More

    2024ಕ್ಕೆ ಆಂಧ್ರದ ಮುಖ್ಯಮಂತ್ರಿ ಆಗ್ತಾರಾ ಜ್ಯೂ ಎನ್​ಟಿಆರ್​?

    ಹೈದರಾಬಾದ್​: ಆಂಧ್ರಪ್ರದೇಶದಲ್ಲಿ ಕಳೆದ ವರ್ಷವಷ್ಟೇ ವಿಧಾನಸಭೆಯ ಚುನಾವಣೆಗಳು ನಡೆದಿವೆ. ಚಂದ್ರಬಾಬು ನಾಯ್ಡು ಅವರನ್ನು ಹೀನಾಯವಾಗಿ ಸೋಲಿಸುವ ಮೂಲಕ ಜಗನ್ಮೋಹನ್​ ರೆಡ್ಡಿ ಸರ್ಕಾರ ರಚಿಸಿದ್ದಾರೆ. ಸದ್ಯ ಆಡಳಿತ ನಡೆಸುತ್ತಿರುವ ಜಗನ್ಮೋಹನ್​ ರೆಡ್ಡಿ, 2024ರವರೆಗೂ ಸೇಫು. ಆದರೆ, ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ತಾರಕ್​ ಅಲಿಯಾಸ್​ ಜ್ಯೂನಿಯರ್​ ಎನ್​ಟಿಆರ್​ ಗೆದ್ದು, ಆಂಧ್ರದ ಮುಖ್ಯಮಂತ್ರಿಯಾಗುತ್ತಾರಂತೆ.

    ಇದನ್ನೂ ಓದಿ: ತಮಿಳಿಗೆ ಧ್ರುವ ಸರ್ಜಾ ಅಭಿನಯದ ಪೊಗರು

    ಇಂಥದ್ದೊಂದು ಭವಿಷ್ಯ ನುಡಿದಿದ್ದು ಯಾರು ಎಂಬ ಪ್ರಶ್ನೆ ಬರಬಹುದು. ಯಾರೋ ಜ್ಯೋತಿಷಿಯಲ್ಲ, ಜ್ಯೂನಿಯರ್​ ಎನ್​ಟಿಆರ್​ ಅಭಿಮಾನಿಗಳು ಇತ್ತೀಚೆಗೆ ಫ್ಲೆಕ್ಸ್​ ಒಂದರಲ್ಲಿ 2024ರ ಆಂಧ್ರದ ಮುಖ್ಯಮಂತ್ರಿ ಜ್ಯೂನಿಯರ್​ ಎನ್​ಟಿಆರ್​ ಎಂದು ಅಚ್ಚು ಮಾಡಿಸಿದ್ದಾರೆ. ಇದು ಸಾಕಷ್ಟು ವೈರಲ್​ ಆಗಿದ್ದು, ಜ್ಯೂನಿಯರ್​ ಎನ್​ಟಿಆರ್​ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎಂಬ ಪ್ರಶ್ನೆಗಳು ಇದೀಗ ಕೇಳಿಬರುತ್ತಿದೆ.

    ಬರೀ ಅಭಿಮಾನಿಗಳಷ್ಟೇ ಅಲ್ಲ, ತೆಲುಗು ದೇಶಂ ಪಕ್ಷದಲ್ಲೂ ಈ ಕುರಿತು ಜೋರಾಗಿ ಚರ್ಚೆ ನಡೆಯುತ್ತಿದೆ. ಎನ್​.ಟಿ. ರಾಮರಾವ್​ ನಂತರ ಇಲ್ಲಿಯವರೆಗೂ ಪಕ್ಷವನ್ನು ಮುನ್ನಡೆಸಿಕೊಂಡು ಬಂದವರು ಚಂದ್ರಬಾಬು ನಾಯ್ಡು. ಅವರ ನಂತರ ಅವರ ಮಗ ನಾರಾ ಲೋಕೇಶ್​, ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗುತ್ತಿದೆ. ಹೀಗಿರುವಾಗ ಜ್ಯೂನಿಯರ್​ ಎನ್​ಟಿಆರ್​ ಹೆಸರು ಕೇಳಿಬಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.

    ಇದನ್ನೂ ಓದಿ: ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ವಿವಾಹ

    ಇಷ್ಟೆಲ್ಲಾ ಆದರೂ, ಜ್ಯೂನಿಯರ್​ ಎನ್​ಟಿಆರ್​ ಮಾತ್ರ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆಯೇ, ತಮ್ಮ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದಲ್ಲಿ ನಟಿಸುತ್ತಿರುವ ಅವರು, ಆ ಚಿತ್ರ ಮುಗಿದ ನಂತರ ಹೊಸ ಚಿತ್ರವೊಂದನ್ನು ಒಪ್ಪಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಾಮಾನ್ಯ ಮನುಷ್ಯ ಎಷ್ಟು ಲಂಚ ಕೊಡಬೇಕು ಗೊತ್ತಾ? ಕಮಲ್​ ಹಾಸನ್​ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts