More

    ಪೋಲಿಯೋ ಹಿಮ್ಮೆಟ್ಟಿಸಲು ಕೈಜೋಡಿಸಿ

    ಶಿರಾಳಕೊಪ್ಪ: ಐದು ವಷರ್ದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಶಿರಾಳಕೊಪ್ಪ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಮಹಾಲಿಂಗ ಕೊಳ್ಳೆ ಮನವಿ ಮಾಡಿದರು.

    ಪುರಸಭೆಯಲ್ಲಿ ಭಾನುವಾರ ಮಕ್ಕಳಿಗೆ ಪೋಲಿಯೋ ಹನಿ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಪಟ್ಟಣದ 13 ಕಡೆ ಮೂರು ದಿನ ಹನಿ ಹಾಕಲಾಗುತ್ತಿದೆ. ಶೇ.100ರಷ್ಟು ಗುರಿ ಸಾಧನೆ ಮಾಡಲು ಕೈಜೋಡಿಸಬೇಕು ಎಂದರು.
    ಹಿರಿಯ ಆರೋಗ್ಯ ಸಹಾಯಕ ರೇವಣಪ್ಪ ಮಾತನಾಡಿ, ಪುರಸಭೆ, ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಿದ್ದೇವೆ. ನಿಲ್ದಾಣಕ್ಕೆ ಬಸ್‌ನಲ್ಲಿ ಬಂದುಹೋಗುವ ಮಕ್ಕಳನ್ನು ಗುರುತಿಸಿ ಹನಿ ಹಾಕಬೇಕು ಎಂದು ಇಲಾಖೆ ಸಿಬ್ಬಂದಿಗೆ ತಿಳಿಸಿದರು.
    ಪುರಸಭೆ ಸದಸ್ಯ ರಾಜಣ್ಣ ತಡಗಣಿ ಮಾತನಾಡಿ, ಸದಸ್ಯರಾದ ನಾವು ನಮ್ಮ ವಾರ್ಡಿನಲ್ಲಿ ಸಾಮಾನ್ಯ ಜನರಿಗೆ ಪಲ್ಸ್ ಪೋಲಿಯೋ ಲಸಿಕೆ ಮಹತ್ವ ತಿಳಿಸಿ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
    ಸಮುದಾಯ ಆಸ್ಪತ್ರೆ ಹಿರಿಯ ಆರೋಗ್ಯ ಸಹಾಯಕಿ ಸೌಭಾಗ್ಯಾ ಮಾತನಾಡಿ, ಲಸಿಕೆ ಕಾರ್ಯಕ್ರಮ ಮೂರು ದಿನ ನಡೆಯುತ್ತಿದ್ದರೂ ಇದು ಯಶಸ್ವಿಯಾಗಲು ದೇಶಾದ್ಯಂತ ಇಲಾಖೆಯ ಸಾವಿರಾರು ಸಿಬ್ಬಂದಿ ಕಳೆದ ಒಂದು ತಿಂಗಳಿಂದ ಶ್ರಮವಹಿಸಿರುವುದು ಪ್ರಶಂಸನೀಯ ಎಂದರು.
    ಪುರಸಭೆ ಸದಸ್ಯ ಮಹಾಬಲೇಶ್, ಆರೋಗ್ಯ ನಿರೀಕ್ಷಕ ಉಮೇಶ, ಡಾ. ಸಂತೋಷ, ಡಾ. ಸಂಜೀವ ಪವಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts