More

    ರಮಣ ಮಹರ್ಷಿ ಉಪದೇಶ ಕುರಿತು ವಿಚಾರ ಸಂಕಿರಣ

    ಬೆಂಗಳೂರು: ಶ್ರೀ ರಮಣ ಮಹರ್ಷಿ ರಿಸರ್ಚ್ ಸೆಂಟರ್ ಸಂಸ್ಥೆಯು ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ಶನಿವಾರ ‘ಜ್ಞಾನಾಂಜಲಿ’ ರಮಣ ಮಹರ್ಷಿಗಳ ಉಪದೇಶ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಿದ್ದು, ನೆರೆದ ಸಭಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

    ಹಲವರ ದೈನಂದಿನ ಜೀವನದಲ್ಲಿ ರಮಣೋಪದೇಶದ ಪ್ರಭಾವ ಎಂಬ ವಿಷಯದ ಬಗ್ಗೆ ಪ್ರವಚನಗಳನ್ನು ಏರ್ಪಡಿಸಲಾಗಿತ್ತು. ದಿಲೀಪ್ ಸಿಂಹ ಹಾಗೂ ರಾಘವೇಂದ್ರರವರು ಉದ್ಘಾಟನಾ ಸಮಾರಂಭದದಲ್ಲಿ ಮಾತನಾಡಿದರು. ಶ್ರೀ ಅದ್ವಯಾನಂದ ಸರಸ್ವತಿ ಸ್ವಾಮೀಜಿ ಮತ್ತು ಹಿರಿಯ ವಾಗ್ಮಿಗುರುಬ್ರಹ್ಮ ಶ್ರೀಧರ್ ಶರ್ಮ ಮತ್ತು ಪ್ರವಚನಾಕಾರರಾದ ಮಣಿಕಂಠನ್ ಅಯ್ಯರ್ ಹಾಗೂ ಉಜ್ವಲ್ ಜಗದೀಶ್‌ರವರು ರಮಣ ಮಹರ್ಷಿಗಳ ಜೀವನ ಮತ್ತು ಬೋಧನೆಗಳ ಕುರಿತು ಪ್ರವಚನ ಮಾಡಿದರು.

    ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಲಿಂಗರಾಜುರವರು ಶಿಕ್ಷಣ ಕ್ಷೇತ್ರದಲ್ಲಿ ರಮಣರ ಜೀವನ ಮತ್ತು ಬೋಧನೆಗಳ ಪ್ರಸ್ತುತತೆ ಹಾಗೂ ಎನ್. ಆರ್. ರವಿಕುಮಾರ್‌ರವರು ಜೀವನದಲ್ಲಿ ಗುರು ಭಕ್ತಿಯ ಬೆಳಕು ಮತ್ತು ಶಂಕರರಾಮ ಶರ್ಮರವರು ವೈಜ್ಞಾನಿಕ ಶೋಧನೆ ಮತ್ತು ಆತ್ಮ ವಿಚಾರ ಎಂಬ ವಿಷಯಗಳ ಕುರಿತು ವಿಚಾರ ಮಂಡಿಸಿದರು.

    ಕಾರ್ಯಕ್ರಮದಲ್ಲಿ ವಾಸುದೇವ್ ಹಾಗೂ ವೇ.ಬ್ರ.ಸುಬ್ರಾಯ ಶರ್ಮ ಅವರ ಪ್ರವಚನಗಳಿದ್ದವು. ಸಂಸ್ಥೆಯ ಮುಖ್ಯಸ್ಥರಾದ ಡಾ. ಶಾರದ, ವೆಂಕಟೇಶ್ ದೇಶಪಾಂಡೆ, ಗಾಯಕಿ ವಿ. ರಾಧಾ ಮತ್ತಿತರರು ಉಪಸ್ಥಿತರಿದ್ದರು.

    ಜನಮನ ಗೆದ್ದ ಜ್ಞಾನಾಂಜಲಿ ಉತ್ಸವ: ಸಂಜೆ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಭಾರತೀಯ ಶಾಸೀಯ ನೃತ್ಯಗಳ ಸಮಾಗಮ ‘ರಮಣಾಂಜಲಿ’ ನೃತ್ಯ ವೈಭವವು ಸಭಿಕರ ಗಮನ ಸೆಳೆಯಿತು. ಹರಿ ಮತ್ತು ಚೇತನಾ ರವರ ಕಥಕ್ ನೃತ್ಯ, ಶ್ರೀನಿವಾಸನ್ ರಾಜೇಂದ್ರ ರವರ ಸ್ತ್ರೀವೇಷ ನೃತ್ಯ, ಉಜ್ವಲ್ ಜಗದೀಶ್ ರವರ ಕೂಚಿಪುಡಿ ನೃತ್ಯ , ದೀಪಾ ಸುಧೀರ್ ಕುಮಾರ್ ತಂಡದವರು ಮತ್ತು ರೂಪಾ ಹೇಮಂತ್ ಹಾಗೂ ವಿನ್ಸೆಂಟ್ ಪೌಲ್ ರವರ ಭರತನಾಟ್ಯ ಮನಮೋಹಕವಾಗಿ ಮೂಡಿಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts