More

    ಚುನಾವಣಾ ರಾಜಕಾರಣದೆಡೆ ನಿರಾಸಕ್ತಿ

    ಚಿತ್ರದುರ್ಗ: ಭ್ರಷ್ಟ ರಾಜಕೀಯ ವ್ಯವಸ್ಥೆ ಕಣ್ಣಿಗೆ ಬೀಳುತ್ತಲಿದ್ದು, ಈ ಕ್ಷೇತ್ರದಲ್ಲಿ ಮುಂದುವರಿಯದೆ ಇರಲು ಬಯಸಿರುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

    ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ರಾಜಕಾರಣ ಮಾಡಲು ಈ ಕ್ಷೇತ್ರ ಪ್ರವೇಶಿಸಲಿಲ್ಲ. ಆದರೆ, ಭ್ರಷ್ಟ ವ್ಯವಸ್ಥೆಯಿಂದ ಮನಸ್ಸಿಗೆ ನೋವಾಗಿದ್ದು, ಈ ಕಾರಣಕ್ಕೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಪೇಕ್ಷಿಸುವುದಿಲ್ಲ ಎಂದರು.

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದು, 350ಕ್ಕಿಂತ ಹೆಚ್ಚು ಸ್ಥಾನ ಜಯಗಳಿಸುವ ವಿಶ್ವಾಸವಿದೆ. ಈ ಪೈಕಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯೊಂದಿಗೆ 28 ಒಳಗೊಂಡಿರುತ್ತದೆ. ಇದಕ್ಕಾಗಿ ಕಾರ್ಯಕರ್ತರು ಈಗಾಗಲೇ ಸಜ್ಜಾಗಿದ್ದಾರೆ ಎಂದು ತಿಳಿಸಿದರು.

    ಲೋಕಸಭೆ, ವಿಧಾನಸಭೆಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತನ್ನದೇ ಆದ ಗೌರವ, ಸಂಪ್ರದಾಯ, ಪಾವಿತ್ರ್ಯ ಇದೆ. ಸದನ ನಡೆಯುವ ವೇಳೆ ಸಂಸದರು, ಶಾಸಕರು ಯಾವಾಗ ಹೇಗೆ ಮಾತನಾಡಬೇಕೆಂಬ ಜವಾಬ್ದಾರಿ ಇರುತ್ತದೆ. ಶಿಷ್ಟಾಚಾರ ಉಲ್ಲಂಘಿಸಿದ ಕಾರಣ ಸದನದ ಪರಮಾಧಿಕಾರ ಹೊಂದಿರುವ ಸಭಾಪತಿ ಶಿಸ್ತು ಕ್ರಮ ಕೈಗೊಂಡಿದ್ದಾರೆ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ನ ಅನುಭವಿ ನಾಯಕರಿಗೆ ಇದು ತಿಳಿದಿರುವ ವಿಚಾರವೆಂದು ಸಿಎಂ ಸೇರಿ ಅನೇಕ ಕೈ ನಾಯಕರ ಪ್ರಜಾಪ್ರಭುತ್ವ ಕಗ್ಗೊಲೆ ಎಂಬ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.

    ತಾತ್ಸಾರ, ನಿರ್ಲಕ್ಷ್ಯ ಮನೋಭಾವದಿಂದಲೇ ಇಬ್ಬರು ಪ್ರಧಾನಿಗಳನ್ನ್ನು ನಾವು ಕಳೆದುಕೊಂಡಿದ್ದೇವೆ. ನನಗೆ ಯಾವ ಭದ್ರತೆ ಅಗತ್ಯವಿಲ್ಲ. ಆದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ರಕ್ಷಣೆ 148 ಕೋಟಿ ಜನರದ್ದಾಗಿದೆ. ಹೀಗಾಗಿ ಎಲ್ಲಿಗೆ ಹೋದರೂ ಬಿಗಿ ಭದ್ರತೆ ಅಗತ್ಯವಿದ್ದು, ಪಿಎಂ ಕುರಿತು ಅನುಭವಿ ರಾಜಕಾರಣಿಗಳಿಂದ ತಿರಸ್ಕಾರದ ಮಾತು ಬರಬಾರದು ಎಂದರು.

    ಅಭಿವೃದ್ಧಿಯ ಕನಸೊತ್ತು ಬಂದೆ. ಚಿತ್ರದುರ್ಗದಲ್ಲಿ ವಿಶ್ವವಿದ್ಯಾಲಯ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಉದ್ದೇಶಕ್ಕೆ ನನಗೆ ಈ ಭಾಗದಲ್ಲಿ ಸೂಕ್ತ ಬೆಂಬಲ ದೊರೆಯಲಿಲ್ಲ. ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ ಸೇರಿ ಅಭಿವೃದ್ಧಿ ಕೆಲಸಗಳಾಗಿವೆ. ಆದರೆ, ಕ್ಷೇತ್ರವೂ ಕಳಶದ ಮುಕುಟದಂತೆ ಹೊಳೆಯಬೇಕೆಂಬ ಮಹದಾಸೆ ನುಚ್ಚು ನೂರಾಗಿದೆ ಎಂದು ಬೇಸರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts