವ 3.30ರಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.

    ಪರಿಹಾರ ಘೋಷಣೆಗೆ ಮನವಿ: ಕತೃವ್ಯದಲ್ಲಿದ್ದಾಗ ಸರವಣ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಕ್ಷಣವೇ ಪರಿಹಾರ ಘೋಷಿಸುವಂತೆ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರನ್ನು ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ ಮನವಿ ಮಾಡಿಕೊಂಡಿದ್ದಾರೆ.

    ಅಲ್ಲದೆ, ಪ್ರಧಾನಿ ಘೋಷಿಸಿರುವಂತೆ ಅರೆವೈದ್ಯಕೀಯ ಸಿಬ್ಬಂದಿ ಕೊಡಮಾಡುವ 50 ಲಕ್ಷ ರೂ. ವಿಮಾ ಮೊತ್ತವನ್ನೂ ಸರವಣ ಅವರ ಕುಟುಂಬ ವರ್ಗದವರಿಗೆ ಕೊಡಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

    ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗೇ ದಿಗ್ಬಂಧನ, ಯಾರಿಗೂ ಪ್ರವೇಶವಿಲ್ಲ, ಯಾರನ್ನೂ ಹೊರಬಿಡುತ್ತಿಲ್ಲ ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts