More

    ನರ್ಸರಿ ಮಕ್ಕಳಿಗೆ ಪಾಕ್​, ಬಾಂಗ್ಲಾ ರಾಷ್ಟ್ರಗೀತೆ ಕಲಿಯುವ ಹೋಂವರ್ಕ್​

    ನವದೆಹಲಿ: ಜಾರ್ಖಂಡ್​ನ ನರ್ಸರಿ ಶಾಲೆಯು ನರ್ಸರಿ ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ಒದಗಿಸುತ್ತಿದ್ದು, ಮಕ್ಕಳಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಕಲಿಯುವಂತೆ ಹೋಂವರ್ಕ್​ ಕೊಡುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದೆ.

    ಜಾರ್ಖಂಡ್​ನ ಪೂರ್ವ ಸಿಂಗ್​ಭಂ ಜಿಲ್ಲೆಯ ಘಾಟ್​ಸಿಲಾದಲ್ಲಿರು ಇರುವ ಖಾಸಗಿ ಶಾಲೆಯ ಎಲ್​ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಈ ಹೋಂವರ್ಕ್​ ಕೊಡಲಾಗಿತ್ತು. ರಾಷ್ಟ್ರವಿರೋಧಿ ಮನೋಭಾವವುಳ್ಳ ಶಿಕ್ಷಕಿ ಮಕ್ಕಳಿಗೆ ಈ ಹೋಂವರ್ಕ್​ ಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.

    ಆನ್​ಲೈನ್​ ತರಗತಿ ವೇಳೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ರಾಷ್ಟ್ರಗೀತೆಗಳ ಸಾಲುಗಳು ಮತ್ತು ಯುಟ್ಯೂಬ್​ ವಿಡಿಯೋಗಳನ್ನು ಕೂಡ ಈ ಶಿಕ್ಷಕಿ ಶಾಲೆಯ ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಹಂಚಿದ್ದರು. ಇದನ್ನು ಕಡ್ಡಾಯವಾಗಿ ಮಕ್ಕಳಿಗೆ ಕಲಿಸುವಂತೆ ಪಾಲಕರಿಗೂ ಸೂಚಿಸಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಕೊನೆಗೂ ಇತ್ಯರ್ಥವಾಯಿತು 6ನೇ ಶತಮಾನದ ದೇಗುಲವೊಂದರ ಆಡಳಿತ ವಿವಾದ, ಸುಪ್ರೀಂಕೋರ್ಟ್​ ಹೇಳಿದ್ದೇನು?

    ಈ ಹೋಂವರ್ಕ್​ ಬಗ್ಗೆ ಮಕ್ಕಳ ಪಾಲಕರು ಭಾರಿ ಆಕ್ಷೇಪ ವ್ಯಕ್ತಪಡಿಸಿ ಶಾಲೆಯ ಆಡಳಿತ ಮಂಡಳಿಯ ಗಮನಕ್ಕೂ ತಂದಿದ್ದರು. ಇದು ಜಾರ್ಖಂಡ್​ ಬಿಜೆಪಿ ವಕ್ತಾರ ಕುನಾಲ್​ ಸಾರಂಗಿ ತನಕ ತಲುಪಿ, ಅವರು ಈ ವಿಷಯವಾಗಿ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನು ಆಧರಿಸಿ ಜಿಲ್ಲಾಡಳಿ ಇಬ್ಬರು ಸದಸ್ಯರ ತನಿಖಾ ತಂಡವನ್ನು ರಚಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕಿ, ಶಾಲೆಯ ಆಡಳಿತ ಮಂಡಳಿ ಮಕ್ಕಳ ಸಾಮಾನ್ಯಜ್ಞಾನ ಹೆಚ್ಚಿಸುವಂತೆ ಸೂಚಿಸಿದ್ದರು. ಜತೆಗೆ ಅವರೇ ಪಾಕ್​ ಮತ್ತು ಬಾಂಗ್ಲಾ ರಾಷ್ಟ್ರಗೀತೆಗಳನ್ನು ಮಕ್ಕಳಿಗೆ ಹೇಳಿಕೊಡುವಂತೆ ತಿಳಿಸಿದ್ದರು. ಅದರಂತೆ ನಾನು ಈ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾರೆ.

    ಈ ಪ್ರಮಾದಕ್ಕೆ ಕ್ಷಮೆಯಾಚಿಸಿರುವ ಶಾಲೆಯ ಪ್ರಾಂಶುಪಾಲರು, ಈ ತಕ್ಷಣವೇ ಆ ಹೋಂವರ್ಕ್​ ಅನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
    ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಶಿಕ್ಷಣ ಸಚಿವ ಜಗನ್ನಾಥ್​ ಮಹಾರೋ, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಒಂದು ವೇಳೆ ಮಕ್ಕಳಲ್ಲಿ ರಾಷ್ಟ್ರವಿರೋಧಿ ಮನೋಭಾವ ಬಿತ್ತಲು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕಿ ಯತ್ನಿಸಿರುವುದು ಕಂಡುಬಂದರೆ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಅಸ್ಸಾಂ ಬಿಜೆಪಿಯಲ್ಲಿ ಗ್ರೂಪಿಸಂ?: ಪಕ್ಷದಿಂದ ದೂರ ಸರಿದ ಶಾಸಕ ಶೈಲಾದಿತ್ಯ ದೇವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts