More

    ಹಲವು ದಾಖಲೆ ಬರೆದ ವಿಂಡೀಸ್​ ನಾಯಕ ಹೋಲ್ಡರ್​

    ಸೌಥಾಂಪ್ಟನ್​: ಟೆಸ್ಟ್​ ಕ್ರಿಕೆಟ್​ ಪುನರಾರಂಭ ಕಂಡ ಮೊದಲ ಪಂದ್ಯದಲ್ಲೇ ವೆಸ್ಟ್​ ಇಂಡೀಸ್​ ನಾಯಕ ಜೇಸನ್​ ಹೋಲ್ಡರ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 42 ರನ್​ಗೆ 6 ವಿಕೆಟ್​ ಕಬಳಿಸಿ ಆತಿಥೇಯ ಇಂಗ್ಲೆಂಡ್​ ತಂಡವನ್ನು 2ನೇ ದಿನದಾಟದ ಚಹಾ ವಿರಾಮದ ವೇಳೆಗೆ 204 ರನ್​ಗೆ ಕಟ್ಟಿಹಾಕುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.

    ಇಂಗ್ಲೆಂಡ್​ ನೆಲದಲ್ಲಿ ಅತ್ಯುತ್ತಮ ಬೌಲಿಂಗ್​ ನಿರ್ವಹಣೆ ತೋರಿದ ವೆಸ್ಟ್​ ಇಂಡೀಸ್​ ನಾಯಕ ಎಂಬ ಹೆಗ್ಗಳಿಕೆ ಈಗ ಜೇಸನ್​ ಹೋಲ್ಡರ್ ಅವರದಾಗಿದೆ. 1948ರಲ್ಲಿ ಜಾನ್​ ಗೋಡ್ಡರ್ಡ್​ 31 ರನ್​ಗೆ 5 ವಿಕೆಟ್​ ಕಬಳಿಸಿದ್ದು ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು. ಗ್ಯಾರಿ ಸೋಬರ್ಸ್​ 1966ರಲ್ಲಿ 41ರನ್​ಗೆ 5 ವಿಕೆಟ್​ ಕಬಳಿಸಿದ್ದು ಅನಂತರದ ಅತ್ಯುತ್ತಮ ನಿರ್ವಹಣೆಯಾಗಿತ್ತು. ಇನ್ನು ಚೆಂಡಿಗೆ ಎಂಜಲು ಹಚ್ಚದೆ 5 ವಿಕೆಟ್​ ಗೊಂಚಲು ಪಡೆದ ಮೊದಲ ಬೌಲರ್​ ಎಂಬ ವಿಶೇಷ ಹೆಗ್ಗಳಿಕೆಯೂ ಕರೊನಾ ಕಾಲದ ಟೆಸ್ಟ್​ನಲ್ಲಿ ಹೋಲ್ಡರ್​ಗೆ ಒಲಿದಿದೆ.

    ಇದನ್ನೂ ಓದಿ: ಟೆಸ್ಟ್​ ಕ್ರಿಕೆಟ್​ ಶುರುವಾಯ್ತು, ಏಕದಿನ-ಟಿ20 ಯಾವಾಗ ಆರಂಭ ಗೊತ್ತೇ?

    ಒಟ್ಟಾರೆ ನಾಯಕನೊಬ್ಬ ಇಂಗ್ಲೆಂಡ್​ ವಿರುದ್ಧ ತೋರಿದ 4ನೇ ಅತ್ಯುತ್ತಮ ನಿರ್ವಹಣೆ ಇದಾಗಿದೆ. 1987ರಲ್ಲಿ ಪಾಕಿಸ್ತಾನ ಇಮ್ರಾನ್​ ಖಾನ್​ ಲೀಡ್ಸ್​ನಲ್ಲಿ 40 ರನ್​ಗೆ 7 ವಿಕೆಟ್​ ಕಬಳಿಸಿದ್ದು ಅತ್ಯುತ್ತಮ ನಿರ್ವಹಣೆಯಾಗಿದೆ. ಇನ್ನು ವೆಸ್ಟ್​ ಇಂಡೀಸ್​ ನಾಯಕ ಟೆಸ್ಟ್​ ಕ್ರಿಕೆಟ್​ನಲ್ಲಿ ತೋರಿದ 4ನೇ ಅತ್ಯುತ್ತಮ ನಿರ್ವಹಣೆಯೂ ಇದಾಗಿದೆ. ಕಟ್ರ್ನ್​ ವಾಲ್ಶ್​ 1995ರಲ್ಲಿ ವೆಲ್ಲಿಂಗ್ಟನ್​ನಲ್ಲಿ 37 ರನ್​ಗೆ 7 ವಿಕೆಟ್​ ಕಬಳಿಸಿದ್ದು ಅತ್ಯುತ್ತಮವಾಗಿದೆ.

    2ನೇ ದಿನ ಇಂಗ್ಲೆಂಡ್​ಗೆ ಕಡಿವಾಣ ಹಾಕಿದ ವೆಸ್ಟ್​ ಇಂಡೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts