More

    ರಾಷ್ಟ್ರ ರಕ್ಷಣೆಗೆ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಾದ ಸಶಸ್ತ್ರ ಪಡೆಗಳ ಮನೋಸ್ಥೈರ್ಯ ಅನನ್ಯ : ಐಟಿಬಿಪಿ ಮುಖ್ಯಸ್ಥ ದೇಸ್ವಾಲ್

    ನವದೆಹಲಿ: ಭಾರತದ ಸಶಸ್ತ್ರ ಪಡೆ ಸೇನಾನಿಗಳ ಸ್ಥೈರ್ಯವು ಅನನ್ಯವಾದುದು ಮತ್ತು ಈ ಹಿಂದೆನಂತೆಯೇ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಲು ಸೈನಿಕರು ಸಿದ್ಧರಾಗಿದ್ದಾರೆ ಎಂದು ಐಟಿಬಿಪಿ ಮುಖ್ಯಸ್ಥ ಎಸ್ ಎಸ್ ದೇಸ್ವಾಲ್ ಭಾನುವಾರ ಹೇಳಿದ್ದಾರೆ.
    ದೆಹಲಿಯಲ್ಲಿ 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳ COVID ಆರೈಕೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಭಾರತೀಯ ಸೇನೆ, ವಾಯುಪಡೆ ಅಥವಾ ಐಟಿಬಿಪಿ, ಯಾವುದೇ ಪಡೆಯಾಗಿರಲಿ ಅವರ ಸ್ಥೈರ್ಯ ಅನನ್ಯವಾದುದು. ಅವರು ಗಡಿ ಭದ್ರತೆಗೆ ತ್ಯಾಗಮಯಿಯಾಗಿದ್ದಾರೆ ಎಂದು ಅವರು ತಿಳಿಸಿದರು.  ಲಡಾಖ್​​ನಲ್ಲಿ ಚೀನಾದೊಂದಿಗಿನ ಸಂಘರ್ಷ ಮುಂದುವರಿಯುತ್ತಿದ್ದಂತೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

    ಇದನ್ನೂ ಓದಿ: ಗುರುಪೂರ್ಣಿಮೆ ಶುಭಾಶಯ ಕೋರಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿಯವರು ಲಡಾಖ್‌ಗೆ ಭೇಟಿ ನೀಡಿದ್ದು ಮತ್ತು ನಿಮುದಲ್ಲಿನ ಸೈನಿಕರನ್ನುದ್ದೇಶಿಸಿ ಅವರು ಮಾತನಾಡಿದ್ದು, ಗಡಿಯಲ್ಲಿರುವ ಎಲ್ಲಾ ಪಡೆಗಳ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಹೇಳಿದರು.
    “ಸಂಪೂರ್ಣ ರಾಷ್ಟ್ರೀಯ ನಾಯಕತ್ವ, ರಾಜಕೀಯ ನಾಯಕತ್ವ ಮತ್ತು ಪಡೆಗಳು ಮತ್ತು ಜವಾನರು ರಾಷ್ಟ್ರಕ್ಕೆ ಸಮರ್ಪಿತರಾಗಿದ್ದಾರೆ ಎಂದರು.
    ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಗುಡ್ಡಗಾಡು-ಯುದ್ಧ ತರಬೇತಿ ಪಡೆದ ಪಡೆಯ ನೋಡಲ್ ಏಜೆನ್ಸಿಯಾಗಿರುವ ಕೇಂದ್ರವನ್ನು ಉದ್ಘಾಟಿಸಿದರು.

    ಇದನ್ನೂ ಓದಿ : ಜಗತ್ತಿನ ಅತಿದೊಡ್ಡ ಕೋವಿಡ್ 19 ಆರೈಕೆ ಕೇಂದ್ರ ಲೋಕಾರ್ಪಣೆ


    ದಕ್ಷಿಣ ದೆಹಲಿಯ ಚತ್ತರಪುರ ಪ್ರದೇಶದಲ್ಲಿ ಪ್ರಾರಂಭವಾಗಿರುವ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಮುನ್ನಡೆಸಲು ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ಮತ್ತು ರಾಧಾ ಸೋಮಿ ಬಿಯಾಸ್ ಅವರ ಧಾರ್ಮಿಕ ಪಂಥದ ಸ್ವಯಂಸೇವಕರು ಕೈಜೋಡಿಸಿದ್ದಾರೆ.
    ಸಶಸ್ತ್ರ ಪಡೆಗಳ ಸಿಬ್ಬಂದಿ ಈ ಹಿಂದೆ ಕರ್ತವ್ಯನಿರತರಾಗಿದ್ದಾಗಲೂ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಮತ್ತು ಭವಿಷ್ಯದಲ್ಲಿಯೂ ಅವರು ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಅರ್ಪಿಸಲು ಸಿದ್ಧರಾಗಿದ್ದಾರೆ ಎಂದು ದೇಸ್ವಾಲ್ ಹೇಳಿದರು.
    ಕೇಂದ್ರದ ಬಗ್ಗೆ ಮಾತನಾಡಿ, ಛವಾಲಾ ಪ್ರದೇಶದಲ್ಲಿ ಐಟಿಬಿಪಿ ರಚಿಸಿದ ದೇಶದ ಮೊದಲ ಕರೊನಾವೈರಸ್ ಕ್ವಾರಂಟೈನ್ ಕೇಂದ್ರ ಮುನ್ನಡೆಸಿದ ಅನುಭವ ಹಾಗೂ ಗ್ರೇಟರ್ ನೋಯ್ಡಾದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ರೆಫರೆಲ್ ಆಸ್ಪತ್ರೆಯಲ್ಲಿ ವೈರಸ್ ಸೋಂಕಿತ ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ಅನುಭವ ಹೊಂದಿರುವುದರಿಂದ ವೈದ್ಯರ ತಂಡ ಮತ್ತು ಅರೆವೈದ್ಯಕೀಯ ತಂಡವು ಹೆಚ್ಚಿನ ಸಂಖ್ಯೆಯ ರೋಗಿಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು. 

    ಲಡಾಖ್‌ ಬಿಕ್ಕಟ್ಟು: ಕುತೂಹಲ ಮೂಡಿಸಿರುವ ಪ್ರಧಾನಿ-ರಾಷ್ಡ್ರಪತಿ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts