More

    ಸಾವಿರಾರು ಕಿಮೀ ಸುತ್ತಿದ ರಥಯಾತ್ರೆ, 19 ದಿನಗಳ ನಿರಂತರ ಬಾಲಕಾರ್ವಿುಕ ಪದ್ಧತಿ ಜಾಗೃತಿ ಜಾಥಾ

    ಬೆಂಗಳೂರು ಗ್ರಾಮಾಂತರ: ಬಾಲಕರನ್ನು ಕಾರ್ವಿುಕರನ್ನಾಗಿ ದುಡಿಮೆಗೆ ಬಳಸಿಕೊಳ್ಳುವ ಪದ್ಧತಿ ಬಗ್ಗೆ ಜಿಲ್ಲೆಯಲ್ಲಿ ಜ.19ರಂದು ಚಾಲನೆ ನೀಡಿದ ಬಾಲಕಾರ್ವಿುಕ ಪದ್ಧತಿ ಜಾಗೃತಿ ಜಾಥಾ ಆಟೋ ರಥಯಾತ್ರೆ ಜಿಲ್ಲೆಯಾದ್ಯಂತ ಸುಮಾರು ಎರಡೂವರೆ ಸಾವಿರ ಕಿಮೀ ಕ್ರಮಿಸಿ ಫೆ.6ಕ್ಕೆ ನಿಗದಿತ ಗುರಿ ತಲುಪಿದೆ.

    19 ದಿನಗಳ ರಥಯಾತ್ರೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡು ವಿನೂತನ ಪ್ರಯೋಗಕ್ಕೆ ಕೈಜೋಡಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ಬಾಲಕಾರ್ವಿುಕ ಪದ್ಧತಿ ಬಗ್ಗೆ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿಸಬೇಕೆಂಬ ಜಿಲ್ಲಾಡಳಿತದ ಯೋಜನೆಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

    ಬಾಲಕಾರ್ವಿುಕರು ಪತ್ತೆಯಾಗಿಲ್ಲ: ಶಾಲೆ ಇಲ್ಲದಿದ್ದರಿಂದ ತರಕಾರಿ ವ್ಯಾಪಾರ, ಸಣ್ಣಪುಟ್ಟ ಅಂಗಡಿಗಳಲ್ಲಿ ಪಾಲಕರಿಗೆ ಸಹಾಯಕರಾಗಿದ್ದ ಕೆಲವು ಮಕ್ಕಳನ್ನು ಗುರುತಿಸಿ ಅವರಿಗೆ ಶಾಲೆಯ ಸಂಪರ್ಕ ಕಲ್ಪಿಸಲಾಗಿದೆ. ಪಾಲಕರಲ್ಲಿ ಅರಿವು ಮೂಡಿಸಲಾಗಿದೆ, ಇದನ್ನು ಹೊರತುಪಡಿಸಿ ಬಾಲಕಾರ್ವಿುಕರು ಪತ್ತೆಯಾಗಿಲ್ಲ ಎಂದು ರಥಯಾತ್ರೆ ಸಿಬ್ಬಂದಿ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಯಿಂದ ಚಾಲನೆ: ಜಿಲ್ಲಾಡಳಿತ, ಜಿಲ್ಲಾ ಕಾನೂನು ಪ್ರಾಧಿಕಾರ, ಕಾರ್ವಿುಕ ಇಲಾಖೆ, ಜಿಲ್ಲಾ ಕಾರ್ವಿುಕ ಯೋಜನಾ ಸೊಸೈಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬಾಲಕಾರ್ವಿುಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರಥಯಾತ್ರೆಗೆ ಚಾಲನೆ ನೀಡಿದ್ದರು.

    ಜೈಲು ಶಿಕ್ಷೆ ಖಚಿತ: 14 ವರ್ಷದೊಳಗಿನ ಯಾವುದೇ ಮಕ್ಕಳನ್ನು, ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ, ಉದ್ಯೋಗಕ್ಕೆ ನಿಯೋಜನೆಗೊಳಿಸಿದಲ್ಲಿ ಅಂತಹವರಿಗೆ ಕನಿಷ್ಠ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 20 ಸಾವಿರದಿಂದ 50 ಸಾವಿರ ರೂಪಾಯಿಯಂತೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

    ಬಾಲ ಕಾರ್ವಿುಕರನ್ನು ದುಡಿಸಿಕೊಳ್ಳುವುದು ಅಪರಾಧ. ಜಿಲ್ಲೆಯಲ್ಲಿ ಬಾಲ ಕಾರ್ವಿುಕ ಪದ್ಧತಿಯನ್ನು ಸಂಪೂರ್ಣವಾಗಿ ನಿಮೂಲನೆಗೊಳಿಸಲು ಸಾರ್ವಜನಿಕರು ಹಾಗೂ ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ. ಮುಖ್ಯವಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಥಯಾತ್ರೆ ಸಹಕಾರಿಯಾಗಿದೆ.

    | ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ

    ಬಾಲ್ಯದಲ್ಲಿಯೇ ಮಕ್ಕಳನ್ನು ಉದ್ಯೋಗಳಲ್ಲಿ ತೊಡುಗುವಂತೆ ಮಾಡಿದರೆ ಅಂತಹ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಬಲಹೀನರಾಗುತ್ತಾರೆ. ಬಾಲ ಕಾರ್ವಿುಕ ವ್ಯವಸ್ಥೆ ನಿಮೂಲನೆಗಾಗಿ ಪ್ರತಿಯೊಬ್ಬರೂ ಸಹಕರಿಸುವ ಮೂಲಕ ಉತ್ತಮ ಸಮಾಜ ನಿರ್ವಣಕ್ಕೆ ನೆರವಾಗಬೇಕೆಂಬ ನಿಟ್ಟಿನಲ್ಲಿ ಚಾಲನೆ ನೀಡಿದ ರಥಯಾತ್ರೆ ಸಾರ್ಥಕತೆ ಮೂಡಿಸಿದೆ.

    | ಡಾ.ಜಗದೀಶ್ ಕೆ ನಾಯಕ್, ಅಪರ ಜಿಲ್ಲಾಧಿಕಾರಿ

    ಎಸ್​ಸಿಪಿ ಹಾಗೂ ಟಿಎಸ್​ಪಿ ಯೋಜನೆಯಡಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ವಿುಕರ ಕಾಯ್ದೆ 1986ರ ಹಾಗೂ 2016 ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಟೋ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಪ್ರತಿ ಹೋಬಳಿವಾರು ಪಂಚಾಯಿತಿ ವ್ಯಾಪ್ತಿಗಳಲ್ಲಿ ಆಟೋ ಸಂಚಾರ ನಡೆಸಲಾಗಿದೆ. ಕರಪತ್ರ ವಿತರಣೆ, ಸ್ಟಿಕ್ಕರ್ ಅಂಟಿಸುವುದು ಸೇರಿ ಜಾಗೃತಿ ಮೂಡಿಸಲಾಗಿದೆ.

    | ಎಸ್.ಸುಬ್ಬಾರಾವ್, ಜಿಲ್ಲಾ ಬಾಲಕಾರ್ವಿುಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts