ಪಡಿತರ ಧಾನ್ಯಕ್ಕಾಗಿ ಫಲಾನುಭವಿಗಳ ಅಲೆದಾಟ

ಜಗಳೂರು: ತಾಲೂಕಿನ ದೇವಿಕೆರೆ ಗ್ರಾಮದ ಪಡಿತರ ವಿತರಕರು ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ ಎಂದು ಆರೋಪಿಸಿ ಶೆಟ್ಟಿಗೊಂಡನಹಳ್ಳಿ ಗ್ರಾಮಸ್ಥರು ತಹಸೀಲ್ದಾರ್ ಅರುಣ್ ಕಾರಗಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ತಾಲೂಕು ಕಚೇರಿಗೆ ಆಗಮಿಸಿದ ಶೆಟ್ಟಿಗೊಂಡನಹಳ್ಳಿ ಗ್ರಾಮಸ್ಥರು ಪಡಿತರ ವಿತರಕರ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ 250ಕ್ಕೂ ಅಧಿಕ ಕುಟುಂಬಗಳಿದ್ದು, ಇದರಲ್ಲಿ 180 ಪಡಿತರ ಚೀಟಿ ಹೊಂದಿವೆ. ಬಹುತೇಕ ಕುಟುಂಬಗಳು ಕೃಷಿ, ಕೂಲಿಕಾರರು ಇದ್ದಾರೆ. ಸರ್ಕಾರದಿಂದ ಉಚಿತವಾಗಿ ಸಿಗುವ ಪಡಿತರ ಆಹಾರ ಧಾನ್ಯಗಳಿಂದ ತಿಂಗಳವರೆಗೂ ಜೀವನ ಸಾಗುತ್ತಿದೆ. ಆದರೆ, ರೇಷನ್ ಕೊಡುವುದರಲ್ಲಿಯೂ ಬಡವರಿಗೆ ಅನ್ಯಾಯ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ನಮ್ಮೂರಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲ. ಸಮೀಪದ ದೇವಿಕೆರೆ ಗ್ರಾಮದ ವಿಎಸ್‌ಎಸ್‌ಎನ್‌ನಲ್ಲಿ ಪಡಿತರ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ತಿಂಗಳ ಆರಂಭದಲ್ಲೇ ಪಡಿತರ ಧಾನ್ಯ ಬರುತ್ತದೆ. ಆದರೆ, ಪಡಿತರ ವಿತರಕ ತಿಂಗಳ ಕೊನೆವರೆಗೂ ನಾಳೆ ಬನ್ನಿ ಎಂದು ಸಬೂಬು ಹೇಳಿ ದಿನ ದೂಡುತ್ತಾನೆ.

ತಿಂಗಳ ಕೊನೆಯಲ್ಲಿ ರೇಷನ್ ಖಾಲಿಯಾಗಿದೆ. ಮುಂದಿನ ತಿಂಗಳು ಕೊಡುವುದಾಗಿ ಹೇಳಿ ವಾಪಸ್ ಕಳುಹಿಸುತ್ತಾರೆ. ಇದರಿಂದ ಅಕ್ಕಿ, ಗೋಧಿ ಸರಿಯಾಗಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ತಹಸೀಲ್ದಾರ್ ಬಳಿ ಅಹವಾಲು ತೋಡಿಕೊಂಡರು.

ಪ್ರತಿ ತಿಂಗಳು ದೇವಿಕೆರೆಗೆ ಹೋಗಿ ರೇಷನ್ ತರಲು ತೊಂದರೆ ಆಗುತ್ತದೆ. ಆದ್ದರಿಂದ ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಆರಂಭಿಸಿ ಬಡವರಿಗೆ ಸಹಾಯ ಮಾಡಬೇಕು. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಗ್ರಾಮದ ಮುಖಂಡ ಜೆಸಿಬಿ ರಾಜಪ್ಪ ಎಚ್ಚರಿಕೆ ನೀಡಿದರು.

ಪಡಿತರ ಮಾಹಿತಿ ವರದಿ ಸಲ್ಲಿಸಲು ಸೂಚನೆ: ಸರ್ಕಾರದಿಂದ ವಿತರಿಸುವ ಪಡಿತರ ಆಹಾರ ಧಾನ್ಯವನ್ನು ಬಡವರಿಗೆ ವಿತರಿಸದೆ ವಂಚನೆ ಮಾಡುತ್ತಿರುವುದು ಸರಿಯಲ್ಲ. ಗ್ರಾಮಸ್ಥರಿಗೆ ಎಷ್ಟು ತಿಂಗಳು ವಿತರಿಸಿಲ್ಲ. ಗೋದಾಮಿನಲ್ಲಿ ಎಷ್ಟು ದಾಸ್ತಾನು ಇದೆ. ಆಹಾರ ಇಲಾಖೆಯಿಂದ ಎಷ್ಟು ಖರೀದಿಸಿದೆ ಎಂಬ ಸಂಪೂರ್ಣ ಮಾಹಿತಿ ಪಡೆದು ವರದಿ ಸಲ್ಲಿಸಬೇಕು. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಂಡು ಪರವಾನಗಿ ರದ್ದುಪಡಿಸುವಂತೆ ತಹಸೀಲ್ದಾರ್ ಅವರು ಆಹಾರ ಇಲಾಖೆ ಅಧಿಕಾರಿ ಪ್ರಕಾಶ್ ಅರುಣ್ ಕಾರಗಿ ಅವರಿಗೆ ಸೂಚನೆ ನೀಡಿದರು.
ನಂತರ ತಹಸೀಲ್ದಾರ್ ಮಾತನಾಡಿ, ನಿಮಗೆ ಯಾವುದೇ ತೊಂದರೆಯಾಗದಂತೆ ರೇಷನ್ ವಿತರಿಸಲು ಕ್ರಮ ಕೈಗೊಳ್ಳುತ್ತೇನೆ. ಸಾಧ್ಯವಾದರೆ

ಗ್ರಾಮದಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆಯಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರಾದ ಪ್ರಭು, ಬೋರೇಶ್, ನಾಗರಾಜ್, ಮಧು, ಸಂತೋಷ್, ಅಂಜಿನಪ್ಪ, ಪ್ರೇಮಕ್ಕ, ಶಾಂತಮ್ಮ, ಗೀತಮ್ಮ, ಚೌಡಮ್ಮ, ಚಂದ್ರಮ್ಮ, ಅಂಜಿನಮ್ಮ, ಗಿರಿಜಮ್ಮ ಮತ್ತಿತರಿದ್ದರು.

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…