More

    ಬೈಕ್‌‌ಗೆ ಲಾರಿ ಡಿಕ್ಕಿ: ಹಿರಿಯ ಪತ್ರಕರ್ತ ಗಂಗಾಧರಮೂರ್ತಿ ವಿಧಿವಶ

    ಬೆಂಗಳೂರು: ಅಜಾಗರೂಕತೆಯ ಚಾಲನೆಯಿಂದಾಗಿ ಲಾರಿಯೊಂದು ಪಲ್ಟಿಯಾಗಿದ್ದು, ಅದರಡಿಗೆ ಸಿಲುಕಿ ಬೈಕ್​ ಸವಾರ ಹಿರಿಯ ಪತ್ರಕರ್ತ ಎಸ್.ಎಸ್. ಗಂಗಾಧರಮೂರ್ತಿ (49) ಮೃತಪಟ್ಟಿದ್ದಾರೆ.

    ಗಂಗಾಧರಮೂರ್ತಿ ಅವರು ವಿಜಯವಾಣಿ ಪತ್ರಿಕೆಯಲ್ಲಿ ಮುಖ್ಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಅಪರಾಹ್ನ ಕಚೇರಿಗೆ ಬರುವ ವೇಳೆ ಈ ಅಪಘಾತ ಸಂಭವಿಸಿದೆ. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.

    ಬೆಂಗಳೂರಿನ ಪುರಭವನ ಬಳಿ ಸಂಜೆ 4.15ರ ಸುಮಾರಿಗೆ ಲಾರಿ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ. ವೇಗವಾಗಿ ಬಂದ್ ಲಾರಿ, ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿವೈಡರ್​ನ ಮತ್ತೊಂದು ಪಾರ್ಶ್ವದ ರಸ್ತೆಗೆ ಮಗುಚಿದ ಲಾರಿ ಗಂಗಾಧರ ಮೂರ್ತಿ ಅವರ ಬೈಕ್ ಮೇಲೆ ಬಿದ್ದಿದೆ. ತೀವ್ರ ಗಾಯಗೊಂಡ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಒದಗಿಸಲಾಯಿತಾದರೂ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

    ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಪರಾರಿ ಆಗಿದ್ದಾನೆ. ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗಾಧರ ಮೂರ್ತಿ ಅವರ ಪತ್ರಕರ್ತ ವೃತ್ತಿಯ ಸೇವೆ ಗುರುತಿಸಿ ಕಳೆದ ವರ್ಷ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅವರನ್ನು ಸನ್ಮಾನಿಸಿತ್ತು.

    ಸಂತಾಪ: ಪತ್ರಕರ್ತ ಗಂಗಾಧರ ಮೂರ್ತಿ ಅವರ ನಿಧನಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಜಯವಾಣಿ ಸಂಪಾದಕ ಕೆ.ಎನ್​. ಚನ್ನೇಗೌಡ ಅವರು ಸಂತಾಪ ಸೂಚಿಸಿದ್ದಾರೆ. ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಬಳಗ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಶೋಕ ವ್ಯಕ್ತಪಡಿಸಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಸಿ.ಎನ್​.ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ, ಹಿರಿಯ ಐಪಿಎಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. 

    ಸೋಮವಾರ ಅಂತ್ಯಕ್ರಿಯೆ: ಮೃತರ ಪಾರ್ಥಿವ ಶರೀರವನ್ನು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ನಾಳೆ ಅವರ ಊರಾದ ಶೃಂಗೇರಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    ಬೈಕ್‌‌ಗೆ ಲಾರಿ ಡಿಕ್ಕಿ: ಹಿರಿಯ ಪತ್ರಕರ್ತ ಗಂಗಾಧರಮೂರ್ತಿ ವಿಧಿವಶ
    ಮಗುಚಿ ಬೈಕ್ ಮೇಲೆ ಬಿದ್ದ ಲಾರಿ

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts