More

    ವಿಮಾನದಾಗೂ ಮಳೆ ಬರುತ್ತಾ ಸ್ವಾಮಿ…? ಹೀಂಗಾದರೆ ಬರುತ್ತೆ ಸ್ವಾಮಿ…!

    ನವದೆಹಲಿ: ಆಕಾಶದಲ್ಲಿ ಹಾರಾಡುತ್ತಿರುವಾಗ ವಿಮಾನದೊಳಗೂ ಮಳೆ ಬರಲು ಸಾಧ್ಯವೇ? ಸಾಧ್ಯ ಎನ್ನುತ್ತಾರೆ ರಷ್ಯಾದ ಈ ವಿಮಾನದ ಸಿಬ್ಬಂದಿ.
    ಬ್ಲ್ಯಾಕ್​ಸೀ ನೋಡಲು ತೆರಳುತ್ತಿದ್ದ ಪ್ರವಾಸಿಗರು ಇದ್ದ ರಷ್ಯಾದ ವಿಮಾನದೊಳಗೆ ಹಠಾತ್ತನೆ ಮಳೆ ಸುರಿಯಲು ಆರಂಭಿಸಿತು. ಪುಣ್ಯಕ್ಕೆ ಜನರು ತಮ್ಮ ಕ್ಯಾಬಿನ್​ ಲೆಗೇಜ್​ನೊಂದಿಗೆ ಛತ್ರಿಗಳನ್ನು ತಂದಿದ್ದರು. ಆ ಛತ್ರಿಗಳನ್ನು ವಿಮಾನದೊಳಗೆ ಬಿಡಿಸಿ, ಮಳೆ ನೀರಿನಿಂದ ರಕ್ಷಣೆ ಪಡೆದರು.

    ರೋಷಿಯಾ ಏರ್​ಲೈನ್ಸ್​ನ ವಿಮಾನದಲ್ಲಿ ನಡೆದ ಈ ಘಟನೆಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಮಾನದೊಳಗಿನ ಮಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಸ್ಮಶಾನದಲ್ಲಿದ್ದ ಪಿಪಿಇ ಕಿಟ್ ಧರಿಸಿ ಊರೆಲ್ಲಾ ಓಡಾಟ-ಬೇಸ್ತು ಬಿದ್ದ ಜನ

    ಖಾಬರೋವ್​ಸ್ಕ್​ ಮತ್ತು ಸೋಚಿ ನಡುವೆ ಸಂಚರಿಸುವ ರೋಷಿಯಾ ಏರ್​ಲೈನ್ಸ್​ ವಿಮಾನ ಎಂದಿನಂತೆ ಬ್ಲ್ಯಾಕ್​ಸೀಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು. ಅದರ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಏನೋ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ ವಿಮಾನದೊಳಗೆ ಎಸಿಯ ನೀರು ಮಳೆಯಂತೆ ತೊಟ್ಟಿಕ್ಕಲಾರಂಭಿಸಿತ್ತು.

    ಸೆಂಟ್ರಲ್​ ಎಸಿ ವ್ಯವಸ್ಥೆ ಇರುವಲ್ಲಿ ಎಸಿ ಯಂತ್ರಗಳಿಂದ ಈ ರೀತಿ ನೀರು ತೊಟ್ಟಿಕ್ಕುವುದು ಸಾಮಾನ್ಯ ಎನ್ನಲಾಗಿದೆ. ನೀರು ಘನೀಕೃತಕೊಂಡಿದ್ದು, ಕ್ಯಾಬಿನ್​ನಲ್ಲಿನ ಬಿಸಿ ತಾಪಮಾನದ ಸಂಪರ್ಕಕ್ಕೆ ಬಂದಾಗ ಕರಗಿ ನೀರಾಗುತ್ತದೆ. ಹೀಗಾದಾಗ ಹೆಚ್ಚುವರಿ ನೀರು ವಿಮಾನದೊಳಗಿನ ಒಳಾಂಗಣ ಪ್ಯಾನೆಲ್​ಗಳ ಮೂಲಕ ತೊಟ್ಟಿಕ್ಕುತ್ತದೆ. ಹಾಗೆಂದು ಇದೇನು ಗಂಭೀರವಾದ ಸಮಸ್ಯೆಯಲ್ಲ ಎಂದು ರೋಷಿಯಾ ಏರ್​ಲೈನ್ಸ್​ನ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.

    ಕಾಲೇಜಿನಲ್ಲಿ ಮಹಿಳೆಯರಿಗೆ ಪದವಿ ಜತೆಗೆ ಪಾಸ್​ಪೋರ್ಟ್​ ಕೂಡ ಕೊಡ್ತಾರೆ…! ಎಲ್ಲಿ? ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts