More

    ಜನಮತ: ಕಳಂಕಿತರನ್ನು ರಾಜಕಾರಣದಿಂದ ದೂರವಿಡಿ

    ಜನಮತ: ಕಳಂಕಿತರನ್ನು ರಾಜಕಾರಣದಿಂದ ದೂರವಿಡಿಕಳೆದೆರಡು ದಶಕಗಳಲ್ಲಿ ದೇಶದ ರಾಜಕಾರಣದಲ್ಲಿ ಕಳಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆಘಾತಕಾರಿ. 2004ರಲ್ಲಿ ಸಂಸತ್ತಿಗೆ ಆಯ್ಕೆಯಾದವರ ಪೈಕಿ ಶೇಕಡ 24ರಷ್ಟು ಸಂಸದರು ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದರು. 2019ರ ಸಂಸತ್ತಿಗೆ ಈ ಸಂಖ್ಯೆ ಶೇ.43ಕ್ಕೇರಿದೆ. ಇವರಲ್ಲಿ ಶೇ.29 ಸಂಸದರು ಅಪಹರಣ, ಅತ್ಯಾಚಾರ, ಮತ್ತು ಕೊಲೆಗಳಂತಹ ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿದ್ದಾರೆ.

    ಸುಪ್ರೀಂ ಕೋರ್ಟ್ ಕೂಡ ರಾಜಕಾರಣದಲ್ಲಿ ಹೆಚ್ಚುತ್ತಿರುವ ಅಪರಾಧೀಕರಣದ ಬಗ್ಗೆ ಕಳವಳ ವ್ಯಕ್ತ ಪಡಿಸಿದೆ. ಕ್ರಿಮಿನಲ್ ಹಿನ್ನೆಲೆ ಉಳ್ಳವರೆಂದು ಗೊತ್ತಿದ್ದರೂ ಅವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದ್ದೇಕೆ ಎಂದು ಪ್ರಶ್ನಿಸಿದೆ.

    ಎಲ್ಲ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳಲ್ಲಿ ಕಳಂಕಿತರಿದ್ದಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜನಬಲಕ್ಕಿಂತ ಹಣಬಲ ಮತ್ತು ಭುಜಬಲ ಉಳ್ಳವರಿಗೆ ಪ್ರಾಮುಖ್ಯ ನೀಡುತ್ತಿರುವುದೇ ಇಂತಹ ಆತಂಕಕಾರಿ ಬೆಳವಣಿಗೆಗೆ ಕಾರಣ. ಈಗ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಗಳಿಗನುಸಾರ ರಾಜಕೀಯ ಪಕ್ಷಗಳು ಮಾಹಿತಿ ನೀಡದಿದ್ದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳು ಪ್ರಜಾಸತ್ತೆ ಉಳಿಸುವ ಸಲುವಾಗಿ ಸುಪ್ರೀಂ ನಿರ್ದೇಶನಗಳನ್ನು ಪಾಲಿಸಿ ಕಳಂಕಿತರು ರಾಜಕಾರಣಕ್ಕೆ ಬರದಂತೆ ತಡೆಯಬೇಕು.

    | ಪಂಪಾಪತಿ ಹಿರೇಮಠ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts