More

    ವಾಸನೆಯಿಂದ ಕರೊನಾ ಪರೀಕ್ಷೆ ಮಾಡಲು ಬರ್ತಿವೆ ಶ್ವಾನಗಳು! ಇನ್ನು ನಾಯಿಗಳದ್ದೇ ಕಾರುಬಾರು…

    ವಾಷಿಂಗ್ಟನ್ : ವಿಶ್ವದೆಲ್ಲೆಡೆ ಈಗ ಕರೊನಾದ್ದೇ ಮಾತು. ಸೋಂಕಿತರ ಸಂಖ್ಯೆಯಂತೂ ಕೆಲವೆಡೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಆದರೆ ಈ ಪರಿಯಲ್ಲಿ ಏರುತ್ತಿರುವ ಸೋಂಕಿತರನ್ನು ಪರೀಕ್ಷೆ ಮಾಡಲು ಸರಿಯಾದ ಕಿಟ್​ಗಳು, ವೈದ್ಯಕೀಯ ಸೌಲಭ್ಯಗಳು ಇಲ್ಲ ಎನ್ನುವುದೂ ಸತ್ಯದ ಮಾತೇ.

    ಸೋಂಕಿತರನ್ನು ಪರೀಕ್ಷೆ ಹಚ್ಚಲು ಕಷ್ಟವಾಗುತ್ತಿರುವುದನ್ನು ಮನಗಂಡಿರುವ ಕೆಲ ಸಂಶೋಧಕರು ಇದೀಗ ನಾಯಿಗೆ ತರಬೇತಿ ನೀಡುತ್ತಿದ್ದಾರೆ! ಕರೊನಾ ಸೋಂಕಿತರ ಸೇವೆಯಲ್ಲಿ ಹಲವಾರು ಕಡೆಗಳಲ್ಲಿ ರೋಬಾಟ್​ಗಳನ್ನು ರೂಪಿಸಿದ್ದಾಯಿತು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಶೋಧಕರು ನಾಯಿಯ ಮೊರೆ ಹೋಗಿದ್ದಾರೆ.

    ಲಂಡನ್​ ಮತ್ತು ಅಮೆರಿಕದಲ್ಲಿ ಈಗಾಗಲೇ ನಾಯಿಗಳಿಗೆ ತರಬೇತಿ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಲ್ಯಾಬ್ರಡಾರ್ ರಿಟ್ರೈವರ್‌ ತಳಿಯ ಎಂಟು ನಾಯಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಕರೊನಾ ವೈರಸ್‌ಗೆ ಸಂಬಂಧಿಸಿದ ವಾಸನೆಯನ್ನು ಗ್ರಹಿಸುವ ಮೂಲಕ ಇವು ಸೋಂಕಿತರನ್ನು ಪರೀಕ್ಷಿಸಬಹುದೇ ಎಂಬ ಬಗ್ಗೆ ಸಂಶೋಧನೆ ನಡೆಯಲಾಗುತ್ತಿದೆ. ಈ ಕುರಿತಂತೆ ನಾಯಿಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ.

    ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಫಿಕಲ್ ಮೆಡಿಸಿನ್‌ನ ಸಂಶೋಧಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಮನುಷ್ಯರಲ್ಲಿ ಮಲೇರಿಯಾ ಸೋಂಕನ್ನು ಗುರುತಿಸುವಲ್ಲಿ ಈಗಾಗಲೇ ಕೆಲವು ತಳಿಗಳ ನಾಯಿಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈಗ ಕರೊನಾ ಸೋಂಕಿನ ಗುರುತಿಸುವಿಕೆಯ ಪ್ರಯತ್ನಕ್ಕೆ ಕೈಹಾಕಲಾಗಿದೆ. ಅಷ್ಟೇ ಅಲ್ಲದೇ, ವಾಸನೆಯ ಮೂಲಕ ಎಂಥೆಂಥ ಕಳ್ಳರನ್ನೂ ಹಿಡಿಯಬಲ್ಲ ಚಾಕಚಕ್ಯತೆ ಕೆಲವು ತಳಿಗಳ ಶ್ವಾನಗಳಿಗೆ ಇವೆ. ಅಷ್ಟೇ ಅಲ್ಲದೇ, ವಿಮಾನ ನಿಲ್ದಾಣಗಳಲ್ಲಿ ಸ್ಫೋಟಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ಇಲ್ಲವೇ ಎಲ್ಲಿಯಾದರೂ ಸ್ಪೋಟಕ ವಸ್ತುಗಳನ್ನು ಇಟ್ಟಿದ್ದರೆ ಅವುಗಳನ್ನು ಸುಲಭದಲ್ಲಿ ಕೆಲವು ನಾಯಿಗಳು ಗುರುತಿಸುತ್ತವೆ. ಅಷ್ಟೇ ಅಲ್ಲದೇ, ಮಿಲಿಟರಿಗಳಲ್ಲಿಯೂ ಇದು ಬುದ್ಧಿವಂತಿಕೆ ತೋರಿಸುತ್ತಿವೆ.

    ನಾಯಿಗಳು ಕರೊನಾ ಸೋಂಕಿತರನ್ನು ವಾಸನೆ ಗ್ರಹಿಸುವ ಮೂಲಕ ಗುರುತಿಸುವಲ್ಲಿ ಯಶಸ್ವಿಯಾದರೆ, ಅದನ್ನು ಮುಂದಿನ ದಿನಗಳಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ, ಆಸ್ಪತ್ರೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಯೋಜನೆಗೊಳಿಸಲು ಈಗಾಗಲೇ ತಯಾರಿ ನಡೆಸಲಾಗಿದ್ದು, ಈ ಕುರಿತಂತೆ ಅಮೆರಿಕ ಮತ್ತು ಬ್ರಿಟನ್​ ಸಂಶೋಧಕರು ಚರ್ಚೆ ನಡೆಸುತ್ತಿದ್ದಾರೆ. ಇದು ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸ ಸಂಶೋಧಕರಿಗಿದೆ. ಭಾರತದಲ್ಲಿಯೂ ನಾಯಿಗಳ ಸೇವೆ ಬರುವ ದಿನಗಳು ದೂರವಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts