More

    ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ್ತು ರಾಜಕೀಯ ಕಸರತ್ತುಗಳು

    | ಮೋಹನದಾಸ ಕಿಣಿ ಕಾಪು

    ಚುನಾವಣೆ ವರ್ಷದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುವುದು ಎಲ್ಲರಿಗೂ ಗೊತ್ತು. ಮತದಾರರ ಮೊಣಗಂಟಿಗೆ ತುಪ್ಪ ಸವರುವ ಮೂಲಕ ಮಂಕುಬೂದಿ ಎರಚುವುದರಲ್ಲಿ ಯಾವ ಪಕ್ಷವಾಗಲೀ ಯಾವ ದೇಶವಾಗಲೀ ಹಿಂದುಳಿದಿಲ್ಲ. ಇದರ ಒಂದಂಶವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೊಷಿಸಿದ ವೃತ್ತಿಪರ ವೀಸಾಗಳಿಗೆ ನಿರ್ಬಂಧದ ಆದೇಶ. ಇಂತಹದೊಂದು ಆದೇಶ ಹೊರಡಿಸುವುದಾಗಿ ಹೇಳಲು ಆರಂಭಿಸಿ ಒಂದೆರಡು ತಿಂಗಳೇ ಕಳೆದಿವೆ. ಈಗ ಆದೇಶ ಹೊರಬಿದ್ದಿದೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ್ತು ರಾಜಕೀಯ ಕಸರತ್ತುಗಳುಮೊದಲಿಗೆ ಈ ಆದೇಶದಡಿಯಲ್ಲಿ ಯಾವ ವೀಸಾಗಳಿಗೆ ‘ತಾತ್ಕಾಲಿಕ ನಿರ್ಬಂಧ’ ವಿಧಿಸಲಾಗಿದೆ ಮತ್ತು ಅಂತಹ ನಿರ್ಬಂಧದ ಅವಧಿ ಬಗ್ಗೆ ಸ್ವಲ್ಪ ಗಮನಿಸಬೇಕು. ನಿಷೇಧಕ್ಕೆ ಒಳಗಾಗಿರುವ ವೀಸಾ ಏ1ಆ, ಏ4, ಔ1. ಹಾಗೂ ನಿಷೇಧದ ಅವಧಿ ಈ ವರ್ಷದ ಡಿಸೆಂಬರ್ ತನಕ. ಇಂತಹ ವೀಸಾಗಳನ್ನು ತಾತ್ಕಾಲಿಕ ನೆಲೆಯಲ್ಲಿ ಅಮೆರಿಕಕ್ಕೆ ಬರುವ ಸಾಫ್ಟ್​ವೇರ್ ಇಂಜಿನಿಯರಿಂಗ್ ವೃತ್ತಿಪರರಿಗೆ ನೀಡಲಾಗುತ್ತದೆ. ಇದರಲ್ಲಿ ಪ್ರತಿಭಾವಂತ ವೃತ್ತಿಪರ ಪದವೀಧರರು ಮತ್ತು ಅವರ ಪತಿ ಅಥವಾ ಪತ್ನಿ ಸೇರುತ್ತಾರೆ. ಆದರೆ ಎಚ್4 ಎಂಬುದು ಅವಲಂಬಿತರ ವೀಸಾ. ಅವರು ಉದ್ಯೋಗ ಮಾಡುವಂತಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಈ ವರ್ಗದ ಉದ್ಯೋಗಿಗಳು ಭಾರತೀಯ ಮೂಲದ ಸಂಸ್ಥೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೂಗಲ್, ಫೇಸ್ಬುಕ್, ಮೈಕ್ರೋಸಾಫ್ಟ್ ಮುಂತಾದ ಅಮೆರಿಕ ಮೂಲದ ಸಂಸ್ಥೆಗಳೇ ಹೆಚ್ಚು. ಈ ನಿಷೇಧದಿಂದ ಇಂಥ ಮಾಹಿತಿ-ತಂತ್ರಜ್ಞಾನ ದಿಗ್ಗಜರಿಗೇ ಹೆಚ್ಚಿನ ಹೊಡೆತ ಬೀಳುತ್ತದೆ. ಆದ್ದರಿಂದ ಗೂಗಲ್ ಸಂಸ್ಥೆಯ ಮುಖ್ಯಸ್ಥ, ಭಾರತೀಯ ಮೂಲದ ಸುಂದರ ಪಿಚ್ಚೈ ಈ ಆದೇಶವನ್ನು ಖಂಡಿಸಿದ್ದಾರೆ. ಎರಡನೆಯದಾಗಿ ಇಂಥ ವೀಸಾಗಳಿಗೆ ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಒಟ್ಟು 85,000ದಷ್ಟು ಈ ವೀಸಾ ನೀಡಲಾಗುತ್ತದೆ. ಆದರೆ ಸ್ವೀಕೃತವಾಗುವ ಅರ್ಜಿಗಳ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚು. ಹಿಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಆರೋಗ್ಯ ಕ್ಷೇತ್ರದ ದುಬಾರಿ ವೆಚ್ಚದ ನಿರ್ವಹಣೆಗೆ ಈ ವೀಸಾ ಶುಲ್ಕವನ್ನು ಹಲವು ಪಟ್ಟು ಹೆಚ್ಚಿಸಿ, ಸ್ವೀಕೃತವಾದ ಅರ್ಜಿಗಳಲ್ಲಿ ಲಾಟರಿ ವಿಧಾನದಲ್ಲಿ ಆಯ್ಕೆ ಮಾಡುವ ಪದ್ಧತಿ ಜಾರಿಗೊಳಿಸಿದರು. ಟ್ರಂಪ್ ಅಧ್ಯಕ್ಷರಾದ ಕೂಡಲೇ ‘ಒಬಾಮ ಕೇರ್’ ಆರೋಗ್ಯ ಯೋಜನೆಯನ್ನು ರದ್ದುಪಡಿಸಿದರು, ಆದರೂ ಶುಲ್ಕವನ್ನು ಮಾತ್ರ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಿಸಿದರು. 2020ರ ಸಾಲಿನ ಅರ್ಜಿ ಆಹ್ವಾನ ಪ್ರಕ್ರಿಯೆ ಮುಗಿದಿದೆ. ಕೋಟ್ಯಂತರ ಡಾಲರ್ ಖಜಾನೆಗೆ ಸೇರಿದೆ. ಈ ಹಂತದಲ್ಲಿ ವೀಸಾ ಪ್ರಕ್ರಿಯೆಯನ್ನು ‘ತಾತ್ಕಾಲಿಕ ತಡೆಹಿಡಿಯಲಾಗಿದೆ’! ಈ ನಿರ್ಬಂಧಗಳು ವೈದ್ಯಕೀಯ ಕ್ಷೇತ್ರದ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಅನ್ವಯಿಸುವುದಿಲ್ಲವಂತೆ, ಹೇಗಿದೆ ಕರಾಮತ್ತು? ಅವರು ಈಗಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಬರುವುದೂ ಇಲ್ಲ, ಅದು ಬೇರೆ ವಿಷಯ. ಇದೆಲ್ಲ ಏಕೆಂದರೆ, ಇದೇ ನವೆಂಬರ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿದೆ. ಕರೊನಾ ನಿರ್ವಹಣೆ

    ಯಲ್ಲಿನ ಅಸಮರ್ಪಕತೆಯಿಂದ ಕುಸಿದಿರುವ ಜನಪ್ರಿಯತೆಯನ್ನು ಸರಿದೂಗಿಸಲು ‘ಸ್ಥಳೀಯರಿಗೆ ಉದ್ಯೋಗ’ ಎಂಬ ಘೊಷಣೆಯೊಂದಿಗೆ ಈ ಆದೇಶ ಹೊರಡಿಸಿ ದ್ದಾರೆ. ಅದು ಡಿಸೆಂಬರ್ ತನಕ ಮಾತ್ರ. ಅಷ್ಟರಲ್ಲಿ ಚುನಾವಣೆ ಮುಗಿಯುತ್ತದೆ. ಸಿಕ್ಕಿದರೆ ಹಣ್ಣು, ಹೋದರೆ ಒಂದು ಕಲ್ಲು ತಾನೇ?

    ಸ್ವಿಸ್​ ಬ್ಯಾಂಕ್​ನಲ್ಲೆಷ್ಟಿದೆ ಭಾರತದ ಹಣ?: ಏನಂತಿದೆ ಹೊಸ ಲೆಕ್ಕಾಚಾರ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts