More

    ಕೊನೆಗೂ ಇತ್ಯರ್ಥವಾಯಿತು 6ನೇ ಶತಮಾನದ ದೇಗುಲವೊಂದರ ಆಡಳಿತ ವಿವಾದ, ಸುಪ್ರೀಂಕೋರ್ಟ್​ ಹೇಳಿದ್ದೇನು?

    ನವದೆಹಲಿ: ಕೇರಳದ ತಿರುವನಂತಪುರದಲ್ಲಿರುವ ಆರನೇ ಶತಮಾನದ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತದ ವಿವಾದಕ್ಕೆ ಸುಪ್ರೀಂಕೋರ್ಟ್​ ಕೊನೆಗೂ ಮಂಗಳ ಹಾಡಿದೆ. ದೇವಸ್ಥಾನದ ಆಡಳಿತವನ್ನು ಟ್ರಾವಂಕೋರ್​ನ ರಾಜವಂಶಸ್ಥರಿಗೇ ಬಿಟ್ಟುಕೊಟ್ಟು ಆದೇಶಿಸಿದೆ. ಈ ವಿಷಯವಾಗಿ 2011ರ ಜನವರಿಯಲ್ಲಿ ಕೇರಳ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಅದು ತಿರಸ್ಕರಿಸಿದೆ.

    ಇದಕ್ಕೂ ಮುನ್ನ ದೇವಸ್ಥಾನದ ಆಡಳಿತ ಯಾರ ಕೈಯಲ್ಲಿ ಇರಬೇಕು ಎಂಬ ವಿವಾದದ ಬಗ್ಗೆ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್​, ರಾಜವಂಶಸ್ಥರ ಟ್ರಸ್ಟ್​ ನೇತೃತ್ವದ ದೇವಸ್ಥಾನದ ಆಡಳಿತವನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಟ್ಟು ಆದೇಶಿಸಿತ್ತು.

    ಕೊನೆಗೂ ದೇವರು ಕಣ್ಣುಬಿಟ್ಟ. ಸುಪ್ರೀಂಕೋರ್ಟ್​ನ ತೀರ್ಪನ್ನು ಸಂಪೂರ್ಣವಾಗಿ ಓದಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಟ್ರಾವಂಕೋರ್​ನ ರಾಜವಂಶಸ್ಥೆ ಗೌರಿ ಲಕ್ಷ್ಮೀಭಾಯಿ ಹೇಳಿದ್ದಾರೆ.

    ಇದನ್ನೂ ಓದಿ: ಮಾವನ ಜತೆ ಸೇರಿ ಗಿಡ ನೆಟ್ಟ ಸಮಂತಾ …

    ಕೊನೆಗೂ ವಿವಾದ ಕೊನೆಯಾಯಿತಲ್ಲ ಎಂಬ ಖುಷಿಯಲ್ಲಿ ಪದ್ಮನಾಭ ದೇಗುಲದ ಎದುರು ಜಮಾಯಿಸಿದ ಜನರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಕೆಲವರು ಆನಂದಬಾಷ್ಪ ಸುರಿಸಿದರು. ಕೇರಳ ಸರ್ಕಾರ ಕೂಡ ಸುಪ್ರೀಂಕೋರ್ಟ್​ನ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದೆ.

    ದೇವಸ್ಥಾನದ ದಾಸ್ತಾನುಗಾರದಲ್ಲಿರುವ ದೇವರಿಗೆ ಸಂಬಂಧಪಟ್ಟ ವಸ್ತುಗಳ ಲೆಕ್ಕ ಹಾಕುವಂತೆ ನ್ಯಾಯಾಲಯ​ 2011ರ ಮೇನಲ್ಲಿ ಆದೇಶಿಸಿತ್ತು. ಅದರಂತೆ ದೇಗುಲದ ಪ್ರಾಂಗಣದಲ್ಲಿದ್ದ 6 ದಾಸ್ತಾನುಗಾರರ ಪೈಕಿ 5 ದಾಸ್ತಾನುಗಾರವನ್ನು ತೆರೆದು ಪರಿಶೀಲಿಸಿದಾಗ ಐತಿಹಾಸಿಕವಾಗಿ ಭಾರಿ ಮೌಲ್ಯ ಹೊಂದಿರುವ 90 ಸಾವಿರ ಕೋಟಿ ರೂ.ಗೂ ಹೆಚ್ಚಿನ ಚಿನ್ನಾಭರಣಗಳು ಮತ್ತಿತರ ವಸ್ತುಗಳು ಪತ್ತೆಯಾಗಿದ್ದವು. ಆರನೇ ದಾಸ್ತಾನುಗಾರವನ್ನು ತೆರೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಅದನ್ನು ಹಾಗೆಯೇ ಬಿಡಲಾಗಿದೆ. ಅಲ್ಲದೆ ಅದನ್ನು ತೆಗೆಯದಂತೆ ಸುಪ್ರೀಂಕೋರ್ಟ್​ ಆದೇಶಿಸಿತು. ಇದಾದ ನಂತರದಲ್ಲಿ ಪದ್ಮನಾಭ ದೇವಾಲಯದ ಭಾರಿ ಪ್ರಖ್ಯಾತಿ ಪಡೆದುಕೊಂಡಿತ್ತು.

    ರಾಜವಂಶಸ್ಥರು ನಿಯೋಜಿಸಿದ್ದ ಟ್ರಸ್ಟ್​ 2014ರ ಏಪ್ರಿಲ್​ವರೆಗೂ ದೇವಸ್ಥಾನದ ಆಡಳಿತದ ಜವಾಬ್ದಾರಿ ಹೊಂದಿತ್ತು. ಆದರೆ, ದೇವಸ್ಥಾನದ ಆಡಳಿತದಲ್ಲಿ ಅವ್ಯವಹಾರಗಳು ಆಗುತ್ತರುವ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸುಪ್ರೀಂಕೋರ್ಟ್​ 2012ರಲ್ಲಿ ನೇಮಿಸಿದ್ದ ಆಮಿಕಸ್​ ಕ್ಯೂರಿ ದೇವಸ್ಥಾನದ ಆಡಳಿತದಲ್ಲಿ ಭಾರಿ ಅವ್ಯವಹಾರಗಳು ನಡೆಯುತ್ತಿವೆ ಎಂಬುದನ್ನು ಆಧಾರ ಸಮೇತ ಬಹಿರಂಗಪಡಿಸಿದ್ದರು. ಆನಂತರದಲ್ಲಿ ದೇವಸ್ಥಾನದ ಆಡಳಿತವನ್ನು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ನಾಲ್ವರು ಸದಸ್ಯರ ಸಮಿತಿಗೆ ಒಪ್ಪಿಸಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿತ್ತು.

    ಯುಕಾಲಿಪ್ಟಸ್​ ನೆಕ್ಲೆಸ್​ ಧರಿಸಿದ್ರೆ ಕರೊನಾ ಸೋಂಕು ಹತ್ತಿರವೂ ಸುಳಿಯಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts