More

    ಇಟಗಿಯಲ್ಲಿ ಸೋಂಕು ನಿವಾರಣೆಗೆ ಫಾಗಿಂಗ್

    ಖಾನಾಪುರ: ಪಟ್ಟಣ ಸೇರಿ ತಾಲೂಕಿನಾದ್ಯಂತ ಜನತಾ ಕರ್ಫ್ಯೂ ಕರೆಗೆ ಭಾನುವಾರ ಉತ್ತಮ ಬೆಂಬಲ ದೊರೆತಿದೆ. ತಾಲೂಕಿನಾದ್ಯಂತ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ತೆರೆಯಲಿಲ್ಲ. ವ್ಯಾಪಾರ-ವಹಿವಾಟು ಹಾಗೂ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

    ಅಟೋ, ಟ್ಯಾಕ್ಸಿ ಸೇರಿ ಖಾಸಗಿ ವಾಹನಗಳ ಸಂಚಾರ ವಿರಳವಾಗಿತ್ತು. ಶನಿವಾರ ರಾತ್ರಿ ತಿರುಪತಿ ಮತ್ತು ಬೆಂಗಳೂರಿನಿಂದ ಹೊರಟಿದ್ದ ಹರಿಪ್ರಿಯಾ ಮತ್ತು ರಾಣಿ ಚನ್ನಮ್ಮ ರೈಲುಗಳು ಭಾನುವಾರ ಬೆಳಗ್ಗೆ ಪಟ್ಟಣದ ಮೂಲಕ ಮಿರಜ್‌ನತ್ತ ಚಲಿಸಿದ್ದು ಹೊರತುಪಡಿಸಿದರೆ ಪಟ್ಟಣದ ರೈಲು ನಿಲ್ದಾಣದ ಮೂಲಕ ಸಂಚರಿಸುವ ಇನ್ನುಳಿದ ಪ್ರಯಾಣಿಕರು ಪರದಾಡಿದರು.

    ಭಾನುವಾರ ಪಟ್ಟಣದ ವಾರದ ಸಂತೆಯ ದಿನವಾದರೂ ವ್ಯಾಪಾರಸ್ಥರು ಮತ್ತು ಗ್ರಾಹಕರು ಪೇಟೆಗೆ ಆಗಮಿಸಲಿಲ್ಲ. ತಾಲೂಕಿನ ಪಾರಿಶ್ವಾಡ, ಬೀಡಿ, ಗಂದಿಗವಾಡ, ನಂದಗಡ, ಹಲಸಿ, ಜಾಂಬೋಟಿ, ಕಣಕುಂಬಿ ಸೇರಿ ತಾಲೂಕಿನೆಲ್ಲೆಡೆ ಸಾರ್ವಜನಿಕರು ಮನೆಯಿಂದ ಹೊರಬೀಳದೆ ಬೆಂಬಲಿಸಿದರು. ತಾಲೂಕಿನ ನಾಗರಿಕರು ತಮ್ಮ ಮನೆಗಳ ಮುಂಭಾಗದಲ್ಲಿ, ಛಾವಣಿ ಮತ್ತು ಬೀದಿಗಳಲ್ಲಿ ನಿಂತು ಚಪ್ಪಾಳೆ, ಜಾಗಟೆ, ಘಂಟೆ ಬಾರಿಸುವ ಮೂಲಕ ವೈದ್ಯರು, ಪೊಲೀಸರು ಮತ್ತು ತುರ್ತು ಸಂದರ್ಭದಲ್ಲಿ ಕರ್ತವ್ಯನಿರ್ವಹಿಸಿದವರಿಗೆ ಅಭಿನಂದನೆ ಸಲ್ಲಿಸಿದರು.

    ಇಟಗಿ ವರದಿ: ಇಟಗಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಜನಸಂಚಾರ ವಿರಳವಾಗಿತ್ತು. ವ್ಯಾಪಾರ-ವಹಿವಾಟು ಸ್ಥಗಿತವಾಗಿತ್ತು. ಇಟಗಿ ಗ್ರಾಮ ಪಂಚಾಯಿತಿ ವತಿಯಿಂದ ಇಟಗಿ, ಬೇಡರಹಟ್ಟಿ ಮತ್ತು ಬೋಗೂರ ಗ್ರಾಮಗಳಲ್ಲಿ ಫಾಗಿಂಗ್ ಮಷಿನ್ ಮೂಲಕ ಕ್ರಿಮಿನಾಶಕ ಸಿಂಪಡಿಸಿ ಸ್ವಚ್ಛಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts