More

    ಕಾಬುಲ್ ಮೇಲೆ ಮತ್ತೊಂದು ಆತಂಕವಾದಿ ದಾಳಿ ಸಾಧ್ಯತೆ: ಜೋ ಬಿಡೆನ್​

    ವಾಷಿಂಗ್ಟನ್​/ಕಾಬುಲ್: ತಾಲಿಬಾನ್​ ಆಕ್ರಮಿತ ಅಫ್ಘಾನಿಸ್ತಾನವನ್ನು ತೊರೆದು ಬೇರೆ ದೇಶಗಳಲ್ಲಿ ಆಶ್ರಯ ಪಡೆಯಲು ತೆರವು ವಿಮಾನಗಳನ್ನೇರಲು ನೂಕುನುಗ್ಗಲುಂಟಾಗಿರುವ ಕಾಬುಲ್​ ವಿಮಾನ ನಿಲ್ದಾಣದಲ್ಲಿ ಮುಂದಿನ 24 ರಿಂದ 36 ಗಂಟೆಗಳಲ್ಲಿ ಎರಡನೇ ಆತಂಕವಾದಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ತಿಳಿಸಿದ್ದಾರೆ.

    ತಾಲಿಬಾನ್​ ಆಡಳಿತಕ್ಕೆ ಹೆದರಿ ದೇಶ ತೊರೆಯುತ್ತಿರುವ ಜನರನ್ನು ತೆರವುಗೊಳಿಸುವ ಕಾರ್ಯವನ್ನು ಅಮೇರಿಕ ಮುಂದುವರಿಸಿದೆ. ಭಾರತಾದಿ ದೇಶಗಳು ತನ್ನ ನಾಗರೀಕರನ್ನು ಅಲ್ಲಿಂದ ತಂತಮ್ಮ ದೇಶಕ್ಕೆ ವಾಪಸ್​ ಕರೆತರುವ ಪ್ರಯತ್ನದಲ್ಲಿ. ಈ ಸಂದರ್ಭದಲ್ಲಿ ಹೆಚ್ಚು ಜನದಟ್ಟಣೆ ಹೊಂದಿರುವ ಕಾಬುಲ್​ ವಿಮಾನ ನಿಲ್ದಾಣಕ್ಕೆ ಉಗ್ರರ ದೃಷ್ಟಿ ತಾಗಿದೆ. ಅಲ್ಲಿನ ಪರಿಸ್ಥಿತಿ ಗಂಭೀರವಾಗಿದೆ.

    ಇದನ್ನೂ ಓದಿ: 3 ಎಕರೆಗಾಗಿ ನಾಲ್ವರು ಸಹೋದರರ ಭೀಕರ ಹತ್ಯೆ: ನೋಡಲಾಗುತ್ತಿಲ್ಲ ಹೆತ್ತಾಕೆಯ ಕಣ್ಣೀರು- 9 ಮಂದಿ ಅರೆಸ್ಟ್‌

    ಕಳೆದ ಗುರುವಾರ ನಡೆದ ಐಸಿಸ್​-ಕೆ ಆತ್ಮಾಹುತಿ ಬಾಂಬರ್​​ಗಳ ದಾಳಿಯಲ್ಲಿ 13 ಅಮೆರಿಕದ ಸೈನಿಕರು ಸೇರಿದಂತೆ ಸುಮಾರು 100 ಜನ ಮೃತಪಟ್ಟಿದ್ದಾರೆ. ಇದರಿಂದಾಗಿ ತೆರವು ಕಾರ್ಯಾಚರಣೆಗೆ ಹಿನ್ನಡೆ ಉಂಟಾಗಿದ್ದರೂ, ಮಂಗಳವಾರದವರೆಗೆ ಆದಷ್ಟು ಜನರನ್ನು ಹೊರಸಾಗಿಸುವುದಾಗಿ ಅಮೆರಿಕ ಹೇಳಿದೆ.

    ಉಗ್ರರ ದಾಳಿಗೆ ಉತ್ತರವಾಗಿ ಶನಿವಾರ ಅಮೆರಿಕ, ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದಲ್ಲಿ ನಡೆಸಿದ ದ್ರೋಣ್​​ ದಾಳಿಯಲ್ಲಿ ಐಸಿಸ್​​ನ ಇಬ್ಬರು ಉನ್ನತ ಮಟ್ಟದ ಸದಸ್ಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇತ್ತ ತೆರವು ಕಾರ್ಯ ಮುಗಿಯುವ ಮುನ್ನ ಕಾಬುಲ್​ ವಿಮಾನ ನಿಲ್ದಾಣದ ಮೇಲೆ ಮತ್ತೊಂದು ಉಗ್ರರ ದಾಳಿ ನಡೆಯಲಿದೆ ಎಂಬ ಮಾಹಿತಿಯನ್ನು ತಮ್ಮ ಕಮ್ಯಾಂಡೋಗಳು ನೀಡಿರುವುದಾಗಿ ಬಿಡೆನ್​ ತಿಳಿಸಿದ್ದಾರೆ. ಹೀಗಾಗಿ ನಿಲ್ದಾಣದ ಪ್ರಮುಖ ಸ್ಥಳಗಳಲ್ಲಿ ತಪಾಸಣೆಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್)

    ಅಫ್ಘಾನಿಸ್ತಾನದಿಂದ ಭಾರತ ಸರ್ಕಾರ ತೆರವುಗೊಳಿಸಿದ ಜನರೆಷ್ಟು? ಸಂಪೂರ್ಣ ಮಾಹಿತಿ ನೀಡಿದ ಸಚಿವ ಜೈಶಂಕರ್

    ದಣಿದ ದೇಹ, ಮನಸ್ಸುಗಳಿಗೆ ವಿಶ್ರಾಂತಿ ನೀಡುವ ಮಕರಾಸನ

    ಅಣ್ಣಮ್ಮದೇವಿ ಭಕ್ತೆಯ ಸರ ಕದ್ದ ಹಳೇ ಕಳ್ಳ, ಜೈಲು ಪಾಲು; 300 ಗ್ರಾಂ ಚಿನ್ನಾಭರಣ ಜಪ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts