ಚೆನ್ನೈ: ವಿಶ್ವದಾದ್ಯಂತ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದ್ದಲ್ಲದೆ, ಹಲವು ದಾಖಲೆಗಳನ್ನು ಬರೆದಿರುವ ನಟ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ಇದೀಗ ಮತ್ತೊಂದು ದಾಖಲೆಯನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ಈ ಚಿತ್ರವು ಅತ್ಯಧಿಕ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ) ಅನ್ನು ಪಡೆದುಕೊಂಡಿದ್ದು, ಇದು ಕಲೈಂಜರ್ ಟಿವಿಯ ಇತ್ತೀಚಿನ ವರ್ಷದ ಅತ್ಯಧಿಕ ರೇಟಿಂಗ್ ಎಂದು ಹೇಳಲಾಗಿದೆ.
ಜೈ ಭೀಮ್ ಚಿತ್ರವು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ನಲ್ಲಿ 4945.54 ಇಪ್ರೆಷೆನ್ಸ್ (ನಗರ ಮತ್ತು ಗ್ರಾಮೀಣ)ನೊಂದಿಗೆ 6.15 ಟೆಲಿವಿಷನ್ ರೇಟಿಂಗ್ ಪಡೆದುಕೊಂಡಿದೆ.
ಈ ಚಿತ್ರವನ್ನು ಟಿಜೆ ಜ್ಞಾನವೇಲ್ ನಿರ್ದೇಶನ ಮಾಡಿದ್ದು, 2021ರ ನವೆಂಬರ್ 2ರಂದು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಸುಮಾರು ದಿನಗಳ ಬಳಿಕ 2022ರ ಜನವರಿ 15ರಂದು ಸಂಜೆ 6.30ಕ್ಕೆ ಕಲೈಂಜರ್ ಟಿವಿಯಲ್ಲಿ ಜೈ ಭೀಮ್ ಚಿತ್ರ ಪ್ರೀಮಿಯರ್ ಆಗಿದೆ. ಅಮೇಜಾನ್ ಪ್ರೈಮ್ ಹೊರತಾಗಿಯೂ ಹೊರತಾಗಿಯೂ ಚಿತ್ರ ಟೆಲಿವಿಷನ್ನಲ್ಲಿ ಇಷ್ಟೊಂದು ಪ್ರಮಾಣದ ರೇಟಿಂಗ್ ಗಳಿಸಿರುವುದು ಹೊಸ ದಾಖಲೆಯಾಗಿದೆ.
ಜೈ ಭೀಮ್ ಚಿತ್ರ ಸಾಕಷ್ಟು ಮನ್ನಣೆ ಗಳಿಸಿದೆ. ಐಎಂಡಿಬಿ ರೇಟಿಂಗ್ನಲ್ಲಿ ಮೊದಲ ಸ್ಥಾನ ಗಳಿಸಿರುವುದಲ್ಲದೆ, ಆಸ್ಕರ್ ಅಕಾಡೆಮಿ ಅವಾರ್ಡ್ಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಚಿತ್ರ ಕಾಣಿಸಿಕೊಂಡಿದೆ. ಅಲ್ಲದೆ, ಆಸ್ಕರ್ ಪ್ರಶಸ್ತಿಯ ಸುತ್ತಿಗೂ ಈ ಚಿತ್ರ ಆಯ್ಕೆಯಾಗಿದೆ. ಇದಿಷ್ಟೇ ಇಲ್ಲದೆ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳು ಕೂಡ ಈ ಚಿತ್ರಕ್ಕೆ ಒಲಿದು ಬಂದಿದೆ. (ಏಜೆನ್ಸೀಸ್)
#JaiBhim world television premiere fetched 6.15 TVR with 4945.54 impressions. [Urban + Rural]
HIGHEST for Kalaignar TV in recent years.
— Manobala Vijayabalan (@ManobalaV) January 28, 2022
ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ರೊಮಾನ್ಸ್ ಪ್ರಕರಣ: ಸೇವೆಯಿಂದ ಮುಖ್ಯಶಿಕ್ಷಕ ಖಾಯಂ ವಜಾ
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ ಆದೇಶ ತಡೆಹಿಡಿದ ಸರ್ಕಾರ
ಸುತ್ತಿಗೆಯಿಂದ ಹೊಡೆದು ಗಂಡನನ್ನು ಕೊಲೆಗೈದ ಮಹಿಳೆಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸರು!