More

    ಭಾರತದಲ್ಲಿ ಹೊಸ ವರ್ಷ 5ಜಿ ಕ್ರಾಂತಿ ಗ್ಯಾರೆಂಟಿ – ಖಾತರಿ ನೀಡಿದ್ರು ಮುಕೇಶ್ ಅಂಬಾನಿ

    ನವದೆಹಲಿ: ಭಾರತದಲ್ಲಿ 2021ರ ಜೂನ್ ನಂತರದಲ್ಲಿ 5ಜಿ ಕ್ರಾಂತಿ ನಡೆಯಲಿದೆ. ಜಿಯೋ 5ಜಿ ಸೇವೆ ಆ ಕ್ರಾಂತಿಯ ಹರಿಕಾರನಾಗಿರಲಿದೆ. ಸ್ವದೇಶಿ ನಿರ್ಮಿತ ನೆಟ್​ವರ್ಕ್​, ಹಾರ್ಡ್​ವೇರ್​ ಮತ್ತು ಟೆಕ್ನಾಲಜಿಗಳನ್ನು ಬಳಸಿಕೊಂಡೇ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್​ ಮುಕೇಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ.

    2ಜಿ ಸೇವೆ ನಿಲ್ಲಿಸಲು ನೀತಿ ಬೇಕು !

    ಜಿಯೋ ಮತ್ತು ಇತರೆ ಸೇವಾ ಪೂರೈಕೆದಾರರಾದ ಭಾರ್ತಿ ಏರ್​​ಟೆಲ್​, ವೊಡಾಫೋನ್, ಐಡಿಯಾ 4ಜಿ ಸೇವೆ ಒದಗಿಸುತ್ತಿವೆ. ಇಷ್ಟಾಗ್ಯೂ ದೇಶದಲ್ಲಿ 2ಜಿ ಬಳಕೆದಾರರ ಸಂಖ್ಯೆ 30 ಕೋಟಿಗೂ ಮೇಲಿದೆ. ಫೋನ್ ಕರೆ ಮತ್ತು ಎಸ್​ಎಂಎಸ್​ ಕಳುಹಿಸುವುದಕ್ಕಷ್ಟೇ ಸೀಮಿತವಾಗಿರುವ ಸೇವೆ ಅದು. ಈ ಸೇವಾ ವಂಚಿತ ಜನರು ಕೈಗೆಟಕುವ ದರದ ಸ್ಮಾರ್ಟ್​​ಫೋನ್ ಖರೀದಿಸಿ ಡಿಜಿಟಲ್​ ಸೇವೆಗಳನ್ನು ಪಡೆಯಲು ಸರ್ಕಾರ ನೀತಿಯೊಂದನ್ನು ರೂಪಿಸಬೇಕು ಎಂದು ಅಂಬಾನಿ ಆಗ್ರಹಿಸಿದರು.

    ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಿದ್ದು, ಜಿಯೋ ಪರಿಚಯಿಸುವ 5ಜಿ ಸೇವೆಯು ನಿಮ್ಮ ಪ್ರೇರಣಾದಾಯಿ ಆತ್ಮನಿರ್ಭರ ಭಾರತಕ್ಕೆ ಆದರ್ಶವೆನಿಸುವಂತೆ ಇರಲಿದೆ. 5ಜಿ ಸೇವೆಯು ಭಾರತದಲ್ಲಿ ನಾಲ್ಕನೆ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆಯಲಿದೆ. ಅಷ್ಟೇ ಅಲ್ಲ, ಅದನ್ನು ಮುನ್ನಡೆಸುವ ಕೆಲಸವನ್ನೂ ಮಾಡಲಿದೆ ಎಂದು ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಡಿಟಿಎಚ್​ ಸೇವೆಗಳನ್ನು ನಿಯಮದ ಚೌಕಟ್ಟಿಗೆ ತರುವ ಉದ್ದೇಶದ ಕನ್ಸಲ್ಟೇಶನ್ ಪೇಪರ್​ ಪ್ರಕಟಿಸಿದೆ ಟ್ರಾಯ್​

    ಇಂತಹ ನಿರ್ಣಾಯಕ ರಾಷ್ಟ್ರೀಯ ಅಗತ್ಯದ ಮೂಲಸೌಕರ್ಯಗಳ ವಿಚಾರದಲ್ಲಿ ಬೃಹತ್ ಪ್ರಮಾಣದ ಆಮದು ವಸ್ತುಗಳನ್ನು ನಂಬುವಂತಿಲ್ಲ. ಹೀಗಾಗಿ ಸ್ವಾವಲಂಬನೆ ಅವಶ್ಯವಾಗಿದೆ. ಭಾರತ ಶೀಘ್ರದಲ್ಲೇ ಅತಿದೊಡ್ಡ ಅತ್ಯುತ್ತಮ ದರ್ಜೆಯ ಸೆಮಿಕಂಡಕ್ಟರ್​ಗಳ ಹಬ್ ಆಗಿ ಮಾರ್ಪಡಲಿದೆ. ಈ ಕ್ಷೇತ್ರದ ಎಲ್ಲರೂ ಪರಸ್ಪರ ಕೈಜೋಡಿಸಿದಾಗ ಭಾರತದ ಯಶಸ್ಸನ್ನು ನಾವು ಖಾತರಿಗೊಳಿಸಬಹುದು ಎಂದು ಅಂಬಾನಿ ಹೇಳಿದರು. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಕೃಷಿ ಕಾನೂನು ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡಿದವರೇ ಪ್ರತಿಭಟನೆಯನ್ನೂ ನಡೆಸ್ತಿರೋದು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts