More

    ಐಟಿ ರಿಟರ್ನ್ಸ್ ಸಲ್ಲಿಕೆ ವರ್ಷಾಂತ್ಯದವರೆಗೆ ವಿಸ್ತರಣೆ

    ನವದೆಹಲಿ: ವೈಯಕ್ತಿಕ ತೆರಿಗೆದಾರರು 2019-20ನೇ ಸಾಲಿನ ಆದಾಯ ತೆರಿಗೆ ವಿವರ (ಐಟಿಆರ್) ಸಲ್ಲಿಸುವ ಅವಧಿಯನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ಪ್ರಕಟಿಸಿದೆ. ಲೆಕ್ಕ ಪರಿಶೋಧನೆ ಅಗತ್ಯವಿರುವ ತೆರಿಗೆದಾರರು ಈ ಅವಧಿಯ ರಿಟರ್ನ್ಸ್ ಸಲ್ಲಿಕೆ ಗಡುವನ್ನು 2021ರ ಜನವರಿ 31ರ ವರೆಗೆ ವಿಸ್ತರಿಸಲಾಗಿದೆ.

    ಐಟಿಆರ್ ಸಲ್ಲಿಕೆ ದಿನಾಂಕವನ್ನು ಸರ್ಕಾರ ಮೇ ತಿಂಗಳಲ್ಲಿ ಜುಲೈ 31ರಿಂದ ನವೆಂಬರ್ 30ರ ವರೆಗೆ ವಿಸ್ತರಿಸಿತ್ತು. ಕರೊನಾ ಲಾಕ್​ಡೌನ್​ನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಈಗ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಅಂತಾರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶೀಯ ವ್ಯವಾರಗಳಿಗೆ ಸಂಬಂಧಿಸಿದ ವಿವರ ಸಲ್ಲಿಕೆ ಗಡುವನ್ನು ಕೂಡ ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ. ಒಂದು ಲಕ್ಷ ರೂಪಾಯಿವರೆಗಿನ ಸ್ವಯಂ-ಲೆಕ್ಕಾಚಾರ ತೆರಿಗೆ ರಿಟರ್ನ್ಸ್​ಗಳನ್ನು ಕೂಡ ಜನವರಿ 31ರ ವರೆಗೆ ಸಲ್ಲಿಸಬಹುದಾಗಿದೆ ಎಂದು ಮಂಡಳಿ ಹೇಳಿದೆ.

    ಜಿಎಸ್​ಟಿ ವಿವರ: ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್​ಟಿ) ಸಂಬಂಧಿಸಿದಂತೆ, 2018-19ನೇ ಸಾಲಿನ ವಾರ್ಷಿಕ ವಿವರ (ಫಾಮ್ರ್ ಜಿಎಸ್​ಟಿಆರ್-9/ಜಿಎಸ್​ಟಿಆರ್-9ಸಿ) ಸಲ್ಲಿಕೆ ಗಡುವನ್ನುಅಕ್ಟೋಬರ್ 31ರಿಂದ ಈ ವರ್ಷ ಡಿಸೆಂಬರ್ 31ರವರೆಗೆ ವಿಸ್ತರಿಸಿರುವುದಾಗಿ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್​ನ ಕೇಂದ್ರೀಯ ಮಂಡಳಿ (ಸಿಬಿಐಸಿ) ತಿಳಿಸಿದೆ. (ಏಜೆನ್ಸೀಸ್)

    ಕಿಸಾನ್ ಸೂರ್ಯೋದಯ ಲೋಕಾರ್ಪಣೆಗೊಳಿಸಿದ್ರು ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts