ನವದೆಹಲಿ: ವಾತಾವರಣದಲ್ಲಿರುವ ಕರೊನಾ ವೈರಸ್ಗಳನ್ನು ನಿಗ್ರಹಿಸಲು ಒಝೋನ್ ಪರಿಣಾಮಕಾರಿಯಾಗಿದೆ…!
ಜಪಾನ್ನ ತಜ್ಞರು ಕಂಡುಕೊಂಡಿರುವ ಸತ್ಯವಿದು. ಮುಚ್ಚಿದ ಚೇಂಬರ್ನಲ್ಲಿ ಕರೊನಾ ವೈರಸ್ನ ಮಾದರಿಗಳನ್ನು ಬಳಸಿ ನಡೆಸಿದ ಪ್ರಯೋಗದಲ್ಲಿ ಈ ಫಲಿತಾಂಶ ಕಂಡು ಬಂದಿದೆ. ಓಝೋನ್ ಅನಿಲವು ಕರೊನಾ ವೈರಸ್ ಕಣಗಳನ್ನು ನಿಷ್ಕ್ರಿಯಗೊಳಿಸುತ್ತದೆ ಎಂಬುದು ಗೊತ್ತಾಗಿದೆ.
ಇದರಿಂದ ಆಸ್ಪತ್ರೆಗಳಲ್ಲಿ ರೋಗಿಯ ತಪಾಸಣೆ ಕೊಠಡಿ ಹಾಗೂ ನಿರೀಕ್ಷಣಾ ಪ್ರದೇಶಗಳಲ್ಲಿನ ಸೋಂಕು ನಿವಾರಿಸಲು ಈ ವಿಧಾನ ಅತ್ಯಂತ ಪ್ರಶಸ್ತವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ; ಶಾಲಾ- ಕಾಲೇಜು ಮತ್ತೆ ಬಂದ್; ಫ್ಯಾನ್ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…!
ಫುಜಿಟಾ ಆರೋಗ್ಯ ವಿವಿಯ ತಜ್ಞರು ಈ ವಿಷಯ ತಿಳಿಸಿದ್ದಾರೆ. ಒಝೋನ್ ಅನಿಲದ 0.05ದಿಂದ 0.1 ಪಿಪಿಎಂ ( ಪಾರ್ಟ್ಸ್ ಪರ್ ಮಿಲಿಯನ್) ಪ್ರಮಾಣವು ಮಾನವರಿಗೆ ಹಾನಿಕಾರಕವಲ್ಲ. ಆದರೆ, ಕರೊನಾ ವೈರಸ್ಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಚ್ಚಿದ ಚೇಂಬರ್ನಲ್ಲಿ ಕರೊನಾ ವೈರಸ್ಗಳನ್ನು ಬಿಟ್ಟು, ಒಝೋನ್ ಅನಿಲವನ್ನು ಹರಿಸಲಾಗಿತ್ತು. ಕಡಿಮೆ ಪ್ರಮಾಣದಲ್ಲಿ 10 ತಾಸುಗಳವರೆಗೆ ಹರಿಸಿದ ಅನಿಲದಿಂದಾಗಿ ಕರೊನಾ ವೈರಸ್ ಪ್ರಮಾಣ ಶೇ.90 ಕಡಿಮೆಯಾಗಿರುವುದು ಕಂಡುಬಂದಿದೆ. ನಿರಂತರವಾಗಿ ಕಡಿಮೆ ಪ್ರಮಾಣದಲ್ಲಿ ಓಜೋನ್ ಅನಿಲ ಹರಿಸುತ್ತಿದ್ದರೆ ಕರೊನಾ ವೈರಸ್ಗಳನ್ನು ನಿಯಂತ್ರಿಸಬಹುದು. ಜನರಿರುವ ಸಂದರ್ಭದಲ್ಲೂ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ; ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್ ಹರಡಲು ಇವರೇ ಕಾರಣ….!
ಅದರಲ್ಲೂ ಹೆಚ್ಚಿನ ಆರ್ರ್ದತೆ ಇರುವ ಸನ್ನಿವೇಶದಲ್ಲಿ ಅಥವಾ ವಾತಾವರಣದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಒಝೋನ್ ಆಮ್ಲಜನಕದ ಮಾಲಿಕ್ಯೂಲ್ ಆಗಿದ್ದು, ಹಲವು ವೈರಸ್ಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿ ಹೊಂದಿದೆ. ಈ ಹಿಂದೆಯೂ ಇದರ ಹೆಚ್ಚಿನ ಸಾಂದ್ರತೆ (1- 6 ಪಿಪಿಎಂ) ಕರೊನಾಗೆ ಮಾರಕವಾಗಲಿದೆ ಎಂಬುದು ಗೊತ್ತಾಗಿತ್ತು. ಆದರೆ, ಅದರಿಂದ ಮಾನವರಿಗೂ ಅಪಾಯ ಸಂಭವಿಸಬಲ್ಲದು ಎಂದು ಕಂಡುಕೊಳ್ಳಲಾಗಿತ್ತು.
ವೈದ್ಯರು ಬಳಸಿದ ಪಿಪಿಇ ಕಿಟ್ನ ಸೋಂಕು ನಿವಾರಣೆಗೆ ಒಝೋನ್ ಬಳಸಬಹುದು ಎಂದು ಜಾರ್ಜಿಯಾ ತಾಂತ್ರಿಕ ಸಂಸ್ಥೆ ಸಂಶೋಧಕರು ಹೇಳಿದ್ದರು.
ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್ ಟ್ರಯಲ್; ಮೈಸೂರು ಸೇರಿ 17 ಕಡೆ ಪ್ರಯೋಗ