More

    ವಿವಾದಗಳ ಸುಳಿಯಲ್ಲಿ ಮಹುವಾ ಮೊಯಿತ್ರಾ: ಕೊನೆಗೂ ಮೌನ ಮುರಿದ ಮಮತಾ ಬ್ಯಾನರ್ಜಿ

    ಕೋಲ್ಕತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮತ್ತು ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಸುತ್ತ ಎದ್ದಿರುವ ವಿವಾದಗಳ ಬಗ್ಗೆ ಟಿಎಂಸಿ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊನೆಗೂ ಮೌನ ಮುರಿದಿದ್ದಾರೆ.

    ಕೋಲ್ಕತದಲ್ಲಿ ಗುರುವಾರ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯೆ ಸ್ಥಾನದಿಂದ ಉಚ್ಚಾಟಿಸಲು ಯೋಜಿಸಲಾಗಿದೆ. ಆದರೆ, ಇದು 2024ರ ಲೋಕಸಭಾ ಚುನಾವಣೆಗೂ ಮುನ್ನ ಮಹುವಾಗೆ ನೆರವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ತಮ್ಮ ಪ್ರತಿಸ್ಪರ್ಧಿ ನಾಯಕರನ್ನು ಗುರಿಯಾಗಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಸರ್ಕಾರ ಇನ್ನೂ ಮೂರು ತಿಂಗಳ ಬಳಿಕ ಇರುವುದಿಲ್ಲ ಎಂದು ಕಿಡಿಕಾರಿದರು.

    ತಮ್ಮ ಹೇಳಿಕೆ ಮೂಲಕ ಮಹುವಾಗೆ, ಮಮತಾ ಅವರು ಬೆಂಬಲ ಸೂಚಿಸಿದಾದರೂ ಮಹುವಾ ಸುತ್ತ ಸುಳಿದಾಡುತ್ತಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್​ ಹಿರಾನಂದನಿ ಅವರಿಂದ ಲಂಚ ಪಡೆದಿದ್ದಾರೆ ಎಂದು ಆರೋಪ ಮಹುವಾ ಮೇಲಿದೆ. ಅಲ್ಲದೆ, ಸಂಸತ್ತಿನ ಲಾಗಿನ್​ ಐಡಿಯನ್ನು ಹಿರಾನಂದನಿ ಜತೆ ಹಂಚಿಕೊಂಡಿರುವ ಆರೋಪವೂ ಇದೆ. ಲಂಚ ಪ್ರಕರಣವನ್ನು ತನಿಖೆ ಮಾಡಿದ ಲೋಕಸಭಾ ನೈತಿಕ ಸಮಿತಿ, ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಬೇಕು ಎಂದು ಶಿಫಾರಸು ಮಾಡಿದೆ.

    ನೈತಿಕ ಸಮಿತಿಯು ಈ ಸಂಪೂರ್ಣ ವಿಷಯದ ಬಗ್ಗೆ ಸುಮಾರು 500 ಪುಟಗಳ ವಿವರವಾದ ವರದಿಯನ್ನು ಸಿದ್ಧಪಡಿಸಿದೆ. ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಮಿತಿಯು ಅವರ ನಡವಳಿಕೆಯನ್ನು ಆಕ್ಷೇಪಾರ್ಹ ಮತ್ತು ಅನೈತಿಕ ಎಂದು ಬಣ್ಣಿಸಿದೆ. ಇದನ್ನು ಆಧರಿಸಿ ಸಮಿತಿಯು ತನ್ನ ವರದಿಯಲ್ಲಿ ಮಹುವಾ ಅವರ ಸಂಸತ್ ಸದಸ್ಯತ್ವ ರದ್ದತಿಗೆ ಶಿಫಾರಸು ಮಾಡಿದೆ. ತನ್ನ ಕರಡು ವರದಿಯಲ್ಲಿ, ಸಮಿತಿಯು ಸಂಪೂರ್ಣ ವಿಷಯದ ಬಗ್ಗೆ ಸಮಯೋಚಿತ, ಸಂಪೂರ್ಣ, ಕಾನೂನು ಮತ್ತು ಸಾಂಸ್ಥಿಕ ತನಿಖೆಯನ್ನು ಭಾರತ ಸರ್ಕಾರಕ್ಕೆ ಶಿಫಾರಸು ಮಾಡಿದೆ ಮತ್ತು ಮಹುವಾ ಮೊಯಿತ್ರಾ ಮತ್ತು ದರ್ಶನ್ ಹಿರಾನಂದನಿ ನಡುವಿನ ಹಣದ ವಹಿವಾಟಿನ ಬಗ್ಗೆ ಸಮಗ್ರ ತನಿಖೆಗೆ ಶಿಫಾರಸು ಮಾಡಿದೆ. (ಏಜೆನ್ಸೀಸ್​)

    ಅರೆ ಮಹುವಾ.. ಯೇ ಕ್ಯಾ ಹುವಾ?: ಮೊಯಿತ್ರಾ ಮುಂದಿನ ದಾರಿ ಯಾವುದು?

    ಮಹುವಾ ಮೊಯಿತ್ರಾ ಲೋಕಸಭಾ ಸದಸ್ಯತ್ವ ಕಳೆದುಕೊಳ್ಳುತ್ತಾರಾ, 500 ಪುಟಗಳ ವರದಿಯಲ್ಲಿ ಎಥಿಕ್ಸ್ ಕಮಿಟಿ ಏನು ಬರೆದಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts