More

    ರಾಷ್ಟ್ರೀಯ ಸ್ಪರ್ಧೆಗೆ ಪೂರಕವಾಗಿ ಕ್ರೀಡಾಂಗಣ ಅಣಿಗೊಳಿಸಿ – ಸಂಸದ ಸಿದ್ದೇಶ್ವರ ಸೂಚನೆ – ಕ್ರೀಡಾಂಗಣ ಕಾಮಗಾರಿ ಪರಿಶೀಲನೆ

    ದಾವಣಗೆರೆ: ಸ್ಮಾರ್ಟ್‌ಸಿಟಿ ಅನುದಾನದಲ್ಲಿ ನಗರದ ಡಿ.ಸಿ.ಎಂ.ಟೌನ್‌ಶಿಪ್‌ನಲ್ಲಿ 6.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ಪರ್ಧೆಗೆ ಪೂರಕವಾದ ಸೌಲಭ್ಯ ಒದಗಿಸಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

    ನಿರ್ಮಾಣ ಹಂತದ ಒಳಾಂಗಣ ಕ್ರೀಡಾಂಗಣವನ್ನು ಸೋಮವಾರ ವೀಕ್ಷಣೆ ಮಾಡಿ ಮಾತನಾಡಿ, ಇಲ್ಲಿ ತರಬೇತುದಾರರಿಗೆ ಅತ್ಯುತ್ತಮ ತರಬೇತಿ ನೀಡುವ ಕೇಂದ್ರವನ್ನಾಗಿಸುವ ಉದ್ದೇಶ ಹೊಂದಲಾಗಿತ್ತು. ಇದೀಗ ಅತ್ಯುನ್ನತ ದರ್ಜೆಯ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ ಎಂದರು.
    ಕ್ರೀಡಾಂಗಣದ ಉತ್ತರ ಭಾಗದಲ್ಲಿ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯ ಹೆಚ್ಚಿಸಲು ಅವಕಾಶ ಕಲ್ಪಿಸಿಕೊಳ್ಳಬೇಕೆಂದು ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳಿಗೆ ಸಲಹೆ ನೀಡಿದರು. ನಾಲ್ಕು ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಬಾಸ್ಕೆಟ್‌ಬಾಲ್ ಅಂಕಣವನ್ನು ನಿರ್ಮಿಸುವ ಉದ್ದೇಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
    ಒಳಾಂಗಣ ಕ್ರೀಡಾಂಗಣಕ್ಕೆ ಬರುವ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ಅಭಿವೃದ್ಧಿಪಡಿಸುವಂತೆ ಸಂಸದರು ಹೇಳಿದರು. ಪಾಲಿಕೆ ವಿರೋಧ ಪಕ್ಷದ ನಾಯಕ ಕೆ.ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಟಿ.ವೀರೇಶ್, ಸದಸ್ಯ ಕೆ.ಎಂ.ವೀರೇಶ್, ಜಯಪ್ರಕಾಶ್, ಗಣೇಶಪ್ಪ, ರಮೇಶ್, ಸುರೇಶ್ ಗಂಡಗಾಳೆ ಇತರರಿದ್ದರು.

    ಕೋಟ್..
    ತಾಂತ್ರಿಕ ಕಾರಣಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. 2024ರ ಜನವರಿ ಅಂತ್ಯಕ್ಕೆ ಕ್ರೀಡಾಂಗಣ ಬಳಕೆಗೆ ಲಭ್ಯವಾಗಿಸಲು ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
    ವೀರೇಶ್‌ಕುಮಾರ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts