More

    ಜನಮತ | ರೈಲ್ವೆ ನಿಲ್ದಾಣ ಫಲಕದಲ್ಲಿನ ಪ್ರಮಾದ ಸರಿಪಡಿಸಿ…

    ಸಂಗೊಳ್ಳಿ ರಾಯಣ್ಣ ಕನ್ನಡಿಗರ ಮನೆ ಮಾತಾಗಿದ್ದು, ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿದ್ದಾನೆ. ಈ ಸ್ವಾತಂತ್ರ್ಯ ಸೇನಾನಿಯ ಗೌರವಾರ್ಥ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ (ಕೆ.ಎಸ್.ಆರ್. ಬೆಂಗಳೂರು) ಹೆಸರು ಇಟ್ಟಿರುವುದು ಸೂಕ್ತವೇ. ವರ್ಷದ ಹಿಂದೆ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾಗ ಮುಖ್ಯದ್ವಾರದ ಮೇಲೆ ಸಂಗೊಳ್ಳಿ ರಾಯಣ್ಣನ ಹೆಸರು ನೋಡಿ ಹೆಮ್ಮೆಪಟ್ಟಿದ್ದೆ. ಮರುಕ್ಷಣದಲ್ಲೇ ತುಂಬ ನೋವಾಯಿತು. ಏಕೆಂದರೆ, ಹಿಂದಿ ನಾಮಫಲಕದಲ್ಲಿ ‘ಸಂಗೊಳ್ಳಿ ರಾಯಣ್ಣ’ ಎಂದು ಬರೆಯುವ ಬದಲು ‘ಸಂಗೊಳ್ಳಿ ರಾಯಾಣ್ಣ’ ಎಂದು ತಪ್ಪಾಗಿ ಬರೆದಿದ್ದಾರೆ. ತಕ್ಷಣವೇ ಬೆಂಗಳೂರಿನ ರೈಲ್ವೆ ವಿಭಾಗೀಯ ಮುಖ್ಯಸ್ಥರ ಕಚೇರಿಗೆ ಹೋಗಿ ಅದನ್ನು ಸರಿಪಡಿಸಲು ಮನವಿ ಮಾಡಿದ್ದೆ. ಅವರು ಸರಿಪಡಿಸುವುದಾಗಿ ಭರವಸೆ ನೀಡಿದರು. ಆದರೆ ಇತ್ತೀಚೆಗೆ ಮತ್ತೆ ಬೆಂಗಳೂರಿಗೆ ಹೋದಾಗ ಆ ಬೋರ್ಡ್ ಯಥಾಸ್ಥಿತಿಯಲ್ಲಿತ್ತು (ಹಿಂದಿಯಲ್ಲಿ ‘ಸಂಗೊಳ್ಳಿ ರಾಯಾಣ್ಣ’).

    ರೈಲ್ವೆ ನಿಲ್ದಾಣಕ್ಕೆ ದಿನಾಲೂ ಸಾವಿರಾರು ಕನ್ನಡಿಗರು, ಬೇರೆ ಬೇರೆ ರಾಜ್ಯದ ಸಹಸ್ರಾರು ಜನರು ಬರುತ್ತಾರೆ. ಅವರೂ ರಾಯಣ್ಣನ ಹೆಸರನ್ನು ತಪ್ಪಾಗಿ ಓದುವಂತಾಗಿದೆ. ರೈಲ್ವೆ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ತಿದ್ದುಪಡಿ ಮಾಡಬೇಕು. ವಿಶಾಲಹೃದಯದ ಕನ್ನಡಿಗರ ನೋವನ್ನು ರೈಲ್ವೆ ಇಲಾಖೆ ಅರ್ಥ ಮಾಡಿಕೊಳ್ಳಬೇಕು. ಸದಾ ಹಿಂದಿ ಹೇರಿಕೆ ಮಾಡುತ್ತ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವ ರೈಲ್ವೆ ಇಲಾಖೆ ಹಿಂದಿಯಲ್ಲೇ ತಪ್ಪು ಬರೆದದ್ದು ಅಕ್ಷಮ್ಯ ಅಲ್ಲವೇ?

    | ಆತ್ಮಾನಂದ ಗೌರೋಜಿ ಧಾರವಾಡ

    ಮಲತಾಯಿಯನ್ನೇ ರೇಪ್​ ಮಾಡಿದ ಕಾಮುಕ ಮಗ! ವಿಚಾರ ಹೊರಬರದಿರುವಂತೆ ನೋಡಿಕೋ ಎಂದ ಕುಟುಂಬಸ್ಥರು!

    20 ಮಂದಿ ಬರಬೇಕಾದ ಮದುವೆಗೆ ಬಂದದ್ದು 10 ಸಾವಿರ! ಈಗ ಈ ಕುತೂಹಲದ ಮದುವೆಯದ್ದೇ ಚರ್ಚೆ

    VIDEO: ಶೂಟಿಂಗ್​ ವೇಳೆ ನಟನನ್ನು ಎಳೆದೊಯ್ದ ಟಿಲ್ಲರ್​- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts