More

    ಮೂರು ದಶಕಗಳ ವೈರತ್ವಕ್ಕೆ ತಾರಕ್​ ಮತ್ತು ರಾಮ್​ಚರಣ್​ ಅಂತ್ಯ ಹಾಡಿದ್ದು ಹೇಗೆ?

    ಹೈದರಾಬಾದ್​: ಎನ್​ಟಿಆರ್​ ಕುಟುಂಬ ಮತ್ತು ಚಿರಂಜೀವಿ ಅವರ ಕುಟುಂಬದ ನಡುವೆ ಎಲ್ಲವೂ ಸರಿ ಇಲ್ಲ. ಎರಡೂ ಕುಟುಂಬಗಳ ನಡುವೆ ಪೈಪೋಟಿ, ವೈರತ್ವ ಇದೆ ಎಂಬ ಮಾತುಗಳು ಕಳೆದ ಮೂರು ದಶಕಗಳಿಂದ ಕೇಳಿ ಬರುತ್ತಲೇ ಇದೆ. ಹೀಗಿರುವಾಗಲೇ, ಎನ್​.ಟಿ.ಆರ್​ ಕುಟುಂಬದ ತಾರಕ್​ (ಜ್ಯೂನಿಯರ್​ ಎನ್​ಟಿಆರ್​) ಮತ್ತು ಚಿರಂಜೀವಿ ಅವರ ಮಗ (ರಾಮ್​ಚರಣ್​ ತೇಜ) ಇಬ್ಬರೂ ಒಟ್ಟಿಗೆ ‘RRR’ ಚಿತ್ರದಲ್ಲಿ ನಟಿಸಿದ್ದರು.

    ಅವರಿಬ್ಬರೂ ಒಟ್ಟಿಗೆ ನಟಿಸಿದ್ದು ಹೇಗೆ ಮತ್ತು ಅವರಿಬ್ಬರನ್ನೂ ರಾಜಮೌಳಿ ಒಪ್ಪಿಸಿಕೊಂಡು ಕರೆದುಕೊಂಡು ಬಂದಿದ್ದು ಹೇಗೆ ಎಂಬ ಕುತೂಹಲಕ್ಕೆ ಸಹಜವಾಗಿಯೇ ಎಲ್ಲರಲ್ಲೂ ಇತ್ತು. ಆ ಪ್ರಶ್ನಗ ಸ್ವತಃ ತಾರಕ್​ ಮತ್ತು ರಾಮ್​ಚರಣ್​ ತೇಜ ಮೊದಲ ಬಾರಿಗೆ ಮಾತನಾಡಿದ್ದಾರೆ.

    ಇದನ್ನೂ ಓದಿ: ಧರಣಿಯಲ್ಲಿ ಕುಕ್ಕುಟ ಕಾಳಗ; ಹುಂಜದ ಜೊತೆ ನಾಯಕ ಮನೋಜ್ ಫೋಟೋಶೂಟ್

    ಅಮೆರಿಕಾದಲ್ಲಿ ಇತ್ತೀಚೆಗೆ ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಸಮಾರಂಭದಲ್ಲಿ ಹಾಜರಿದ್ದು ಮಾತನಾಡಿರುವ ಅವರು, ಈ ವೈರತ್ವದ ವಿಷಯ ಕೇಳಿಕೇಳಿ ಸುಸ್ತಾಗಿದ್ದರಿಂದ ಜತೆಯಾಗಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

    ಈ ಕುರಿತು ಮಾತನಾಡಿರುವ ರಾಮ್​ಚರಣ್​, ‘ನಾವಿಬ್ಬರೂ ಒಟ್ಟಾಗಿ ಸಿನಿಮಾ ಮಾಡುವುದಕ್ಕೆ ಕಾರಣವೇ ಈ ವೈರತ್ವದ ವಿಷಯ. ಬಹಳ ವರ್ಷಗಳಿಂದ ಈ ವಿಷಯ ಕೇಳಿಕೇಳಿ ಸಾಕಾಗಿತ್ತು. ಇದಕ್ಕೆ ಅಂತ್ಯ ಹಾಡಬೇಕಿತ್ತು. ಇದನ್ನು ಮುಂದುವರೆಸುವುದಕ್ಕಿಂತ ನಾವಿಬ್ಬರೂ ಒಂದಾಗಿ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಈ ಸಿನಿಮಾ ಮಾಡಿದೆವು’ ಎನ್ನುತ್ತಾರೆ.

    ಇನ್ನು, ಈ ಬಗ್ಗೆ ಮಾತನಾಡುವ ತಾರಕ್​, ‘ಇದು ಸರಳವಾದ ಫಿಸಿಕ್ಸ್​. ವಿರುದ್ಧ ದಿಕ್ಕುಗಳು ಪರಸ್ಪರ ಆಕರ್ಷಿಸುತ್ತವೆ ಎಂಬ ಮಾತಿನಂತೆ, ನನ್ನಲ್ಲಿ ಏನಿಲ್ಲವೋ ಅದರತ್ತ ಆಕರ್ಷಿತನಾಗುತ್ತಾನೆ. ಚರಣ್​ನಲ್ಲಿ ಏನಿಲ್ಲವೋ ಅದರಿಂದ ಅವನು ಆಕರ್ಷಿತನಾಗುತ್ತಾನೆ. ನಾವಿಬ್ಬರೂ ಈ ವಿಷಯದಲ್ಲಿ ನಮ್ಮಲ್ಲಿ ಇಲ್ಲದಿದ್ದನ್ನು ಇನ್ನೊಬ್ಬರಲ್ಲಿ ಕಂಡುಕೊಂಡಿದ್ದೇವೆ. ಇದೊಂದು ಸಪೋರ್ಟ್​ ಸಿಸ್ಟಂ ಇದ್ದಂತೆ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಮತ್ತೊಮ್ಮೆ ವಿಜಯ್​ ಜೊತೆ ಹಾಟ್​ ಆಗಿ ಕಾಣಿಸಿಕೊಂಡ ತಮನ್ನಾ: ಬೇಸರ ಹೊರಹಾಕಿದ ಅಭಿಮಾನಿಗಳು

    ಒಂದು ಕಾಲದಲ್ಲಿ ದೂರ ಇದ್ದ ಇಬ್ಬರು ಸ್ಟಾರ್​ ನಟರು, ಈಗ ಬಹಳ ಹತ್ತಿರವಾಗಿದ್ದಾರೆ. ಅದಕ್ಕೆ ಕಾರಣ, ‘RRR’ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.

    ಅಂದಹಾಗೆ, ಅವರಿಬ್ಬರೂ ಜತೆಯಾಗಿ ನಟಿಸಿರುವ ‘RRR’ ಚಿತ್ರವು ಇತ್ತೀಚೆಗೆ 28ನೇ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ನ ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಜತೆಗೆ  ‘ನಾಟು ನಾಟು’ ಹಾಡಿಗೆ ಅತ್ಯುತ್ತಮ ಗೀತೆ ಪ್ರಶಸ್ತಿ ದೊರೆತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts