More

    ಇಸ್ರೇಲ್​ನಲ್ಲಿ ತಿಂಗಳಾದರೂ ಮುಗಿಯದ ಯುದ್ಧ; ಹಮಾಸ್ ಉಗ್ರರು ರಾಕೆಟ್​​ಗಳನ್ನು ಹಾರಿಸುತ್ತಿರುವುದು ಎಲ್ಲಿಂದ ಗೊತ್ತೇ?

    ನವದೆಹಲಿ: ಇಸ್ರೇಲ್​ನಲ್ಲಿ ಹಮಾಸ್ ಉಗ್ರರ ದಾಳಿ ಆರಂಭವಾಗಿ ಇಂದಿಗೆ ಭರ್ತಿ ಒಂದು ತಿಂಗಳಾಗಿದ್ದರೂ ಅಲ್ಲಿನ ರಣಭೀಕರ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಹಮಾಸ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಕೂಡ ದಾಳಿ ನಡೆಸುತ್ತಿರುವುದರಿಂದ ಯುದ್ಧ ಇನ್ನೂ ನಡೆಯುತ್ತಲೇ ಇದ್ದು, ಇಸ್ರೇಲ್ ಅಕ್ಷರಶಃ ರಣಾಂಗಣವಾಗಿದೆ.

    ಕಳೆದ ಅ. 7ರ ಬೆಳ್ಳಂಬೆಳಗ್ಗೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್​ಗಳ ಮೂಲಕ ಭಾರಿ ದಾಳಿ ನಡೆಸಿದ್ದು, ರಣಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಅವರು ನಾಗರಿಕರನ್ನು ಗುರಿಯಾಗಿಸಿ ಗುಂಡಿಟ್ಟಿದ್ದಲ್ಲದೆ, ಹಲವರನ್ನು ಅಪಹರಿಸಿ ಒತ್ತೆ ಇರಿಕೊಂಡಿದ್ದರು. ಇನ್ನು ಹಲವರ ಮೇಲೆ ಅತ್ಯಾಚಾರ ಎಸಗಿದ್ದು, ಮಕ್ಕಳೆಂದೂ ನೋಡದೆ ಕೊಂದು ಹಾಕಿದ್ದರು.

    ಒಂದು ತಿಂಗಳ ಕಾಲ ನಡೆದ ಹಮಾಸ್ ಉಗ್ರರ ದಾಳಿಗೆ ಇದುವರೆಗೆ 1,400 ಮಂದಿ ಇಸ್ರೇಲಿಗರು ಬಲಿಯಾಗಿದ್ದಾರೆ. 242 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ. ಮಾತ್ರವಲ್ಲ, ಇಸ್ರೇಲ್​ನ ಪ್ರತಿದಾಳಿಗೆ 4 ಸಾವಿರ ಮಕ್ಕಳು ಸೇರಿದಂತೆ 10 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರು ಹತರಾಗಿದ್ದಾರೆ. ಇಷ್ಟಾದರೂ ಅಲ್ಲಿನ ದಾಳಿ-ಪ್ರತಿದಾಳಿ, ಯುದ್ಧ ಮುಗಿದಿಲ್ಲ.

    ಅದರಲ್ಲೂ ಹಮಾಸ್ ಉಗ್ರರು ಮಸೀದಿಯನ್ನೇ ರಾಕೆಟ್ ಉಡಾಯಿಸುವ ತಾಣವನ್ನಾಗಿಸಿಕೊಂಡಿದ್ದಾರೆ ಎಂಬುದನ್ನು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ. ನಾಗರಿಕರ ಮೇಲೆ ಹಿಂಸಾತ್ಮಕ ಭಯೋತ್ಪಾದಕ ಚಟುವಟಿಕೆಗೆ ಇದೂ ಒಂದು ಉದಾಹರಣೆ ಎಂದಿರುವ ಐಡಿಎಫ್​, ಯುದ್ಧ ಶುರುವಾಗಿ ತಿಂಗಳಾಗಿದೆ, ಹಮಾಸ್​ ಉಗ್ರರು ಈ ಯುದ್ಧ ಶುರು ಮಾಡಿದ್ದು, ಯುದ್ಧವಿನ್ನೂ ಮುಂದುವರಿದಿದೆ, ನಾವೂ ಹೋರಾಡಬೇಕಾಗಿದೆ, ಇದನ್ನು ಕೊನೆಯಾಗಿಸುತ್ತೇವೆ ಎಂದಿದೆ.

    ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?

    ನಾವು ಸನಾತನ ಧರ್ಮವನ್ನು ಎಂದೆಂದಿಗೂ ವಿರೋಧಿಸುತ್ತೇವೆ: ಕಾನೂನುಕ್ರಮಕ್ಕೆ ಸಿದ್ಧ ಎಂದು ಮತ್ತೆ ನಾಲಗೆ ಹರಿಬಿಟ್ಟ ಉದಯನಿಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts