More

    ನೀವು ವೈದ್ಯಕೀಯ ಶಿಕ್ಷಣ ಪೂರೈಸಿದ್ದರೆ ಇಲ್ಲಿದೆ ನೋಡಿ ಉದ್ಯೋಗಾವಕಾಶ

    ರಾಮನಗರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ಏರ್ಪಡಿಸಲಾಗಿದೆ. ಇದು ರೋಲಿಂಗ್ ಪ್ರಕಟಣೆಯಾಗಿರುವುದರಿಂದ ಇದರ ಕಾಲಾವಧಿ 30-03-2021ರ ವರಗೆ ಇರುತ್ತದೆ.
    ಪ್ರಸೂತಿ ತಜ್ಱರು- 2, ಮಕ್ಕಳ ತಜ್ಱರು- 1, ವೈದ್ಯಾಧಿಕಾರಿ-2, ವೈದ್ಯಾಧಿಕಾರಿ/ ಆಯುಷ್ ವೈದ್ಯರು (ಆರ್​ಬಿಎಸ್​ಕೆ)-2, ಜಿಲ್ಲಾ ಆಸ್ಪತ್ರೆ- ಗುಣಮಟ್ಟದ ವ್ಯವಸ್ಥಾಪಕರು-1, ಫಿಜಿಯೋಥೆರಪಿಸ್ಟ್- 1, ಆಡಿಯೋಮೆಟ್ರಿಕ್ ಅಸಿಸ್ಟೆಂಟ್-1, ಡಯಟ್ ಕೌನ್ಸಿಲರ್ (ಎನ್​ಆರ್​ಸಿ)-1, ಕಿರಿಯ ಮಹಿಳಾ ಆರೋಗ್ಯ ಸಹಾಯಕರು-11, ಶುಶ್ರೂಷಕಿ-6, ಹಿರಿಯ ಮಹಿಳಾ ಆರೋಗ್ಯ ಸಹಾಯಕರು-1 ಹುದ್ದೆಗಳಿವೆ.

    ಇದನ್ನೂ ಓದಿ : ನಿಮಗೆ ಜನ ಸೇವೆ ಸಲ್ಲಿಸುವ ಆಸಕ್ತಿ ಇದೆಯೆ? ಇಲ್ಲಿದೆ ಉತ್ತಮ ಅವಕಾಶ
    ಹುದ್ದೆಗಳಿಗನುಗುಣವಾಗಿ ಎಂಬಿಬಿಎಸ್, ಡಿಜಿಒ/ ಎಂಡಿ/ ಎಂಎಸ್ (ಒಬಿಜಿ)/ ಡಿಎನ್​​ಬಿ (ಒಬಿಜಿ), ಡಿಸಿಎಚ್ / ಎಂಡಿ/ ಡಿಎನ್​​ಬಿ (ಪೀಡಿಯಾಟ್ರಿಕ್ಸ್) ಆಗಿರಬೇಕು. ಜತೆಗೆ ಕೆಎಂಸಿ ನೋಂದಣಿ (ವೈದ್ಯಾಧಿಕಾರಿಗಳಿಗೆ) ಆಗಿರಬೇಕು. ಬಿಎಎಂಎಸ್/ ಬಿಎಚ್​ಎಂಎಸ್/ ಬಿಎನ್​​ವೈಎಸ್/ಬಿಯುಎಂಎಸ್/ ಸಿದ್ಧ ಪದವಿ ಜತೆಗೆ ಕೆಎಂಸಿ ನೋಂದಣಿ ಆಗಿರಬೇಕು. ಬಿಡಿಎಸ್/ ಆಯುಷ್/ ನರ್ಸಿಂಗ್ / ಲೈಫ್ ಸೈನ್ಸ್ ಪದವಿ ಸೇರಿದಂತೆ ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಅನುಭವ ಹೊಂದಿರಬೇಕು. ಕೆಲ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಜತೆಗೆ ಎಎನ್​ಎಂ ತರಬೇತಿ ಪ್ರಮಾಣಪತ್ರ, ಕೆಎನ್​ಸಿಯಲ್ಲಿ ನೋಂದಣಿಯಾಗಿಬೇಕು. ಜಿಎನ್​ಎಂ/ ಡಿಎನ್​​ಎಂ ಜತೆಗೆ ಅನುಭವ, ಕೆಎನ್​​ಸಿಯಲ್ಲಿ ನೋಂದಣಿಯಾಗಿರಬೇಕು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿ ಪ್ರಮಾಣಪತ್ರ ಜತೆಗೆ ಎಲ್​​ಎಚ್​ವಿ ತರಬೇತಿ ಪಡೆದು ಕನಿಷ್ಠ 5 ವರ್ಷ ಆರೋಗ್ಯ ಇಲಾಖೆಯಲ್ಲಿ ಅನುಭವ ಹೊಂದಿರಬೇಕು.
    ಹುದ್ದೆಗಳಿಗನುಗುಣವಾಗಿ ಗರಿಷ್ಠ 70/65/40/45 ವರ್ಷ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಮೇ 15 ರಂದು ಬೆ:ಗ್ಗೆ 10 ರಿಂದ 12 ಗಂಟೆಯೊಳಗೆ ನಿಗದಿತ ಅರ್ಜಿ ನಮೂನೆಯನ್ನು ಪಡೆದು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಯಾದ ಅಭ್ಯರ್ಥಿಗಳನ್ನು ಮಾತ್ರ ದಾಖಲಾತಿ ಪರಿಶೀಲನೆಗೆ ಪರಿಗಣಿಸಲಾಗುತ್ತದೆ. ನೇರ ಸಂದರ್ಶನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ರಾಮನಗರ- 562159 ಇಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9449843120 ಅಥವಾ 080-27273094 ಇಲ್ಲಿಗೆ ಸಂಪರ್ಕಿಸಬಹುದು. 

    ಶಾಕಿಂಗ್ ನ್ಯೂಸ್…! ಜುಲೈ ಕೊನೆಗೆ ಗರಿಷ್ಟ ಮಟ್ಟಕ್ಕೇರಲಿದೆ ಕರೊನಾ : ಡಬ್ಲುಎಚ್​​ಒ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts