More

    ಹಮಾಸ್ ಕಮಾಂಡರ್‌ನ ಆಡಿಯೋ, ಲೈವ್ ಫೂಟೇಜ್… ಗಾಜಾ ಆಸ್ಪತ್ರೆ ದಾಳಿ ಸಂಬಂಧಿಸಿದಂತೆ 5 ಪುರಾವೆಗಳನ್ನು ಪ್ರಸ್ತುತಪಡಿಸಿದ ಇಸ್ರೇಲ್

    ಇಸ್ರೇಲ್: ಗಾಜಾ ಪಟ್ಟಿಯಲ್ಲಿರುವ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ 3000 ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದರು. ಇಸ್ರೇಲ್ ತನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಪ್ರಸ್ತುತಪಡಿಸಿದ ಪುರಾವೆಗಳ ಪೈಕಿ ಅದು ಹಮಾಸ್​​​ ಉಗ್ರರ ಆಡಿಯೋ, ತಪ್ಪಾಗಿ ಉಡಾಯಿಸಿದ ರಾಕೆಟ್‌ನ ದೃಶ್ಯಗಳು ಮತ್ತು ಇತರ ವಿಡಿಯೋಗಳನ್ನು ಬಿಡುಗಡೆ ಮಾಡಿದೆ.

    ಗಾಜಾ ಪಟ್ಟಿಯಲ್ಲಿರುವ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಒಂದು ಸುತ್ತಿನ ಆರೋಪಗಳು ಮತ್ತು ಪ್ರತ್ಯಾರೋಪಗಳು ಮುಂದುವರಿದಿವೆ. ಇಸ್ರೇಲ್ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ಮಾಡಿದೆ ಎಂದು ಪ್ಯಾಲೆಸ್ತೀನ್ ಮತ್ತು ಹಮಾಸ್ ಆರೋಪಿಸಿದೆ. ಈ ದಾಳಿಯಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, ಅದೇ ಸಮಯದಲ್ಲಿ, ಪ್ಯಾಲೆಸ್ತೀನ್‌ನ ಇಸ್ಲಾಮಿಕ್ ಜಿಹಾದ್ ಉಡಾಯಿಸಿದ ರಾಕೆಟ್​​​ ತಪ್ಪಾಗಿ ಆಸ್ಪತ್ರೆಯ ಮೇಲೆ ಬಿದ್ದಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಇಸ್ರೇಲ್ ತನ್ನ ಹಕ್ಕನ್ನು ದೃಢಪಡಿಸಲು ಹಲವು ಪುರಾವೆಗಳನ್ನು ಸಹ ಪ್ರಸ್ತುತಪಡಿಸಿದೆ.

    ಆಡಿಯೋ ಬಿಡುಗಡೆ

    ಇಸ್ರೇಲ್ ತನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಪ್ರಸ್ತುತಪಡಿಸಿದ ಪುರಾವೆಗಳಲ್ಲಿ ಒಂದು ಹಮಾಸ್ ಉಗ್ರರ ಆಡಿಯೋ, ಈ ಆಡಿಯೋ ಆಸ್ಪತ್ರೆಯ ಮೇಲಿನ ದಾಳಿಯ ನಂತರದ್ದು ಎಂದು ಇಸ್ರೇಲ್ ಹೇಳಿಕೊಂಡಿದೆ. ಇದರಲ್ಲಿ ಇಬ್ಬರು ಹಮಾಸ್ ಉಗ್ರರು ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್‌ನ ರಾಕೆಟ್​​ ತಪ್ಪಾಗಿ ಆಸ್ಪತ್ರೆಯ ಮೇಲೆ ಬಿದ್ದಿದೆ ಎಂದು ಮಾತವಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇದು ಇಸ್ರೇಲ್ ರಾಕೆಟ್ ಅಲ್ಲ, ನಮ್ಮದು ಎಂದು ಹಮಾಸ್​​ ಉಗ್ರರು ತಮ್ಮತಮ್ಮಲ್ಲೇ ಹೇಳಿಕೊಳ್ಳುತ್ತಿರುವುದು ಕೇಳಿಬರುತ್ತಿದೆ.

    ಫೋಟೋಗಳು ಬಿಡುಗಡೆ 

    ಇಸ್ರೇಲಿ ವಾಯುಪಡೆ ಕೂಡ ಒಂದು ದೃಶ್ಯವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆಸ್ಪತ್ರೆ ಮೇಲಿನ ದಾಳಿಯ ಮುನ್ನ ಮತ್ತು ನಂತರದ ಚಿತ್ರವಿದೆ. ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ರಾಕೆಟ್ ಹಾರಿ ಬಿದ್ದಿದೆ ಎಂದು ಹೇಳಲಾಗಿದೆ. ಈ ರಾಕೆಟ್ ಅನ್ನು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆ ಉಡಾಯಿಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

    ಹಮಾಸ್ ಅಡಗುತಾಣಗಳ ವಿಡಿಯೋ ಬಿಡುಗಡೆ


    ಗಾಜಾ ಪಟ್ಟಿಯಲ್ಲಿರುವ ಹಮಾಸ್​​​ ನೆಲೆಗಳ ವಿಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಗಾಜಾ ಪಟ್ಟಿಯಲ್ಲಿರುವ ಜನನಿಬಿಡ ಪ್ರದೇಶಗಳಲ್ಲಿ ಹಮಾಸ್​​​ ನೆಲೆಗಳಿವೆ ಎಂದು ಹೇಳಲಾಗಿದೆ. ಇಲ್ಲಿಂದ ಇಸ್ರೇಲ್ ಮೇಲೆ ದಾಳಿ ಮಾಡಲು ರಾಕೆಟ್​​​​​ಗಳನ್ನು ಹಾರಿಸುತ್ತಿದ್ದಾರೆ. ಹಮಾಸ್​​​ ಹಾರಿಸಲ್ಪಟ್ಟ ಅನೇಕ ರಾಕೆಟ್‌ಗಳು ತನ್ನ ಭೂಪ್ರದೇಶದಲ್ಲಿ ಬೀಳುತ್ತಿರುವುದು ತನ್ನ ದೊಡ್ಡ ನಷ್ಟವಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇಷ್ಟೇ ಅಲ್ಲ, ಇಸ್ರೇಲ್ ತನ್ನ ಸ್ಥಾನಗಳಿಗೆ ಪ್ರತೀಕಾರ ತೀರಿಸಿಕೊಂಡಾಗ, ಗಾಜಾದಿಂದ ಸಾಧ್ಯವಾದಷ್ಟು ಜನರನ್ನು ಕೊಲ್ಲಬೇಕೆಂದು ಹಮಾಸ್ ಬಯಸುತ್ತದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

    ರಾಕೆಟ್ ದೃಶ್ಯಗಳ ಬಿಡುಗಡೆ


    ಇಸ್ರೇಲ್ ವಿಡಿಯೋ ತುಣುಕನ್ನೂ ಬಿಡುಗಡೆ ಮಾಡಿದೆ. ಇದೇ ರಾಕೆಟ್‌ನ ವಿಡಿಯೋ, ಇದು ಆಸ್ಪತ್ರೆಯ ಮೇಲೆ ಬಿದ್ದಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ಪ್ರಕಾರ, ಇಸ್ಲಾಮಿಕ್ ಜಿಹಾದ್ ಸಂಜೆ 6.59 ಕ್ಕೆ ರಾಕೆಟ್ ಅನ್ನು ಹಾರಿಸಲಾಯಿತು, ಅದೇ ಸಮಯದಲ್ಲಿ ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದೆ.

    ಇಸ್ರೇಲ್​​​ಗೆ ಭರವಸೆ ನೀಡಿದ ಅಮೆರಿಕ


    ಮತ್ತೊಂದೆಡೆ, ಗಾಜಾ ಆಸ್ಪತ್ರೆ ಮೇಲಿನ ದಾಳಿಯಲ್ಲಿ ಅಮೆರಿಕ ಕೂಡ ಇಸ್ರೇಲ್‌ಗೆ ಕ್ಲೀನ್ ಚಿಟ್ ನೀಡಿದೆ. ವಾಸ್ತವವಾಗಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಇಸ್ರೇಲ್​​​ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು, ಇಸ್ರೇಲ್ ಆಸ್ಪತ್ರೆಯ ಮೇಲೆ ದಾಳಿ ಮಾಡಿಲ್ಲ. ದಾಳಿಯಲ್ಲಿ ಬೇರೆಯವರ ಕೈವಾಡ ಇರುವುದು ಕಂಡು ಬರುತ್ತಿದೆ ಎಂದು ಇಸ್ರೇಲ್ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಅಷ್ಟೇ ಅಲ್ಲ, ಹಮಾಸ್​​​​ ಜನರು ನರಮೇಧ ಮಾಡಿದ್ದಾರೆ ಎಂದು ಬೈಡನ್​​​ ಹೇಳಿದ್ದಾರೆ. ಹಮಾಸ್​​ ಎಲ್ಲಾ ಪ್ಯಾಲೆಸ್ಟೈನ್ ಅನ್ನು ಪ್ರತಿನಿಧಿಸುವುದಿಲ್ಲ ಎಂದು ಗಾಜಾ ಆಸ್ಪತ್ರೆ ಮೇಲಿನ ದಾಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಹೋರಾಟ ಇಸ್ರೇಲ್‌ಗೆ ಸುಲಭವಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದೂ ಬೈಡನ್​​​ ತಿಳಿಸಿದ್ದಾರೆ.

    ನಟಿ ಊರ್ವಶಿ ರೌಟೇಲಾಗೆ ಇಮೇಲ್ ಕಳುಹಿಸಿದ ಕಳ್ಳ…ಐಫೋನ್ ಹಿಂದಿರುಗಿಸುವುದಕ್ಕೆ ಪ್ರತಿಯಾಗಿ ಇಟ್ಟ ಬೇಡಿಕೆಯೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts