More

    ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಅಳಿವಿಲ್ಲ

    ಜಗಳೂರು: ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಅಳಿವಿಲ್ಲ. ಅದನ್ನು ಬೆಳೆಸಲು ಕನ್ನಡಿಗರು ಒಂದಾಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಸ್.ಕೊಟ್ರೇಶ್ ಉಪ್ಪಾರ್ ಹೇಳಿದರು.

    ಕನ್ನಡ ಸಾಹಿತ್ಯ ವೇದಿಕೆಯಿಂದ ಇಲ್ಲಿನ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಘಟಕದ ಉದ್ಘಾಟನೆ, ಪ್ರಶಸ್ತಿ ಪ್ರಧಾನ ಮತ್ತು ಶಿಕ್ಷಕಿ ಕೆ.ಇಂದ್ರಮ್ಮ ಅವರ ’ಬಾನಯಾನ’, ಎಸ್.ಇನಾಯತ್ ಪಾಷಾ ಅವರ ‘ನೆಲ ಮುಗಿಲು’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

    ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಕನ್ನಡಿಗರು ನಾಡು, ನುಡಿಗಾಗಿ ಬದುಕುತ್ತಿದ್ದಾರೆ. ಅಂತವರನ್ನು ಗುರುತಿಸಿ ಒಗ್ಗೂಡಿಸುವ ಕೆಲಸವನ್ನು ವೇದಿಕೆ ಮಾಡುತ್ತಿದೆ ಎಂದರು.

    ಲೇಖಕಿ ಡಾ.ಎಚ್.ಕೆ. ಹಸೀನಾ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನಗಳು ದೊರಕಿವೆ. 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮ ಸೌಭಾಗ್ಯ. ಕನ್ನಡಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ನಾಯಕರನ್ನು ಸ್ಮರಿಸಬೇಕು ಎಂದು ಹೇಳಿದರು.
    ಕೇಂದ್ರ ಸಮಿತಿಯ ಕಾರ್ಯದರ್ಶಿ ದಿವಾಕರ್ ನಾರಾಯಣ್ ಮಾತನಾಡಿ, ಇಮಾಂ ಸಾಹೇಬರು ಹುಟ್ಟಿ, ಬೆಳೆದಿದ್ದು ಜಗಳೂರಿನಲ್ಲಿಯಾದರೂ ಅವರ ಹೆಸರು ರಾಜ್ಯದಲ್ಲಿ ಪಸರಿಸಿದೆ. ಅವರು ನೀಡಿದ ಕೊಡುಗೆ ಅಪಾರ ಎಂದು ಸ್ಮರಿಸಿದರು.

    ಮಹಾಲಿಂಗರಂಗ ಪ್ರಶಸ್ತಿ ಪುರಸ್ಕೃತರಾದ ಅಣ್ಣಪ್ಪ ಜಡ್ಡಿನಮನೆ, ಮಹಮ್ಮದ್ ಅಲಿ, ಅಭಿಜ್ಞಾ ಪಿ.ಎಂ.ಗೌಡ, ಶಿವಾನಂದ ಮಳವಂಕಿ, ಡಿ.ಸಿ.ಮಲ್ಲಿಕಾರ್ಜುನ, ಕರುಣಾಕರ್, ಬಿ.ಕೆ.ಸತೀಶ್, ರಾಧಾ ಅಪರಂಜಿ, ಕಾಶೀನಾಥ್, ಸುಜಾತ ಅವರನ್ನು ಗೌರವಿಸಲಾಯಿತು. ಸಾಹಿತಿ ಪ್ರೊ.ಎಲ್.ಎಂ.ಪ್ರಭಾಕರ್ ಲಕ್ಕೋಳ್, ಕೆ.ಜಿ.ಹಾಲಪ್ಪ, ಇಂದ್ರಮ್ಮ ಗುತ್ತಿದುರ್ಗ, ಡಿ.ಶಬ್ರಿನ್ ಮಹಮ್ಮದ್ ಅಲಿ ಇದ್ದರು.

    ಜಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಣ್ಣಪ್ಪ ಜಡ್ಡಿನಮನೆ, ಮಹಮ್ಮದ್ ಅಲಿ, ಅಭಿಜ್ಞಾ ಪಿ.ಎಂ.ಗೌಡ, ಶಿವಾನಂದ ಮಳವಂಕಿ ಅವರನ್ನು ಸನ್ಮಾನಿಸಲಾಯಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts