More

    ಅಕ್ರಮ ಮರಳು ದಂಧೆ ತಡೆಗೆ ಆಗ್ರಹ

    ಜಗಳೂರು: ತಾಲೂಕಿನಲ್ಲಿ ಲಾಕ್‌ಡೌನ್ ಮಧ್ಯೆಯೂ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

    ಹಿಂದುಳಿದ ಮತ್ತು ಬರಪೀಡಿತ ತಾಲೂಕಾಗಿರುವ ಜಗಳೂರು ಮಳೆಯ ಕೊರತೆಯಿಂದ ಅಂತರ್ಜಲ ಸಂಪೂರ್ಣ ಬತ್ತಿ ಹೋಗಿದೆ. ಈಗಾಗಲೇ ಕೆರೆ, ಹಳ್ಳ, ಕೊಳ್ಳ ತೊರೆಗಳಲ್ಲಿ ನೀರು ಇಲ್ಲದೇ ಬರಿದಾಗಿವೆ. ಇಂತಹ ಸಂದರ್ಭದಲ್ಲಿ ಮರಳು ದಂಧೆಕೋರರು ರಾತ್ರೋರಾತ್ರಿ ಜೆಸಿಬಿ ಯಂತ್ರಗಳ ಸಹಾಯದಿಂದ ಮಿನಿ ಲಾರಿಗಳಲ್ಲಿ ಮರಳು ತುಂಬಿ ಮಾರುತ್ತಿದ್ದಾರೆ ಎಂದು ಆರೋಪಿಸಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಮನೆ, ಶೌಚಗೃಹ ಸೇರಿ ಇತರೆ ವೈಯಕ್ತಿಕ ಕೆಲಸಗಳಿಗೆ ಮರಳು ತರಲು ಹೋದ ಬಡವರ ಮೇಲೆ ದರ್ಪ ತೋರಿಸುವ ಅರಣ್ಯ ಇಲಾಖೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭೂಮಿಯ ಒಡಲನ್ನು ಖಾಲಿ ಮಾಡುತ್ತಿರುವ ಕಳ್ಳರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ.

    ಇಲ್ಲಿಂದ ಕೇವಲ ಮೂರ‌್ನಾಲ್ಕು ಸಾವಿರಕ್ಕೆ ಒಂದು ಟ್ರ್ಯಾಕ್ಟರ್ ತೆಗೆದುಕೊಂಡು ಬೆಂಗಳೂರು, ತುಮಕೂರು, ಚಿತ್ರದುರ್ಗ, ಕೂಡ್ಲಿಗಿ ಕಡೆ ಹತ್ತಾರು ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಮರಳು ಗಣಿಗಾರಿಕೆ ತಡೆಯದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಕರವೇ ತಾಲೂಕಾಧ್ಯಕ್ಷ ವೈ.ಮಹಾಂತೇಶ್, ಮಹಿಳಾ ಅಧ್ಯಕ್ಷೆ ರೇಖಾ ಶಂಭುಲಿಂಗಪ್ಪ, ಕಾರ್ಯದರ್ಶಿ ಎಸ್.ಟಿ.ವಾಣಿ, ಪದಾಧಿಕಾರಿಗಳಾದ ಸುರೇಶ್, ರಕೀಬ್, ತಿಪ್ಪೇಸ್ವಾಮಿ, ಶಶಿಕುಮಾರ್, ಎಸ್.ಮೌಲಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts