More

    ಗೆಲುವಿಗೆ ದಾರಿಯಾಗಲಿದೆ ಜೆಡಿಎಸ್ ಪ್ರಣಾಳಿಕೆ: ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ಅಭಿಮತ

    ಬೆಂಗಳೂರು: 2023ನೇ ಸಾಲಿನ ಸಾರ್ವತ್ರಿಕ ಚುನಾವಣೆೆ ನಿಮಿತ್ತ ಜೆಡಿಎಸ್ ಪಕ್ಷ ಬಿಡುಗಡೆ ಮಾಡಿರುವ ಜನಪರ ಪ್ರಣಾಳಿಕೆಯು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ವರದಾನವಾಗಲಿದೆ ಎಂದು ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ಹೇಳಿದ್ದಾರೆ.

    ಮಲ್ಲಸಂದ್ರದ ಪೈಪ್​ಲೈನ್ ಉದ್ಯಾನ ವನದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿ ಮಾತನಾಡಿದರು. ರೈತರು, ಮಹಿಳೆಯರು, ವೃದ್ಧರು, ಶ್ರಮಿಕರು ಒಳಗೊಂಡಂತೆ ಸಮಾಜದ ಎಲ್ಲ ವರ್ಗದವರ ಜೀವನ ಮಟ್ಟ ಸುಧಾರಣೆಗೆ ಪ್ರಣಾಳಿಕೆ ಪೂರಕವಾಗಿದ್ದು, ಬಡವರ ಕಷ್ಟಗಳನ್ನು ಪರಿಹರಿಸಿ ಅಸಹಾಯಕರಿಗೆ ಜೀವನ ಭದ್ರತೆ ಒದಗಿಸುವ, ದೇಶದಲ್ಲೇ ಮಾದರಿ ಪ್ರಣಾಳಿಕೆ ಇದಾಗಿದೆ ಎಂದರು.

    ಇದನ್ನೂ ಓದಿ: ಪ್ರಚಾರ ಕಣದಲ್ಲಿ ಇಂದಿನಿಂದ ಪ್ರಧಾನಿ ಮೋದಿ ಅಬ್ಬರ: ಇಂದು 3 ಪ್ರಚಾರಸಭೆ, ರಾಜಧಾನಿಯಲ್ಲಿ ರೋಡ್ ಶೋ

    ದಾಸರಹಳ್ಳಿಯಲ್ಲಿ ಹಲವು ವರ್ಷಗಳಿಂದ ಬಾಕಿಯಿದ್ದ ರಾಜಕಾಲುವೆ, ತಡೆಗೋಡೆ ನಿರ್ವಣ, ಸೇರಿ ರಸ್ತೆ, ಒಳಚರಂಡಿ ಅಭಿವೃದ್ಧಿ, ಕಾವೇರಿ ನೀರು ಪೂರೈಕೆ ಸೇರಿ ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ಕಳೆದ 25ರಿಂದ 30 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡು, ಅಗತ್ಯ ಭೂ ದಾಖಲೆಗಳಿಲ್ಲದೆ ಅತಂತ್ರರಾಗಿದ್ದ ನೂರಾರು ಬಡ ಜನರಿಗೆ ಹಕ್ಕುಪತ್ರ ಹಂಚಿಕೆ ಮಾಡಿದ್ದೇನೆ ಎಂದರು.

    ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ಬಂದ ಮೇಲೆ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ, ಮಾಗಡಿ ರಸ್ತೆಯಿಂದ ಪೀಣ್ಯ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ವಿವಾದವನ್ನು ಬಗೆಹರಿಸಿ ನಾಗರಿಕರು ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ವಿುಕರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಅಲ್ಲದೆ, ಕೋವಿಡ್ ಸಂಕಷ್ಟದಲ್ಲಿ ಜನರ ಜೀವ ರಕ್ಷಣೆಗೆ ಪ್ರಾಣರಕ್ಷಣೆಗೆ ಶ್ರಮಿಸಿದ್ದೇನೆ. ಜನಾಶೀರ್ವಾದಿಂದ ಮತ್ತೆ ಆಯ್ಕೆಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

    ನಾನು-ಪತಿ ಡಬಲ್ ಇಂಜಿನ್​ನಂತೆ ಸೇವೆ ಸಲ್ಲಿಸುತ್ತೇವೆ: ಮಂಜುಳಾ ಅರವಿಂದ ಲಿಂಬಾವಳಿ ಭರ್ಜರಿ ಪ್ರಚಾರ

    ಸಪ್ತಗಿರಿಗೌಡ ಪರವಾಗಿ ಅಣ್ಣಾಮಲೈ ರೋಡ್ ಶೋ: ಗಾಂಧಿನಗರದಲ್ಲಿ ಮತಯಾಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts