More

    ಕ್ಷಯ ರೋಗ ನಿರ್ಮೂಲನೆಗೆ ಕೈ ಜೋಡಿಸಿ

    ಚಿತ್ರದುರ್ಗ:  ದೇಶವನ್ನು 2025ರೊಳಗೆ ಕ್ಷಯ ಮುಕ್ತವಾಗಿ ಮಾಡಲು ಸರ್ಕಾರ ಪಣ ತೊಟ್ಟಿದ್ದು, ಕ್ಷಯ ರೋಗ ನಿರ್ಮೂಲನೆಗಾಗಿ ವೈದ್ಯರು ಹಾಗೂ ಆ ರೋಗ್ಯ ಸಿಬ್ಬಂದಿ ಕೈ ಜೋಡಿಸ ಬೇಕು ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ ಹೇಳಿದರು.

    ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ವಿಶ್ವ ಕ್ಷಯರೋಗ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದರು.

    ಕ್ಷಯ ರೋಗ ನಿಯಂತ್ರಣ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪಾತ್ರ ಹೆಚ್ಚಿದೆ. ಶೇ.80ಕ್ಕೂ ಹೆಚ್ಚಿನ ಜನರ ಆರೋಗ್ಯ ಕಾಪಾಡ ಬೇಕಾಗಿರುವುದು, ಗ್ರಾಮೀಣ ಜನರ ಜೀವನ, ಜೀವ ಉಳಿಸಿಬೇಕಾಗಿರುವುದು ಆರೋಗ್ಯ ಇಲಾಖೆಯಿಂದ ಸಾಧ್ಯ ಎಂದರು.

    ಪ್ರಸ್ತುತ ಕ್ಷಯ ರೋಗಿಗಳ ಸಂಖ್ಯೆ ಕಡಿಮೆ ಇದೆ. ಒಂದು ಲಕ್ಷ ಜನಸಂಖ್ಯೆಗೆ ಅಂದಾಜು 217 ಕ್ಷಯ ರೋಗಿಗಳಿದ್ದಾರೆ. ಒಂದು ಕಾಲದಲ್ಲಿ ಈ ರೋಗ ಅತ್ಯಂತ ಭೀಕರವಾಗಿತ್ತು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕ್ಷಯದ ಸೋಂಕು ತಗಲುತ್ತದೆ. ಆರೋಗ್ಯ ಇಲಾಖೆ ಕ್ರಮಗಳಿಂದಾಗಿ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

    ವೈದ್ಯರು ಗ್ರಾಮೀಣ ಭಾಗಕ್ಕೆ ಭೇಟಿ ನೀಡುತ್ತಿಲ್ಲ. ವೈದ್ಯರ ಹಾಜರಾತಿ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಯನ್ನು ಗೌರವಿಸಲಾಗುವುದು, ಕಾರ್ಯನಿರ್ವಹಿಸದೆ ಇರುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    ಡಿಎಚ್‌ಒ ಡಾ.ಆರ್.ರಂಗನಾಥ್, ಜಿಲ್ಲಾ ಕಾರ‌್ಯಕ್ರಮ ಅನುಷ್ಠಾನಾಧಿಕಾರಿ ಡಾ.ಕಾಶಿ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಎದೆ ಮತ್ತು ಕ್ಷಯರೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬಸವರಾಜ ಸಂಗೊಳ್ಳಿ, ತಾಲೂಕು ವೈದ್ಯಾಧಿಕಾರಿಗಳಾದ ಡಾ.ರಾಘವೇಂದ್ರ, ಡಾ.ಬಿ.ವಿ.ಗಿರೀಶ್, ವೈದ್ಯಾಧಿಕಾರಿಗಳಾದ ಡಾ.ಮಧುಕುಮಾರ್, ಡಾ.ಸತೀಶ್ ಇದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕ್ಷಯ ರೋಗ ನಿರ್ಮೂಲನಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.

    *ಕಂಚಿನ ಪದಕ
    ‘ಹೌದು, ನಾವು ಕ್ಷಯರೋಗವನ್ನು ಕೊನೆ ಗೊಳಿಸಬಹುದು’ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ ಎಂದು ತಿಳಿಸಿದ ಕಾರ‌್ಯಕ್ರಮ ಅನುಷ್ಠಾನಾಧಿಕಾರಿ ಡಾ.ಸಿ.ಒ.ಸುಧಾ, 2022ನೇ ಸಾಲಿನಲ್ಲಿ ಎಸ್‌ಎನ್‌ಸಿ ಸಮೀಕ್ಷೆ ವರದಿ ಪ್ರಕಾರ ಶೇ.20 ಕ್ಷಯ ರೋಗಿಗಳ ಪತ್ತೆ ಇಳಿಕೆ ಕಂಡು ಬಂದಿರುವುದರಿಂದ ಚಿತ್ರದುರ್ಗ ಜಿಲ್ಲೆ ಕಂಚಿನ ಪದಕಕ್ಕೆ ಭಾಜನವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts