More

    ಮಾಫಿಯಾದಿಂದ ಜೀವಕ್ಕೆ ಅಪಾಯವಿದೆ ಎಂದ ಪತ್ರಕರ್ತ ‘ಅಪಘಾತ’ದಲ್ಲಿ ಮೃತ!

    ಲಖನೌ : ಉತ್ತರಪ್ರದೇಶದ ಪತ್ರಕರ್ತರೊಬ್ಬರು ಮದ್ಯ ಮಾಫಿಯಾದಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಪೊಲೀಸರಿಗೆ ಪತ್ರ ಬರೆದ ಎರಡೇ ದಿನಗಳ ನಂತರ ಅನುಮಾನಾಸ್ಪದವಾಗಿ ಸಾವಪ್ಪಿದ್ದಾರೆ. ರಸ್ತೆಯಲ್ಲಿ ಬೈಕ್​ನಿಂದ ಬಿದ್ದು ಸಾವು ಸಂಭವಿಸಿದ್ದು, ಇದು ಅಪಘಾತದಂತೆ ಕಂಡುಬಂದಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

    ರಾಜ್ಯದ ಪ್ರತಾಪ್​ಗಡ ಜಿಲ್ಲೆಯ ನಿವಾಸಿಯಾಗಿದ್ದ ಎಬಿಪಿ ನ್ಯೂಸ್​ ಸುದ್ದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಲಭ್ ಶ್ರೀವಾಸ್ತವ್ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ತಾವು ಜೂನ್ 9 ರಂದು ಪ್ರಕಟಿಸಿದ ವರದಿಯೊಂದರ ಹಿನ್ನೆಲೆಯಲ್ಲಿ ಜಿಲ್ಲೆಯ ಮದ್ಯ ಮಾಫಿಯಾದಿಂದ ತಮ್ಮ ಪ್ರಾಣಕ್ಕೆ ಆಪತ್ತಿದೆ ಎಂದು ಶ್ರೀವಾಸ್ತವ್ ಜೂನ್ 12 ರಂದು ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಕರೊನಾದ ನಂತರ ಬಂತು ಮತ್ತೊಂದು ಭಯಾನಕ ಕಾಯಿಲೆ! ಬ್ರಿಟನ್​ನಲ್ಲಿ ಇಬ್ಬರಿಗೆ ಮಂಕಿಪಾಕ್ಸ್ ದೃಢ!

    “ಮೀಡಿಯ ಕವರೇಜ್​ ಮುಗಿಸಿ ತಮ್ಮ ಬೈಕಿನಲ್ಲಿ ರಾತ್ರಿ 11 ರ ಸುಮಾರಿಗೆ ಶ್ರೀವಾಸ್ತವ್ ಹಿಂತಿರುಗುತ್ತಿದ್ದರು. ಬೈಕು ರಸ್ತೆಯ ಬದಿಯಿದ್ದ ಹ್ಯಾಂಡ್​ಪಂಪಿಗೆ ಗುದ್ದಿದ ಪರಿಣಾಮ ಕೆಳಗೆ ಬಿದ್ದಿದ್ದಾರೆ. ಕೆಲವು ಕಾರ್ಮಿಕರು ಅವರನ್ನು ಎತ್ತಿ ಮಿತ್ರರಿಗೆ ಮತ್ತು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಗೆ ಕರೆದೊಯ್ದಾಗ ಮೃತರೆಂದು ಘೋಷಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಸುರೇಂದ್ರ ದ್ವಿವೇದಿ ಹೇಳಿದ್ದಾರೆ. ಆರಂಭಿಕ ತನಿಖೆಯಿಂದ ಅಪಘಾತದಂತೆ ಕಂಡುಬರುತ್ತಿದ್ದು, ಇತರ ಆ್ಯಂಗಲ್​ಗಳಲ್ಲೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    ‘ಅಪಘಾತ’ದ ಸ್ಥಳದಲ್ಲಿ ತೆಗೆದ ಫೋಟೋದಲ್ಲಿ ನೆಲದ ಮೇಲೆ ಬಿದ್ದಿರುವ ಶ್ರೀವಾಸ್ತವ್​ ಮುಖದ ಮೇಲೆ ಗಾಯಗಳಾಗಿರುವುದು, ಅವರ ಬಟ್ಟೆ ಅರ್ಧಂಬರ್ಧ ತೆಗೆದಿರುವುದು ಕಂಡುಬಂದಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಮೃತರ ಪತ್ನಿ ರೇಣುಕ ಶ್ರೀವಾಸ್ತವ, ತಮ್ಮ ಪತಿಯನ್ನು ಮದ್ಯ ಮಾಫಿಯಾದವರೇ ಕೊಂದಿದ್ದಾರೆ ಎಂದು ದೂರು ನೀಡಿದ್ದಾರೆ. ಮೂರು ದಿನಗಳಿಂದ ತಮ್ಮ ಪತಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ ಎಂದು ವರದಿ ಹೇಳಿದೆ.

    ಇದನ್ನೂ ಓದಿ: ತಾನು ತೊಟ್ಟ ಬಟ್ಟೆಯನ್ನೇ ಮಾರಾಟ ಮಾಡಿ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುವ ಬೆಡಗಿ

    ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಈ ಕುರಿತು ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರವನ್ನು ಖಂಡಿಸಿದ್ದಾರೆ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಮತ್ತೊಂದೆಡೆ, ಡೆಪ್ಯುಟಿ ಸಿಎಂ ಕೇಶವಪ್ರಸಾದ್ ಮೌರ್ಯ ಅವರು ಪತ್ರಕರ್ತನ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದು, ಪ್ರಕರಣದ ಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಯಾರೇ ತಪ್ಪಿತಸ್ಥರಾಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)

    ಕರೊನಾ ಮರೆತು ‘ಪೂಲ್ ಪಾರ್ಟಿ’! 61 ಜನರ ಬಂಧನ

    ವಿದ್ಯಾರ್ಥಿಗಳ ಲೈಂಗಿಕ ಶೋಷಣೆ ಆರೋಪ; ಶಿವಶಂಕರ ಬಾಬಾ ವಿರುದ್ಧ ಕೇಸ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts