More

    ಜಮಖಂಡಿ: ಶಬರಿಮಲೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೇರಳ ಸರ್ಕಾರಕ್ಕೆ ಒತ್ತಾಯಿಸಿ ನಗರದ ಮಿನಿ ವಿಧಾನಸೌಧದಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು, ಮುಖಂಡರು ಎಸಿ ಕಚೇರಿ ಗ್ರೇಡ್-2 ತಹಸೀಲ್ದಾರ್ ಎಸ್.ಎಂ. ಚಲವಾದಿ ಅವರಿಗೆ ಮನವಿ ಸಲ್ಲಿಸಿದರು.

    ಕೋವಿಡ್ ರೋಗದ ನೆಪ ಮಾಡಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ನಿಷೇಧ ಮಾಡಿದ್ದರಿಂದ ಕೋಟ್ಯಂತರ ಭಕ್ತರಿಗೆ ಅನ್ಯಾಯವಾಗಿದೆ. ದೇಶದ ಎಲ್ಲ ದೇವಸ್ಥಾನ ಪುಣ್ಯಕ್ಷೇತ್ರಗಳು ಮಹಿಳೆಯರಿಗೆ ಮುಕ್ತವಾಗಿವೆ. ಆದರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಮಾತ್ರ ನಿರ್ಬಂಧಿಸಿದ್ದು, ಏಕೆ ಎಂದು ಪ್ರಶ್ನಿಸಿದ್ದಾರೆ. ಕೇರಳದ ಸರ್ಕಾರ ನಾಸ್ತಿಕವಾಗಿದ್ದು, ನಮ್ಮ ಬೇಡಿಕೆ ಈಡೇರಿಸಿ ಅಯ್ಯಪ್ಪಸ್ವಾಮಿ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸದೆ ಹೋದರೆ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾಧ್ಯಕ್ಷ ಆನಂದ ಜಂಬಗಿಮಠ, ಜಿಲ್ಲಾ ಉಪಾಧ್ಯಕ್ಷ ಗಣಪತಿ ಮನಗೂಳಿ, ತಾಲೂಕು ಅಧ್ಯಕ್ಷ ಮಹೇಶ ಕೆಬ್ಬಾನಿ, ತಾಲೂಕು ಉಪಾಧ್ಯಕ್ಷ ಹೀರಾ ಜಾಧವ, ನಗರ ಘಟಕ ಅಧ್ಯಕ್ಷ ಅರುಣ ಬೋಳೆ, ತಮ್ಮನಿ ತಳವಾರ, ಮಂಜುನಾಥ ಕಾಗವಾಡ, ಶ್ರೀಶೈಲ ಬಡಿಗೇರ, ಪರಶುರಾಮ ಬಿಸನಾಳ, ಶಂಕರ ಲೇಲೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts