More

    ಕ್ಸಿ ಜಿನ್​ಪಿಂಗ್​ ಪ್ರವಾಸವನ್ನು ರದ್ದುಗೊಳಿಸಿದರೇ ಶಿನ್ಜೋ ಅಬೆ?

    ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರ ಜಪಾನ್​ ಭೇಟಿ ರದ್ದುಗೊಳ್ಳುವ ಸಂಭವ ಹೆಚ್ಚಾಗಿದೆ. ಇವರ ಭೇಟಿಗೆ ಜಪಾನ್​ನಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

    ಲಡಾಖ್​ ಬಿಕ್ಕಟ್ಟಿನ ವಿಷಯದಲ್ಲಿ ಜಪಾನ್​ ಭಾರತದ ಬೆನ್ನಿಗೆ ನಿಂತಿದೆ. ಆದರೆ, ಚೀನಾ ಅಧ್ಯಕ್ಷರ ಪ್ರವಾಸ ರದ್ದಾಗಲು ಇದು ಕಾರಣವಲ್ಲ. ಬದಲಿಗೆ ಹಾಂಕಾಂಗ್​ನಲ್ಲಿ ಚೀನಾ ಜಾರಿಗೊಳಿಸಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿರುವುದ ಇದಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ವಶ; ಐವರ ಬಂಧನ

    ಕರೋನಾ ಪಿಡುಗು ಜಾಗತಿಕವಾಗಿ ವ್ಯಾಪಿಸದಿದ್ದರೆ ಕ್ಸಿ ಜಿನ್​ಪಿಂಗ್​ ಏಪ್ರಿಲ್​ನಲ್ಲೇ ಜಪಾನ್​ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ, ಸರಿಯಾಗಿ ಅದೇ ವೇಳೆಗೆ ಪಿಡುಗು ಹೆಚ್ಚಾಗಿದ್ದರಿಂದ, ಅವರ ಪ್ರವಾಸ ರದ್ದಾಗಿತ್ತು. ಇದೀಗ ಅದು ಆಗಸ್ಟ್​ಗೆ ಮರುನಿಗದಿಯಾಗಲಿತ್ತು. ಆದರೆ, ಜಪಾನ್​ನ ಆಡಳಿತಾರೂಢ ಲಿಬರಲ್​ ಡೆಮಾಕ್ರಟಿಕ್​ ಪಾರ್ಟಿ ಸದಸ್ಯರೇ ಜಿನ್​ಪಿಂಗ್​ ಭೇಟಿಗೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಹಾಂಕಾಂಗ್​ನಲ್ಲಿ ಚೀನಾದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿರುವುದರಿಂದ ಹಾಂಕಾಂಗ್​ನಲ್ಲಿರು ಜಪಾನ್​ನ ಕೈಗಾರಿಕೆಗಳು, ವಾಣಿಜ್ಯೋದ್ಯಮಿಗಳ ಸುಗಮ ಕಾರ್ಯಾಚರಣೆಗೆ ಚೀನಾದ ಈ ಕಾನೂನು ಅಡ್ಡಿಯಾಗುತ್ತದೆ ಎಂಬುದು ಇವರೆಲ್ಲರ ಆತಂಕವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಜಿನ್​ಪಿಂಗ್​ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಜಪಾನ್​ನ ಪ್ರಧಾನಿ ಶಿನ್ಜೋ ಅಬೆ, ಜಿನ್​ಪಿಂಗ್​ ಅವರ ಪ್ರವಾಸವನ್ನೇ ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಕರೊನಾಗೂ ಬಂತು ಚಿನ್ನದ ಮಾಸ್ಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts