More

    ಸೂಕ್ತ ತೀರ್ಪು ಕೊಡಲೆಂದೇ ಕೌನ್ಸೆಲಿಂಗ್‌ ಪಡೆಯಲು ನ್ಯಾಯಾಧೀಶರ ನಿರ್ಧಾರ; ಇದಕ್ಕೆಲ್ಲ ಕಾರಣ ಆ ಸಲಿಂಗಕಾಮಿ ಜೋಡಿ!

    ಚೆನ್ನೈ: ಒಮ್ಮೊಮ್ಮೆ ವಿಷಯದ ಪರವಾಗಿ ಸರಿಯಾದ ವಾದ ಮಂಡಿಸಲು ವಕೀಲರು ಗಂಭೀರ ಅಧ್ಯಯನಕ್ಕೆ ಮುಂದಾಗುವುದನ್ನು ಕೇಳಿದ್ದೇವೆ, ಅದು ಸರ್ವೇ ಸಾಮಾನ್ಯ ಕೂಡ. ಆದರೆ ಇಲ್ಲೊಂದು ಪ್ರಕರಣದಲ್ಲಿ ನ್ಯಾಯಾಧೀಶರೊಬ್ಬರು ಸೂಕ್ತ ತೀರ್ಪು ನೀಡುವ ಸಲುವಾಗಿ ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್‌ಗೆ ಒಳಗಾಗಲು ನಿರ್ಧರಿಸಿದ್ದಾರೆ. ಅಂದಹಾಗೆ ಇಷ್ಟಕ್ಕೆಲ್ಲ ಕಾರಣ ಆ ಸಲಿಂಗಕಾಮಿ ಜೋಡಿ.

    ಸಲಿಂಗಕಾಮಿ ಯುವತಿಯರಿಬ್ಬರು ಜೊತೆಗೆ ಜೀವನ ಸಾಗಿಸುವ ಸಲುವಾಗಿ ಮನೆ ಬಿಟ್ಟು ಬಂದು ಚೆನ್ನೈನಲ್ಲಿ ನೆಲೆಸಿದ್ದಾರೆ. ಆದರೆ ಇದಕ್ಕೆ ತಮ್ಮ ಮನೆಯವರು ಆಕ್ಷೇಪ ಹೊಂದಿದ್ದು, ಅವರಿಂದ ಏನೂ ತೊಂದರೆ ಆಗದಂತೆ ರಕ್ಷಣೆ ಕೊಡಿಸಬೇಕು ಎಂದು ಕೋರಿ ಈ ಜೋಡಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮದ್ರಾಸ್‌ ಹೈಕೋರ್ಟ್‌ನಲ್ಲಿ ಈ ಪ್ರಕರಣವಿದೆ.

    ಈ ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶ ಎನ್.‌ ಆನಂದ ವೆಂಕಟೇಶ್‌ ಅವರು, ಪ್ರಕರಣದ ಸಂಬಂಧ ಸಮಂಜಸವಾದ ತೀರ್ಪು ನೀಡುವ ಸಲುವಾಗಿ ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್‌ ಪಡೆಯಲು ನಿರ್ಧರಿಸಿದ್ದಾರೆ. ತಮಗೆ ಸಲಿಂಗಕಾಮಿ ಜೋಡಿಗಳ ನಡುವಿನ ಸಂಬಂಧದ ಕುರಿತು ಹೆಚ್ಚಿನ ವಿಷಯ ಗೊತ್ತಿಲ್ಲ, ಆ ಬಗ್ಗೆ ಇನ್ನಷ್ಟು ವಿಷಯ ತಿಳಿದುಕೊಂಡು ತೀರ್ಪು ನೀಡಬೇಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

    ಅಂತಿಮವಾಗಿ ನಾನು ಈ ಪ್ರಕರಣದ ಬಗ್ಗೆ ತೀರ್ಪು ನೀಡುವಾಗ ಪದಗಳು ನನ್ನ ಹೃದಯದಿಂದ ಬರಬೇಕೇ ವಿನಃ ಮನಸಿನಿಂದಲ್ಲ. ಹೀಗಾಗಿ ಈ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕಿದೆ ಎಂದು ಹೇಳಿರುವ ಅವರು, ಈ ಕುರಿತು ಯುವತಿಯರಿಬ್ಬರ ಪಾಲಕರೂ ಕೌನ್ಸೆಲಿಂಗ್‌ಗೆ ಒಳಗಾಗಬೇಕು ಎಂದಿದ್ದಾರೆ. ಅಲ್ಲದೆ ಅಲ್ಲಿಯವರೆಗೆ ಯುವತಿಯರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಜೂ. 7ಕ್ಕೆ ಮುಂದೂಡಿದ್ದಾರೆ.

    ಬೆಡ್ ಮ್ಯಾನೇಜ್‌ಮೆಂಟ್‌ ಪೋರ್ಟಲ್ ಬಿಡುಗಡೆ: ಕರೊನಾ ಸೋಂಕಿತರಿಗೆ ಬೆಡ್ ಸಮಸ್ಯೆ ಆಗದಂತೆ ಕ್ರಮ

    ಕರೊನಾದಿಂದ ಆಸ್ಪತ್ರೆ ಸೇರಿದರೂ ನಿಲ್ಲದ ಕನಸು; ಹಾಸ್ಪಿಟಲ್​ ಬೆಡ್ ಮೇಲೆ ಸಿಎ ತಯಾರಿ ನಡೆಸಿದ ಸೋಂಕಿತ

    ಕುಣಿಗಲ್​ ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕರೊನಾಗೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts