More

    ಹಿಂದೂ, ಋಷಿ-ಮುನಿಗಳು ಅಶ್ಲೀಲ ಪ್ರಿಯರು ಎಂದ ನಟಿ! ಇಸ್ಕಾನ್​ನಿಂದ ದೂರು ದಾಖಲು

    ಮುಂಬೈ: ಪ್ರಾಚೀನ ಹಿಂದೂ ಸಂತರು ತಮ್ಮ ರಹಸ್ಯ ಚಟುವಟಿಕೆಗಳನ್ನು ಮರೆಮಾಡಲು ಸಂಸ್ಕೃತದಂಥ ಭಾಷೆಗಳನ್ನು ಬಳಸಿಕೊಂಡಿದ್ದಾರೆ. ಇವರು ಕಾಮಪ್ರಚೋದಕ ಪಠ್ಯಗಳನ್ನು ಬರೆಯಲು ಸಂಸ್ಕೃತ ಭಾಷೆಯ ನೆರವು ಪಡೆದಿದ್ದಾರೆ ಎಂದು ನಟಿಯೊಬ್ಬಳು ಟೀ.ವಿ ಚಾನೆಲ್​ನಲ್ಲಿ ಹೇಳಿಕೆ ನೀಡುವ ಮೂಲಕ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದಾಳೆ.

    ಶೆಮರೂ ಮನರಂಜನಾ ಚಾನೆಲ್​ನ ನಿರೂಪಕಿಯಾಗಿರುವ ಸುರ್ಲೀನ್​ ಕೌರ್​ ಕಾರ್ಯಕ್ರಮವೊಂದರಲ್ಲಿ ಈ ರೀತಿ ಹೇಳಿದ್ದಾಳೆ. ಹಿಂದೂಗಳು ಅಂತರ್ಗತವಾಗಿ ಅಶ್ಲೀಲ ಪ್ರಿಯರು ಎಂದು ಹೇಳಿರುವ ಆಕೆ, ಖಜುರಾಹೊದಲ್ಲಿನ ಶಿಲ್ಪಗಳನ್ನು ಗೇಲಿ ಮಾಡುವ ಮೂಲಕ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾಳೆ.

    ಇದನ್ನೂ ಓದಿ: ಆನ್​ಲೈನ್​ ತರಗತಿ ಆವಾಂತರ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!

    ಈಕೆ ಹಾಗೂ ಶೆಮರೂ ಮನರಂಜನಾ ಚಾನೆಲ್​ ವಿರುದ್ಧ ಇಸ್ಕಾನ್​ ಮುಂಬೈ ಪೊಲೀಸರಲ್ಲಿ ದೂರು ದಾಖಲು ಮಾಡಿದೆ. ಈ ಕಾರ್ಯಕ್ರಮ ನಡೆದು ತಿಂಗಳಾದರೂ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್​ಗಳಲ್ಲಿ ಸಾಕಷ್ಟು ಶೇರ್​ ಆಗಿದ್ದು, ಅನೇಕ ಮಂದಿ ಹಿಂದೂಗಳ ಅವಹೇಳನ ಮಾಡುತ್ತಿರುವ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಲಾಗಿದೆ.

    ಮನರಂಜನೆಯ ಹೆಸರಿನಲ್ಲಿ ಇಸ್ಕಾನ್​ ಸಂಸ್ಥೆ ಮತ್ತು ಹಿಂದೂಗಳಿಗೆ ನಿರೂಪಕಿ ಅವಮಾನ ಮಾಡಿದ್ದಾರೆ ಎಂದು ಇಸ್ಕಾನ್​ ಉಪಾಧ್ಯಕ್ಷ ಮತ್ತು ವಕ್ತಾರ ರಾಧರಮ್ ದಾಸ್ ದೂರಿದ್ದಾರೆ. ಶೆಮರೂ ಕಂಪನಿಯು ಯೂಟ್ಯೂಬ್ ಚಾನೆಲ್ ಸೇರಿದಂತೆ ವಿವಿಧ ಸಾಮಾಜಿಕ ತಾಣಗಳ ಮೂಲಕ ಈ ಮನರಂಜನಾ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದು, ಅದರಲ್ಲಿ ಹಿಂದೂ ಧರ್ಮವನ್ನು ಅತ್ಯಂತ ತಮಾಷೆಯ ರೀತಿಯಲ್ಲಿ ಬಿಂಬಿಸಲಾಗಿದೆ. ಜತೆಗೆ ಇಸ್ಕಾನ್​ ಸಂಸ್ಥೆಗೆ ಅವಹೇಳನ ಆಗುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆ. ಇದು ಆಕ್ಷೇಪಾರ್ಹವಾಗಿದೆ. ವಿಶ್ವದಾದ್ಯಂತ ಲಕ್ಷಾಂತರ ಭಕ್ತರನ್ನು ಪಡೆದಿರುವ ಇಸ್ಕಾನ್​ ಸಂಸ್ಥೆಗೆ ಇದರಿಂದ ಅಪಾರ ಹಾನಿಯುಂಟಾಗಿದೆ. ಭಕ್ತರಿಗೂ ಇದರಿಂದ ನೋವು ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

    ಮನರಂಜನೆಯ ಹೆಸರಿನಲ್ಲಿ ಹಿಂದೂಗಳನ್ನು ಅವಮಾನಿಸುತ್ತಿರುವುದು ಇದೇ ಮೊದಲೇನಲ್ಲ. ಈ ರೀತಿಯ ಘಟನೆಗಳ ಸಾಕಷ್ಟು ನಡೆದಿವೆ ಎಂಬುದನ್ನು ದೂರನಲ್ಲಿ ಉದಾಹರಣೆ ಸಹಿತ ಅವರು ವಿವರಿಸಿದ್ದಾರೆ. ನಮ್ಮ ಸನಾತನ ಧರ್ಮ,. ಋಷಿ ಮುನಿಗಳನ್ನು, ದೇವತೆಗಳನ್ನು ನಿರಂತರವಾಗಿ ಒಂದು ವರ್ಗ ಅವಮಾನಿಸುತ್ತಲೇ ಬಂದಿದೆ. ಈ ಮೂಲಕ ಸನಾತನ ಧರ್ಮದ ಅನುಯಾಯಿಗಳ ಸಹಿಷ್ಣು ಸ್ವಭಾವವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಸೋಂಕು: ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಆಸ್ಪತ್ರೆಗೆ

    ಇದರ ಜತೆ, ಟಿಕ್​ಟಾಕ್​ನಂಥ ತಾಣಗಳನ್ನು ಬಳಸಿಕೊಳ್ಳುವ ಮೂಲಕವೂ ಪಟ್ಟಭದ್ರ ಹಿತಾಸಕ್ತಿಗಳು ಭಾರತದ ಸಂಸ್ಕೃತಿಯನ್ನು ಹಾಳು ಮಾಡಲು ಮುಂದಾಗಿದೆ. ತನ್ನ ದೇಶದ ಮೇಲೆ ಯಾರೂ ದಾಳಿ ಮಾಡಬಾರದು ಎಂದು ಚೀನಾ ದೊಡ್ಡ ಗೋಡೆಯನ್ನು ಕಟ್ಟಿದೆ. ಇದು ನಮಗೂ ಪಾಠವಾಗಬೇಕಿದೆ. ಇಲ್ಲದಿದ್ದರೆ ಹೀಗೆ ದುಷ್ಟ ಶಕ್ತಿಗಳು ಭಾರತವನ್ನು ದಮನ ಮಾಡಲು ಕಾಯುತ್ತಿವೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

    ದೂರು ದಾಖಲಾಗುತ್ತಿದ್ದಂತೆಯೇ ಚಾನೆಲ್​ ಹಿಂದೂಗಳಲ್ಲಿ ಕ್ಷಮೆ ಕೋರಿದೆ. ಯಾವುದೇ ಜಾತಿ, ಧರ್ಮ, ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡಲು ಈ ರೀತಿ ಮಾಡಿಲ್ಲ. ಇದು ಮನರಂಜನಾ ಚಾನೆಲ್​ ಅಷ್ಟೆ. ಯಾರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇವೆ ಎಂದು ಚಾನೆಲ್​ ಹೇಳಿದೆ. ಜತೆಗೆ ತನ್ನ ಯೂಟ್ಯೂಬ್​ ಚಾನೆಲ್​ನಿಂದ ಈ ವೀಡಿಯೋ ತೆಗೆದು ಹಾಕಿದೆ. ಆದರೆ ಇದಾಗಲೇ ಅದು ಸಾಕಷ್ಟು ಶೇರ್​ ಕಂಡಿರುವ ಕಾರಣ, ಇನ್ನೂ ಹಿಂದೂಗಳು ಹಾಗೂ ಇಸ್ಕಾನ್​ ಮೇಲೆ ಕೆಟ್ಟ ರೀತಿಯ ಕಮೆಂಟ್​ಗಳು ಬರುತ್ತಲೇ ಇವೆ ಎಂದು ಅವರು ದೂರಿದ್ದಾರೆ.

    ‘ಭವಿಷ್ಯದ ಅಮಿತಾಭ್​’ಗೆ ಬಿರುದುಗಳ ಮಹಾಪೂರ: ಆತ್ಮಕಥೆ ಬಿಚ್ಚಿಟ್ಟು ಕಣ್ಣೀರಾದ ನಟ ಸೋನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts